This is the title of the web page
This is the title of the web page

Please assign a menu to the primary menu location under menu

Local News

ವರ್ಗಾವಣೆಗೊಂಡ ಶಿಕ್ಷಕರಿಗೆ ಸನ್ಮಾನ


ನೇಸರಗಿ : ಸಮೀಪದ ಗಜಮಿನಾಳ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾದ ಆಯ್.ಎಸ್. ಗಡದವರ ೨೦ ವರ್ಷ ಸೇವೆ ಹಾಗೂ ಜಿ.ಆಯ್. ದಾರಪ್ಪನವರ ಅವರು ೧೧ ವರ್ಷ ಸೇವೆ ಸಲ್ಲಿಸಿ ದೇಶನೂರ ಹಾಗೂ ದೇಶನೂರ ಬಂಗ್ಲೆ, ಶಾಲೆಗೆ ವರ್ಗಾವಣೆಗೊಂಡ ಪ್ರಯುಕ್ತ ಗಜಮನಾಳ ಶಾಲೆಯಲ್ಲಿ ಗುರುವಾರ ದಿ. ೧೩ ರಂದು ಇವರನ್ನು ಬೀಳ್ಕೋಟ್ಟು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಧಾನ ಗುರುಗಳಾದ ಎಮ್.ಎಲ್. ಮಾರಿಹಾಳ, ಹಣಬರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಚಿರು ವಾರಿ, ಅಡುಗೆ ಸಿಬ್ಬಂದಿಗಳು, ಅಂಗನವಾಡಿ ಶಿಕ್ಷಕಿಯರು, ಗಣ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಹಣಬರಹಟ್ಟಿ ಶಾಲೆಯಿಂದ ವರ್ಗಾವಣೆಗೊಂಡು ಗಜಮನಾಳ ಶಾಲೆಗೆ ಆಗಮಿಸಿದ ಶಿಕ್ಷಕ ಎ.ಎಸ್. ಉಳಿವಿಯವರನ್ನು ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು.
ಶಿಕ್ಷಕ ಎಸ್.ಎ. ನಲವಡೆ ಸ್ವಾಗತಿಸಿ ನಿರೂಪಿಸಿದರು. ಕೊನೆಯಲ್ಲಿ ಹಿರಿಯ ಶಿಕ್ಷಕರಾದ ಯು.ಎಸ್. ಹುಡೇದ ವಂದಿಸಿದರು.


Gadi Kannadiga

Leave a Reply