This is the title of the web page
This is the title of the web page

Please assign a menu to the primary menu location under menu

State

ಬಾರ್ಸಿಯ ಕೆಎಲ್‌ಇ ಸಿಲ್ವರ ಜ್ಯೂಬ್ಲಿ ಹೈಸ್ಕೂಲ್‌ನಲ್ಲಿ ಡಾ.ಪ್ರಭಾಕರ ಕೋರೆಯವರಿಗೆ ತುಲಾಭಾರ


ಬಾರ್ಸಿ ೧೬ : ಹಿತೈಷಿಗಳ ಹಾಗೂ ವಿದ್ಯಾರ್ಥಿಗಳ ಪ್ರೀತಿ ಹಾಗೂ ಅಭಿಮಾನಗಳಿಗೆ ಬೆಲೆಕಟ್ಟಲಾಗದು. ಹಿರಿಯರ ಪುಣ್ಯದ ಫಲವಾಗಿ ನಾನು ಜೀವನದಲ್ಲಿ ಅಪ್ರತಿಮವಾದ ಸಾಧನೆಯನ್ನು ಮಾಡಲು ಸಾಧ್ಯವಾಯಿತು. ಕೆಎಲ್‌ಇ ಸಪ್ತರ್ಷಿಗಳ ಕನಸುಗಳಿಗೆ ಪಥವಾಗಿ ಮುನ್ನಡೆಯಲು ನನಗೆ ಎಲ್ಲರೂ ಜೊತೆಯಾದರೆಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಹೇಳಿದರು. ಅವರು ಮಹಾರಾಷ್ಟ್ರದ ಬಾರ್ಸಿಯಲ್ಲಿರುವ ಕೆಎಲ್‌ಇ ಸಿಲ್ವರ ಜ್ಯೂಬ್ಲಿ ಹೈಸ್ಕೂಲಿನಲ್ಲಿ ಡಾ.ಪ್ರಭಾಕರ ಕೋರೆಯವರ ೭೫ನೆಯ ಅಮೃತ ಮಹೋತ್ಸವದ ನಿಮಿತ್ತವಾಗಿ ಸ್ಪರ್ಧಾತ್ಮಕ ಪುಸ್ತಕಗಳ ತುಲಾಭಾರವನ್ನು ನೆರವೇರಿಸಲಾಯಿತು. ಸರಳ ಸಮಾರಂಭದಲ್ಲಿ ತುಲಾಭಾರವನ್ನು ಸ್ವೀಕರಿಸಿ ಅವರು ಮಾತನಾಡಿದರು.

ಒಬ್ಬ ವ್ಯಕ್ತಿ ಸಾಧನೆಯನ್ನು ಮಾಡಬೇಕಾದರೆ ಅದರ ಹಿಂದೆ ಗುರುಹಿರಿಯರ ಆಶೀರ್ವಾದ ಹಾಗೂ ಮಾರ್ಗದರ್ಶನ ಮುಖ್ಯವಾಗಿರುತ್ತದೆ. ನನ್ನ ಬದುಕಿನಲ್ಲಿ ಹಿರಿಯರ ಆಶೀರ್ವಾದವನ್ನು ನಾನೆಂದೂ ಗೌರವಾದರಳಿಂದ ಸ್ವೀಕರಿಸುತ್ತೇನೆ. ವಿದ್ಯಾರ್ಥಿಗಳಾದ ನೀವು ಜೀವನದಲ್ಲಿ ಅಸಾಧ್ಯವಾದುದನ್ನು ಸಾಧಿಸಲು ಸಾಧ್ಯ. ಇಂದು ನಮ್ಮ ಕೆಎಲ್‌ಇ ಸಂಸ್ಥೆಯು ಉತ್ತಮವಾದ ಶಿಕ್ಷಣ-ಆರೋಗ್ಯ ಹಾಗೂ ಸಂಶೋಧನೆಗಾಗಿ ಸಾಕಷ್ಟು ಮುತುವರ್ಜಿಯನ್ನು ವಹಿಸಿ ಕಾರ್ಯವನ್ನು ನಿರ್ವಹಿಸುತ್ತಿದೆ. ಗುಣಾತ್ಮಕವಾದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಇಲ್ಲಿಯ ನೀಡಿರುವ ಎಲ್ಲ ರೀತಿಯ ಸೌಲಭ್ಯಗಳನ್ನು ಪಡೆಯುವ ಮೂಲಕ ವಿಶಿಷ್ಟವಾದ ಸಾಧನೆಯನ್ನು ಮಾಡಬೇಕು. ಭವಿಷ್ಯದಲ್ಲಿ ಸಮಾಜಕ್ಕೆ ಹಾಗೂ ದೇಶಕ್ಕೆ ಅದ್ವಿತೀಯವಾದ ಕೊಡುಗೆಯನ್ನು ನೀಡುವಂತಾಗಬೇಕೆಂದು ವಿದ್ಯಾರ್ಥಿಗಳಿಗೆ ಕರೆನೀಡಿದರು.

ಇದೇ ಸಂದರ್ಭದಲ್ಲಿ ಡಾ.ಪ್ರಭಾಕರ ಕೋರೆಯ ಹಾಗೂ ಶ್ರೀಮತಿ ಆಶಾತಾಯಿ ಕೋರೆಯವರಿಗೆ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕ ಸಿಬ್ಬಂದಿವರ್ಗದವರು ಗೌರವಿಸಿ ಸತ್ಕರಿಸಿದರು ಹಾಗೂ ವಿಶೇಷವಾಗಿ ಡಾ.ಕೋರೆಯವರಿಗೆ ಸ್ಪರ್ಧಾತ್ಮಕ ಪುಸ್ತಕಗಳ ತುಲಾಭಾರವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಕೆಎಲ್‌ಇ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಡಾ.ಪ್ರಭಾಕರ ಕೋರೆಯವರು ತುಲಾಭಾರದಲ್ಲಿ ನೀಡಲಾದ ಸ್ಪರ್ಧಾತ್ಮಕ ಪುಸ್ತಕಗಳನ್ನು ಬಾರ್ಸಿಯ ಕೆಎಲ್‌ಇ ಸಿಲ್ವರ್ ಜ್ಯುಬ್ಲಿ ಪ್ರೌಢಶಾಲೆಯ ಗ್ರಂಥಾಲಯಕ್ಕೆ ಸಮರ್ಪಿಸಿದರು.

ಸಮಾರಂಭದ ಕೊನೆಗೆ ಡಾ.ಪ್ರಭಾಕರ ಕೋರೆ ದಂಪತಿಗಳು ಹಾಗೂ ಆಡಳಿತ ಮಂಡಳಿಯ ಸದಸ್ಯರು, ಕಾರ್ಯದರ್ಶಿಗಳಾದ ಡಾ.ಬಿ.ಜಿ.ದೇಸಾಯಿ ಅವರು ಐತಿಹಾಸಿಕ ಸುಪ್ರಸಿದ್ಧ ತುಳಜಾ ಭವಾನಿ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದವನ್ನು ಪಡೆದರು.

 


Gadi Kannadiga

Leave a Reply