This is the title of the web page
This is the title of the web page

Please assign a menu to the primary menu location under menu

State

ನಿವೃತ್ತಿಗೊಂಡ ಸುರೇಶ ಉರಬಿನಹಟ್ಟಿ ದಂಪತಿಗಳಿಗೆ ಸನ್ಮಾನ


ಅಂಕಲಗಿ : ಸೇವೆಯಲ್ಲಿರುವ ಪ್ರತಿಯೊಬ್ಬರೂ ನಿವೃತ್ತಿಯಾಗಲೇಬೇಕು. ಸೇವಾವಧಿಯ ನಂತರದಲ್ಲಿ ವಿಶ್ರಾಂತಿಗೆ ಜಾರದೇ ಸಮಾಜದ ಸೇವೆಗೆ ಮುಂದಾಗಬೇಕು ಎಂದು ರಾಜ್ಯ ಕ್ರೈಡಲ್ ವ್ಯವಸ್ಥಾಪಕ ನಿರ್ದೆಶಕ, ನಿಕಟಪೂರ್ವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು.

ಬೆಳಗಾವಿಯಲ್ಲಿ ಗ್ರಂಥಪಾಲಕ ಹುದ್ದೆಯಿಂದ ನಿವೃತ್ತಿಗೊಂಡ ಸುರೇಶ ಉರಬಿನಹಟ್ಟಿ ದಂಪತಿಗಳಿಗೆ ಸನ್ಮಾನ ಮಾಡಿ ಎಂ.ಜಿ.ಹಿರೇಮಠ ಅವರು ಮಾತನಾಡಿದರು. ಸುರೇಶ ಅವರಲ್ಲಿಯ ಉತ್ಸುಕತೆ, ಕರ್ತೃತ್ವ ಶಕ್ತಿ ಇತರರಿಗೆ ಸ್ಪೂರ್ತಿಯಾಗಿದೆ ಎಂದರು. ಅವರೊಬ್ಬ ಸಾಹಿತಿಯಾಗಿ, ಕವಿಯಾಗಿ, ಗಾಯಕನಾಗಿ ಎಲ್ಲದಕ್ಕೂ ಮಿಗಿಲಾಗಿ ಶ್ರೀಮಂತ ಹೃದಯಿಯಾಗಿ ಮಾನವೀಯತೆಯ ಮೇಲ್ಪಂಕ್ತಿಯಲ್ಲಿದ್ದಾರೆ. ಅಂಥವರು ನಮ್ಮ ಸ್ನೇಹಿತರಾಗಿದ್ದು ನಮ್ಮ ಹೆಮ್ಮೆ ಎಂದರು.

ಪ್ರೊ.ಮಾರುತಿರಾವ್ ಕದಮ್ ಮಾತನಾಡಿ ಸುರೇಶ ಉರಬಿನಹಟ್ಟಿ ವೃತ್ತಿಯೊಂದಿಗೆ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡು ಆ ಕ್ಷೇತ್ರದಲ್ಲಿ ಶ್ರೀಮಂತರೆನಿಸಿದ್ದಾರೆ ಎಂದರು.

ಡಾ.ಡಿ.ಎನ್.ಮಿಸಾಳೆ ಪ್ರಾಸ್ತಾವಿಕವಾಗಿ ಮಾತನಾಡಿ ಉರಬಿನಹಟ್ಟಿ ದಂಪತಿಗಳನ್ನು ಸ್ವಾಗತಿಸಿದರಲ್ಲದೆ, ಪರಿಚಯಿಸಿದರು. ಮಲ್ಲೇಶ ರೊಟ್ಟಿ, ಪ್ರಾಚಾರ್ಯ ಉದಯಸಿಂಗ ರಾಜಪೂತ ಮಾತನಾಡಿದರಲ್ಲದೆ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯ ಶಿವಶಂಕರ ಅಬ್ಬಾಯಿ, ಜಗದೀಶ ಮಠದ, ನ್ಯಾಯವಾದಿ ರವೀಂದ್ರ ಕುಲಕರ್ಣಿ, ತನುಜಾ ಹಿರೇಮಠ, ಸುಧಾ ಮಠದ, ವಿಮಲಾ ಕುಲಕರ್ಣಿ, ಅನುಪಮಾ ಸರ್, ಸುರೇಖಾ ಮಿಸಾಳೆ, ರಾಜೇಶ್ವರಿ ಸೇರಿ ಇನ್ನಿತರರು ಉಪಸ್ಥಿತರಿದ್ದರು.


Gadi Kannadiga

Leave a Reply