World

ಕನ್ನಡ ದಿನಪತ್ರಿಕೆಗಳ ಸಂಪಾದಕರ ಸಂಘದ  ವತಿಯಿಂದ ದಿ.ಶ್ರೀ.ಮ.ನಿ.ಪ್ರ.ಅಲ್ಲಮಪ್ರಭು. ಮಹಾಸ್ವಾಮಿಯವರಿಗೆ  ಶ್ರದ್ಧಾಂಜಲಿ

WhatsApp Group Join Now
Telegram Group Join Now

ಬೆಳಗಾವಿ:೧೩-ಚಿಕ್ಕೋಡಿ ತಾಲೂಕಿನ ಚಿಂಚಣಿ
.ಶ್ರೀ.ಮ.ನಿ.ಪ್ರ.ಅಲ್ಲಮಪ್ರಭು.ಮಹಾಸ್ವಾಮಿಗಳು  ಲಿಂಗೈಕ್ಯರಾಗಿದ್ದು ಬೆಳಗಾವಿ
ಜಿಲ್ಲೆಯ ಕನ್ನಡ ದಿನಪತ್ರಿಕೆಗಳ ಸಂಪಾದಕರ ಸಂಘದ  ವತಿಯಿಂದ ಅವರಿಗೆ ಭಾವಪೂರ್ಣ
ಶೃದ್ಧಾಂಜಯನ್ನು ಅರ್ಪಿಸಲಾಗುತ್ತಿದೆ.
ಗಡಿಭಾಗದ ಕನ್ನಡದ ಕಣ್ಮಣಿ ಎಂದು ಹೆಸರು ವಾಸಿಯಾಗಿದ್ದ ಅವರು ಅಪ್ಪಟ ಕನ್ನಡ
ಪ್ರೇಮಿಯಾಗಿದ್ದರು. ನೂರಾರು ಕನ್ನಡ ಪುಸ್ತಕಗಳನ್ನು ಮುದ್ರಿಸಿ ಹಿರಿಯ ಮತ್ತು ಕಿರಿಯ
ಸಾಹಿತಿ, ಕವಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು.
ಕನ್ನಡ ರಾಜ್ಯೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಿದ್ದ ಶೃಈಗಳು ಪ್ರತಿ
ವರ್ಷ ಕನ್ನಡ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಗಡಿ ಭಾಗದಲ್ಲಿ
ನಿರಂತರವಾಗಿ ಕನ್ನಡದ ವಾತಾವರಣ ಉಳಿಯುವಂತೆ ಮಾಡಿದ್ದರು.
ಚಿಂಚಣಿಯ ಮಠವು ಕನ್ನಡದ ಮಠವೆಂದು ಮತ್ತು ಚಿಂಚಣಿ ಶ್ರೀಗಳ ಕನ್ನಡದ ಸ್ವಾಮಿಜಿ ಎಂದೇ
ಹೆಸರು ವಾಸಿಯಾಗಿದ್ದರು. ತಮ್ಮ ಮಠದ ತೇರಿಗೆ ಕನ್ನಡದ ತೇರು ಎಂದೇ ಹೆಸರಿಟ್ಟಿದ್ದ
ಶ್ರೀಗಳು ಜಾತ್ರೆಯ ಸಂದರ್ಭದಲ್ಲಿ ತೇರು ಎಳೆಯುವಾಗ ತೇರಿನಲ್ಲಿ ಕನ್ನಡದ
ಪುಸ್ತಕಗಳನ್ನಿಟ್ಟು ಕನ್ನಟ ಭಾಷೆಗೆ ವಿಶೇಷ ಗೌರವ ನೀಡುತ್ತಿದ್ದುದು ಅಷ್ಟೇ ಅಲ್ಲ
ತೇರಿಗೆ ಹೊರಭಾಗದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತರ ಫೋಟೊಗಳನ್ನು
ಹಾಕಿರುತ್ತಿದ್ದರು.
ಎರಡು ತಿಂಗಳ ಹಿಂದೆ ಬೆಳಗಾವಿ ಜಿಲ್ಲೆಯ ಕನ್ನಡ ದಿನಪತ್ರಿಕೆಗಳ ಸಂಪಾದಕರ ಸಂಘದ
ನಿಯೋಗವೊಂದು ಶ್ರೀಗಳನ್ನು ಭೇಟಿ ಮಾಡಿ ಗಡಿ ಭಾಗದಲ್ಲಿ ಕನ್ನಡ ಚಟುವಟಿಕೆ ಮತ್ತು ಗಡಿ
ಭಾಗದಲ್ಲಿ ಕನ್ನಡ ಪರವಾದ ಚಟುವಟಿಕೆಗಳಿಗೆ ಸರಕಾರದಿಂದ ಹೆಚ್ಚಿನ ಒತ್ತು ನೀಡುವ
ನಿಟ್ಟಿನಲ್ಲಿ ಗಂಟೆಗಳ ಕಾಲ ಚರ್ಚೆ ನಡೆಸಿತ್ತು.ಶ್ರೀಗಳು ಎಷ್ಟು ಬೇಗ ನಮ್ಮಿಂದ
ದೂರಾಗುತ್ತಾರೆಂದು ಯಾರೂ ಕೂಡ ಕಲ್ಪನೆ ಮಾಡಿಕೊಂಡಿರಲಿಲ್ಲ, ಈ ದುಃಖದಲ್ಲಿ ಬೆಳಗಾವಿ
ಜಿಲ್ಲೆಯ ಕನ್ನಡ ದಿನಪತ್ರಿಕೆಗಳ ಸಂಪಾದಕರ ಸಂಘದ ಎಲ್ಲ ಸದಸ್ಯರು,ಪತ್ರಕರ್ತರ
ಸಂಘಟನೆಗಳ ಎಲ್ಲ ಸದಸ್ಯರು ಪಾಲ್ಗೋಂಡಿದ್ದಾರೆ. ಮೃತರ ಆತ್ಮಕ್ಕೆ ದೇವರು
ಚಿರಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತ ಭಾವಪೂರ್ಣ ಶ್ರದ್ಧಾಂಜಲಿಯನ್ನು
ಅರ್ಪಿಸುತ್ತೇವೆ.
-ಮುರುಗೇಶ ಶಿವಪೂಜಿ.

WhatsApp Group Join Now
Telegram Group Join Now

Related Posts