This is the title of the web page
This is the title of the web page

Please assign a menu to the primary menu location under menu

Local News

ವೀರ ಜವಾನರ ಕುಟುಂಬ ಸದಸ್ಯರಿಗೆ ಸನ್ಮಾನ


ಬೆಳಗಾವಿ ೧೩ : ದಿನಾಂಕ ೧೩.೦೮.೨೦೨೨ ರಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆರವರು ಸುಭಾಷ ನಗರದ ಜವಾನ್ ಕ್ವಾಟರ್ಸನಲ್ಲಿ ಆಯೋಜಿಸಲಾದ ಸ್ವಾತಂತ್ರö್ಯಕ್ಕಾಗಿ ಬಲಿದಾನ ನೀಡಿದ ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿನ ವೀರ ಯೋಧರ ಕುಟುಂಬಸ್ಥರ ಅಭಿನಂದನೆ ಕಾರ್ಯಕ್ರಮದಲ್ಲಿ ಭಾÀಗವಹಿಸಿದ ಅವರು ನಾಡಿನ ಜನತೆಗೆ ಹಾಗೂ ಕ್ಷೇತ್ರದ ಜನತೆಗೆ ಸ್ವಾತಂತ್ರö್ಯ ಅಮೃತ ಮಹೋತ್ಸವದ ಶುಭಾಷಯಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರು ದೇಶಕ್ಕಾಗಿ ಸ್ವಾತಂತ್ರö್ಯ ಸಿಕ್ಕು ೭೫ ವರ್ಷಗಳಾದ ಹಿನ್ನೆಲೆಯಲ್ಲಿ ಇಂದು ವಿಶೇಷವಾಗಿ ಸುಭಾಷ ನಗರ ಜವಾನ ಕ್ವಾಟರ್ಸನಲ್ಲಿನ ಸನ್ ೧೯೭೧ ರ ಭಾರತ – ಪಾಕಿಸ್ತಾನ ಯುದ್ದದಲ್ಲಿ ಭಾರತ ದೇಶಕ್ಕಾಗಿ ತಮ್ಮ ಪ್ರಾಣವನ್ನು ಬಲಿದಾನ ಮಾಡಿದ ವೀರ ಯೋದರ ಪತ್ನಿಯರಿಗೆ ಸನ್ಮಾನ ಹಾಗೂ ಕೃತಜ್ಞತಾ ಕಾರ್ಯಕ್ರಮ ಆಯೋಜಿಸಿರುವ ಆಯೋಜಕರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಎಷ್ಟೋ ಜನರಿಗೆ ತಿಳಿದಿರುವುದಿಲ್ಲ ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿರುವ ವೀರ ಜವಾನರ ನಮ್ಮ ಬೆಳಗಾವಿಯಲ್ಲಿ ಇದ್ದಿರುವುದು ಹೆಮ್ಮೆಯ ಸಂಗತಿಯಾದರೆ ಅಂತಹ ವೀರ ಜವಾನರ ಪತ್ನಿಯರನ್ನು ಸನ್ಮಾನಿಸುತ್ತಿರುವುದು ಇನ್ನೂ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು. ನಂತರದಲ್ಲಿ ಜವಾನ್ ಕ್ವಾಟರ್ಸನಲ್ಲಿ ಇರುವ ೧೪ ಜನ ಶಹಿದ ಜವಾನರ ಪತ್ನಿಯರನ್ನು ಸನ್ಮಾನಿಸಿ ಅವರ ಕಾಲಿಗೆ ಎರಗಿ ನಮಸ್ಕರಿಸಿದರು.
ಈ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆ ಅವರೊಂದಿಗೆ ಶಹಿದ ಜವಾನರ ಕುಟುಂಬಸ್ಥರಾದÀ ವಿಮಲ ಬಿ. ಮಾನಗಾಂವಕರ, ಶ್ರೀಮತಿ ಡಿ. ನಿಂಗಪ್ಪಗೋಳ, ಛಾಯಾ ಶೀಂದೆ, ಸೋನಾಬಾಯಿ ಅನಗೋಳಕರ, ಹಿರಾಬಾಯಿ ಬೆಂಗಾವಾಡೆ, ಜಯಶ್ರೀ ಸೂರ್ಯವಂಶಿ, ನೇತ್ರಾ ಪಡಲೆ, ಶಾಂತಾ ಕಾಂಬಳೆ, ಬಿಬಿಸಾಹೇಬ ಭೋಪಲೆ, ಶಾಂತಾಬಾಯಿ ಅನಗೋಳಕರ, ಯಲ್ಲುಬಾಯಿ ಕಾಂಬಳೆ, ಭರತ ಜೆ. ಪಾಟೀಲ, ವಿಲಾಸ ಕಬ್ಬೂರ, ಸಂಭಾಜಿ ಚೌಗುಲೆ ಸ್ಥಳಿಯರಾದ ಪ್ರವೀಣ ಪಾಟೀಲ, ಇಂಧುಮತಿ ಪಾಟೀಲ, ರತ್ನಪ್ರಭಾ ಬೆಲ್ಲದ, ಮೇಘಾ ಶಿಂದೆ, ವಿಷ್ಣು ಬಡಮಂಜಿ, ದೇವಪ್ಪ ಕಾಂಬಳೆ, ಕಿಲ್ಲೇಕರ, ಸುರೇಶ ರಣಸುಭೆ, ಲಕ್ಷ್ಮೀ ಬಾಚುಳಕರ, ವಿಕ್ರಂ ಅಪ್ಟೇಕರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


Gadi Kannadiga

Leave a Reply