This is the title of the web page
This is the title of the web page

Please assign a menu to the primary menu location under menu

Local News

ಬೆಳಗಾವಿ :ಮತ ಎಣಿಕೆಯಲ್ಲಿ ಸಿಕ್ಕ ಎರಡು ಹೆಚ್ಚುವರಿ ಮತಗಳು ಗೊಂದಲದ ಗೂಡಾಯಿತಿ ಮತ ಎಣಿಕೆ ಕೆಂದ್ರ


ಬೆಳಗಾವಿ: ನಗರದ ಜ್ಯೋತಿ ಕಾಲೇಜಿನಲ್ಲಿ ನಡೆದಿರುವ ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಸಿಕ್ಕ ಎರಡು ಹೆಚ್ಚುವರಿ ಮತಗಳು ಗೊಂದಲ ಮೂಡಿಸಿದೆ.

ಹುಬ್ಬಳ್ಳಿಯ ರೋಟರಿ ಶಾಲೆ ಮತಗಟ್ಟೆಯ ಪೆಟ್ಟಿಗೆಯಲ್ಲಿ 2 ಹೆಚ್ಚುವರಿ ಮತಗಳು ಕಂಡುಬಂದಿದೆ. ಈ ಮತಗಟ್ಟೆಯಲ್ಲಿ ಒಟ್ಟು 757 ಮತಗಳು ಚಲಾವಣೆಗೊಂಡಿದ್ದವು. ಎಣಿಕೆಯಲ್ಲಿ 759 ಮತಗಳು ಸಿಕ್ಕಿದ್ದು ಗೊಂದಲಕ್ಕೆ ಕಾರಣವಾಯಿತು.

ಇದಕ್ಕೆ ಜೆಡಿಎಸ್ ಅಭ್ಯರ್ಥಿ ಶ್ರೀಶೈಲ ಗಡದಿನ್ನಿ ಆಕ್ಷೇಪ ವ್ಯಕ್ತಪಡಿಸಿದರು. ಬರೊಬ್ಬರಿ ನಾಲ್ಕು ಬಾರಿ ಮತಗಳ ಎಣಿಸಿದರು 2 ಮತಗಳು ಹೆಚ್ಚಿಗೆ ಬಂದಿದ್ದರಿಂದ ಚುನಾವಣಾಧಿಕಾರಿಗಳು ಮತಗಳ ಸಂಖ್ಯೆಯನ್ನು 759 ಎಂದು ದಾಖಲಿಸಿದರು.


Gadi Kannadiga

Leave a Reply