This is the title of the web page
This is the title of the web page

Please assign a menu to the primary menu location under menu

Local News

ಬೆಳಗಾವಿಯಲ್ಲಿ ಐಟಿಬಿಪಿ ಯೋಧರಿಗೆ ಸೇರಿದ ಎರಡು ಎಕೆ-47 ಬಂದೂಕು ಕಳ್ಳತನ


ಬೆಳಗಾವಿ: ಐಟಿಬಿಪಿ ಯೋಧರಿಗೆ ಸೇರಿದ ಎರಡು ಎಕೆ-47 ರೈಫಲ್​ಗಳು ಕಳ್ಳತನವಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ತಾಲೂಕಿನ ಹಾಲಬಾವಿಯಲ್ಲಿರುವ ಐಟಿಬಿಪಿ ಶಿಬಿರದಲ್ಲಿ ನಕ್ಸಲ್ ನಿಗ್ರಹ ತರಬೇತಿ ನಡೆಯುತ್ತಿದೆ. ತರಬೇತಿಗೆಂದು ಮಧುರೈನಿಂದ ಬಂದಿರುವ ಐಟಿಬಿಪಿ 45ನೇ ಬೆಟಾಲಿಯನ್​ನ ಯೋಧರಾದ ರಾಜೇಶ್​ಕುಮಾರ್, ಸಂದೀಪ ಮೀನಾ ಅವರಿಗೆ ಸೇರಿದ ಎಕೆ-47 ರೈಫಲ್​ಗಳು ಕಳುವಾಗಿವೆ.
ಆಗಸ್ಟ್​ 17ರಂದು ರಾತ್ರಿ ಮಲಗುವಾಗ ಎಕೆ-47 ರೈಫಲ್​ಗಳನ್ನು ಭದ್ರತೆಯಲ್ಲಿಯೇ ಇರಿಸಲಾಗಿತ್ತು. ಬಿಗಿ ಭದ್ರತೆಯ ನಡುವೆಯೂ ಘಾತಕ ರೈಫಲ್​ಗಳು ಯೋಧರ ಸುಪರ್ದಿಯಿಂದ ತಪ್ಪಿಹೋಗಿರುವುದು ಆತಂಕಕ್ಕೆ ಕಾರಣವಾಗಿದೆ.

ರೈಫಲ್ ಪತ್ತೆಗಾಗಿ ಅಪರಾಧ ವಿಭಾಗದ ಡಿಸಿಪಿ ಪಿ.ವಿ.ಸ್ನೇಹಾ ನೇತೃತ್ವದಲ್ಲಿ ವಿಶೇಷ ‌ತಂಡ ರಚಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯಡಿ ಐಟಿಬಿಪಿ ಅಧಿಕಾರಿಗಳು ಕಾಕತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

 


Gadi Kannadiga

Leave a Reply