This is the title of the web page
This is the title of the web page

Please assign a menu to the primary menu location under menu

Local News

ಬೆಳಗಾವಿ ನಿವೃತ್ತ ಎಸ್.ಪಿ. ಸೇರಿ ಇಬ್ಬರು ಅಧಿಕಾರಿಗಳನ್ನು ದೋಷಮುಕ್ತಗೊಳಿಸಿ ಕೋರ್ಟ್ ತೀರ್ಪು


ಬೆಳಗಾವಿ, ಏ.೦೬ : ರಾಯಚೂರ ಜಿಲ್ಲೆಯ ಮಾನವಿ ತಾಲೂಕಿನ ತಡಕಲ್ ಗ್ರಾಮದಲ್ಲಿ ಜೂನ್ ೧೬, ೧೯೯೪ ರಲ್ಲಿ ಜಿಲ್ಲಾ ಸಹಕಾರಿ ಬ್ಯಾಂಕಿನ ಬಾಕಿ ಇರುವ ರೈತರ ಸಾಲ ವಸೂಲಾತಿಗಾಗಿ ಬ್ಯಾಂಕಿನ ಸಿಬ್ಬಂದಿಯೊಂದಿಗೆ ತಹಶೀಲ್ದಾರ ರಾಮಾಚಾರ ಹರವಾಳ್ಕರ ಮತ್ತು ನಿವೃತ್ತ ಸಿ.ಪಿ.ಐ ಕಾಶಿನಾಥ ಆಡಿ ಹಾಗೂ ಸಿಬ್ಬಂದಿಯೊಂದಿಗೆ ಹೋದಾಗ ರೈತ ಸಂಘದ ಹರವಿ ಶಂಕರಗೌಡ ಹಾಗೂ ಹರವಿ ಬಸನಗೌಡ ಅವರು ಗ್ರಾಮದ ಇತರೇ ರೈತರೊಂದಿಗೆ ಸೇರಿ ಸಾಲ ವಸೂಲಾತಿಯನ್ನು ವಿರೋಧಿಸಿ ಹಿಂಸಾತ್ಮಕ ದೋಂಭಿಯನ್ನು ಉಂಟು ಮಾಡಿದಾಗ ಗ್ಯಾಸ್ ಪೈರ್, ಲಾಟಿ ಚಾರ್ಜ ಹಾಗೂ ಗೋಲಿಬಾರ ಮಾಡಿದ್ದ ಘಟನೆಯ ವಿಚಾರವಾಗಿ ಆಗಿನ ಸಿ.ಪಿ.ಐ. ಕಾಶಿನಾಥ ಆಡಿ(ಸದ್ಯಕ್ಕೆ ನಿವೃತ್ತ ಎಸ್.ಪಿ., ಸಿ.ಆರ್ ಇ.ಘಟಕ, ಬೆಳಗಾವಿ) ಮತ್ತು ತಹಶೀಲ್ದಾರ ರಾಮಾಚಾರ ಹರವಾಳ್ಕರ(ಸದ್ಯಕ್ಯೆ ನಿವೃತ್ತ ಉಪ ವಿಭಾಗಾಧಿಕಾರಿ) ಅವರ ವಿರುದ್ಧ ದಾಖಲಿಸಿದ ಪ್ರಕರಣದಲ್ಲಿ (ಅಅ೧೮/ ೨೦೦೬ & ಅಅ ೧೯/೨೦೦೬ ) ನೇದ್ದನ್ನು ರಾಯಚೂರಿನ ಸಿ.ಜೆ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯವು ವಿಚಾರಣೆ ಮಾಡಿ ಅಧಿಕಾರಿಗಳ ವಿರುದ್ಧ ಶಿಕ್ಷೆ ಹಾಗೂ ದಂಡ ವಿಧಿಸಿ ಏಪ್ರೀಲ್ ೨೦೨೧ ರಂದು ತೀರ್ಪ ನೀಡಿತ್ತು.
ಈ ತೀರ್ಪಿನ ವಿರುದ್ಧ ಶಿಕ್ಷೆಗೊಳ್ಳಪಟ್ಟ ಕಾಶಿನಾಥ ಆಡಿ ಹಾಗೂ ರಾಮಾಚಾರ ಹರವಾಳ್ಕರ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ರಾಯಚೂರು ಜಿಲ್ಲಾ ಪ್ರಥಮ ಹೆಚ್ಚುವರಿ ಸತ್ರ ನ್ಯಾಯಾಲಯ ಪುರಸ್ಕರಿ ಕೆಳ ನ್ಯಾಯಾಲಯವಾದ ಸಿ.ಜೆ ಹಾಗೂ ಜೆ.ಎಂ.ಎಫ್.ಸಿ ನೀಡಿದ ತೀರ್ಪನ್ನು ತಿರಸ್ಕರಿಸಿ, ಶಿಕ್ಷೆಗೊಳಪಡಿಸಿದ ಇಬ್ಬರೂ ಅಧಿಕಾರಿಗಳನ್ನು ಆರೋಪ ಮುಕ್ತರರನ್ನಾಗಿ ಮಾಡಿ ೨೯ ಮಾರ್ಚ್, ೨೦೨೨ ರಂದು ಆದೇಶ ಹೊರಡಿಸಿದೆ.
ಸದರಿ ಪ್ರಕರಣದಲ್ಲಿ ಅಧಿಕಾರಿಗಳ ಪರವಾಗಿ, ಬೆಳಗಾವಿಯ ಹಿರಿಯ ನ್ಯಾಯವಾದಿಯಾದ ಶ್ರೀಕಾಂತ ಸತ್ತಿಗೇರಿ ಅವರು ವಾದ ಮಂಡಿಸಿದ್ದರು.


Gadi Kannadiga

Leave a Reply