This is the title of the web page
This is the title of the web page

Please assign a menu to the primary menu location under menu

Local News

ಸಿಡಿಲು ಬಡಿದು ಎರಡು ಎಮ್ಮೆ ಸಾವು


ಯಮಕನಮರಡಿ:-ಸಮಿಪದ ದಾದಬಾನಟ್ಟಿ ಗ್ರಾಮದಲ್ಲಿ ಬುಧವಾರ ದಿ, ೧೫ ರಂದು ಸಂಜೆ ಬಿದ್ದ ಭಾರಿ ಮಳೆ-ಗಾಳಿಯಬ್ಬರದ ನಡುವೆ ಸಿಡಿಲು ಬಡಿದು ದಾದಬಾನಟ್ಟಿ ಹೊರವಲಯದ ಮನೆಯೊಂದಕ್ಕೆ ಸಿಡಿಲು ಬಡಿದು ಮನೆಯಲ್ಲಿದ್ದ ಎರಡು ಎಮ್ಮೆಗಳು ಮೃತಪಟ್ಟಿವೆ, ಅದೇ ಮನೆಯಲ್ಲಿದ್ದ ಸತ್ಯಪ್ಪಾ ಯಲ್ಲಪ್ಪಾ ಜಮಕೊಳಿ ಹಾಗೂ ಇವರ ಮಗ ಸಂಪತ್ತ್ ಮನೆಯಲ್ಲಿದ್ದ ಎಮ್ಮೆಯ ಹಾಲನ್ನು ಹಿಂಡಲು [ಕರೆಯಲು] ಹೊಗಿದ್ದರು,
ಈ ಸಿಡಿಲಬ್ಬರಕ್ಕೆ ಗಾರಬಿಗೊಂಡ ಅವರು ತಬ್ಬಿಬ್ಬಾಗಿ ಅಲ್ಪ ಸಮಯದವರೆಗೂ ಏನು ತಿಳಿದೆ ಗಾಬರಿಯಾಗಿದ್ದರು ತದನಂತರ ಮನೆಗೆ ಸಿಡಿಲು ಬಡಿದು ಎಮ್ಮೆಗಳು ಸತ್ತ ವಿಷಯ ತಿಳಿಸಿದಾಗ ಗ್ರಾಮಸ್ತರು ದಾವಿಸಿದರು, ಈ ಘಟನೆಯಲ್ಲಿ ರೈತರಾದ ಜಮಕೊಳಿ ಅವರಿಗೆ ಅಂದಾಜು ೨ ಲಕ್ಷದ ವರೆಗೆ ಹಾ£ಯಾಗಿದೆ ಎಂದು ಅಂದಾಜಿಸಲಾಗಿದೆ.
ಶಾಸಕ ಸತೀಶ ಜಾರಕಿಹೊಳಿಯವರು ಸಂತ್ರಸ್ಥರಿಗೆ ಸಹಾಯಧನ ವಿತರಿಸಿದರು. ಈ ಸಂದರ್ಭದಲ್ಲಿ ರವೀಂದ್ರ ಜಿಂಡ್ರಾಳಿ, ಹುಕ್ಕೇರಿ ತಾ.ಪಂ. ಮಂಜುನಾಥ ಒಬನ್ನವರ, ಶ್ರೀಧರ ಗಂಬೀರ, ವಿಠ್ಠಲ ಖಡಗಾಂವಿ ಉಪಸ್ಥಿತರಿದ್ದರು.
ಅಬ್ಬರದ ಗಾಳಿ-ಮಿಶ್ರಿತ ಮಳೆ:-ಸಂಜೆ ಹೊತ್ತಿಗೆ ಗಾಳಿ-ಮಿಶ್ರೀತ ಮಳೆ ಪ್ರಾರಂಭವಾಗಿ ಯಮಕನಮರಡಿ ಹಂಚಿನಾಳ, ಹತ್ತರಗಿ, ಉಳ್ಳಾಗಡ್ಡಿ-ಖಾನಾಪೂರ, ವಲಯಗಳಲ್ಲಿ ಹಲವಾರು ಗಿಡಗಳು ನೆಲಕ್ಕುರುಳಿವೆ, ಯಮಕನಮರಡಿ ವಲಯದಲ್ಲಿ ವಿದ್ಯುತ್ ವ್ಯತ್ತಯ ಉಂಟಾಗಿದ್ದು ಮಧ್ಯಾನ್ಹದ ವರೆಗೂ ವಿದ್ಯುತ್ ಕಡಿತಗೊಂಡಿತ್ತು,


Gadi Kannadiga

Leave a Reply