This is the title of the web page
This is the title of the web page

Please assign a menu to the primary menu location under menu

Local News

ಕ್ರೂಜರ್, ಖಾಸಗಿ ಸಾರಿಗೆ ಬಸ್ ನಡುವೆ ಭೀಕರ ಅಪಘಾತ: ಸ್ಥಳದಲ್ಲಿಯೇ ಇಬ್ಬರು ಸಾವು


ಹುಬ್ಬಳ್ಳಿ: ಮೃತರಾದ ಸಂಬಂಧಿಯೊಬ್ಬರ ಪಾರ್ಥಿವ ಶರೀರ ತರಲು ಕ್ರೂಜರ್‌ನಲ್ಲಿ ತೆರಳುತ್ತಿದ್ದ ನಾಲ್ವರಲ್ಲಿ ಇಬ್ಬರು ಕ್ರೂಜರ್ ಹಾಗೂ ಖಾಸಗಿ ಸಾರಿಗೆ ಬಸ್ ನಡುವೆ ನಡೆದ ಅಪಘಾತದಲ್ಲಿ ಕೊನೆಯುಸಿರೆಳೆದಿರುವ ಘಟನೆ ಕಲಘಟಗಿಯ ರಾಯಾನಾಳ ಕ್ರಾಸ್ ಬಳಿ ಸಂಭವಿಸಿದೆ.

ಹಳಿಯಾಳದ ನಂದಗಡ ನಿವಾಸಿಗಳಾದ ಶಿವನಗೌಡ ಪಾಟೀಲ್ ಮತ್ತು ಅಮೃತ ಪಾಟೀಲ್ ಅಪಘಾತದಲ್ಲಿ ಮೃತರಾದ ದುರ್ದೈವಿಗಳೆಂದು ಗುರುತಿಸಲಾಗಿದೆ.

ಇನ್ನೂ ಶಿವನಗೌಡ ಹಾಗೂ ಅಮೃತ ಸಂಬಂಧಿಯೊಬ್ಬರ ಪಾರ್ಥಿವ ಶರೀರವನ್ನು ತರಲು ಕ್ರೂಜರ್‌ನಲ್ಲಿ ಕಲಘಟಗಿ ಮಾರ್ಗವಾಗಿ ತೆರಳುತ್ತಿದ್ದರಂತೆ. ಈ ವೇಳೆ ವೇಗವಾಗಿ ಬಂದ ಖಾಸಗಿ ಸಾರಿಗೆ ಬಸ್ ರಭಸವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರು ಪ್ರಾಣ ಪಕ್ಷಿ ಹಾರಿ ಹೋಗಿದ್ದು, ಮಾರುತಿ ಹಾಗೂ ದೇವೇಂದ್ರ ಎಂಬ ಇಬ್ಬರಿಗೆ ಗಂಭೀರವಾದ ಗಾಯವಾಗಿದೆ. ಬಸ್‌ನ ಡಿಕ್ಕಿಯ ಹೊಡೆತಕ್ಕೆ ಕ್ರೂಜರ್ ವಾಹನ ಸಂಪೂರ್ಣ ಜಖಂಗೊಂಡಿದ್ದು, ಮೇಲ್ಭಾಗ ಕಿತ್ತುಕೊಂಡು ಹೋಗಿದೆ.

ಇನ್ನೂ ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು ಕಲಘಟಗಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಕಲಘಟಗಿ ಪೊಲೀಸ್ ಠಾಣೆಯ ಇಸ್ಪೆಕ್ಟರ್ ಶ್ರೀಶೈಲ ಕೌಜಲಗಿ ಹಾಗೂ ಸಿಬ್ಬಂದಿಗಳು, ಸ್ಥಳೀಯರ ಸಹಕಾರದೊಂದಿಗೆ ಗಾಯಾಳುಗಳನ್ನು ರಕ್ಷಣೆ ಮಾಡಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಬಳಿಕ ಮೃತ ಇಬ್ಬರ ಶವವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಶಿಫ್ಟ್ ಮಾಡಿ ಅಪಘಾತದ ಕುರಿತು ಪರಿಶೀಲನೆ ಕೈಗೊಂಡಿದ್ದಾರೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ./ ವರದಿ ಶಶಿಧರ ಕಟ್ಟಿಮನಿ


Gadi Kannadiga

Leave a Reply