ಬೆಳಗಾವಿ : ಟ್ರ್ಯಾಕ್ಟರ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟ ರಾಯಬಾಗ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ನಡೆದಿದೆ.
ಅಲಖನೂರು ಗ್ರಾಮದ ಪುಂಡಲೀಕ (26) ಹಾಗೂ ಖೇಮಲಾಪೂರ ಗ್ರಾಮದ ಶಿವು (24) ಮೃತಪಟ್ಟ ದುರ್ದೈವಿಗಳು ಎಂದು ತಿಳಿದುಬಂದಿದೆ.
ಬೈಕ್ ಸವಾರರು ರಾಯಬಾಗದಿಂದ ಅಳಗವಾಡಿ ಕಡೆಗೆ ಹಾಗೂ ಟ್ರ್ಯಾಕ್ಟರ್ ಸವಾರ ಹಾರೂಗೇರಿ ಕಡೆಯಿಂದ ಅಳಗವಾಡಿ ಕಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಹಾರೂಗೇರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.