This is the title of the web page
This is the title of the web page

Please assign a menu to the primary menu location under menu

Local News

ಯಕ್ಷಗಾನ ಕಲೆಯ ಮೂಲವೇ ಉಡುಪಿಯಾಗಿದೆ : ಹಾದಿಮನಿ


ಯರಗಟ್ಟಿ : ಪಟ್ಟಣದ ಮಹಾಂತ ದುರದುಂಡೇಶ್ವರ ಶ್ರೀಮಠದಲ್ಲಿ ಯರಗಟ್ಟಿ ತಾಲೂಕಾ ಹೊಟೇಲ್ ಮಾಲಕರ ಸಂಘ, ವೈನ್ಸ್ ಮರ್ಚೆಂಟ್, ಎಸ್ ಕೆ ಗ್ರೂಪ್ ಮತ್ತು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಡೂರ ಮಂದರ್ತಿ ಇವರಿಂದ ಆಯೋಜಿಸಿದ್ದ ಯಕ್ಷಗಾನ ಕಾರ್ಯಕ್ರಮವನ್ನು ಎ. ಎಂ. ಹಾದಿಮನಿ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎ. ಎಂ. ಹಾದಿಮನಿ ಯಕ್ಷಗಾನ ಕಲೆಯ ಮೂಲವೇ ಉಡುಪಿಯಾಗಿದ್ದು, ಶ್ರೀನರ ಹರಿತೀರ್ಥರಿಂದ ಪ್ರಾರಂಭಗೊಂಡ ಈ ಕಲೆ ಇಂದು ವಿಶ್ವವ್ಯಾಪಿಯಾಗಿದೆ. ಕಲಾವಿದರ ಶ್ರಮ ಹಾಗೂ ತ್ಯಾಗ ದಿಂದಲೇ ಇದು ಪ್ರವೃದ್ಧಮಾನಕ್ಕೆ ಬರುತ್ತದೆ ಎಂದು ಅಭಿಪ್ರಾಯ ಪಟ್ಟರು.
ನಂತರ ಮಾತನಾಡಿದ ನಿವೃತ್ತ ಶಿಕ್ಷಕರಾದ ಎ. ಕೆ. ಜಮಾದಾರ ಯಕ್ಷಗಾನ – ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ-ಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ. ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು ಎಂದು ಹೇಳಿದರು. ಈ ಸಂದರ್ಭದಲ್ಲಿ ಪೂಜ್ಯ ಗಣಪತಿ ಮಹಾರಾಜರು, ಮೋಹನ ಹಾದಿಮನಿ, ಜೆ. ರತ್ನಾಕರ ಶೆಟ್ಟಿ, ಅಶೋಕ ಶೆಟ್ಟಿ, ರವೀಂದ್ರ ಶೆಟ್ಟಿ, ವಿಶಾಲಗೌಡ ಪಾಟೀಲ, ಸದಾಶಿವ ಅಮ್ಮಿನ, ಸತೀಶ ನಾಯ್ಕ, ಮಹಾಂತೇಶ ಜಕಾತಿ, ಭಾಸ್ಕರ ಹಿರೇಮೆತ್ರಿ, ರಾಜೇಂದ್ರ ಶೆಟ್ಟಿ ಸೇರಿದಂತೆ ಅನೇಕ ಉಪಸ್ಥಿತರಿದ್ದರು


Leave a Reply