ಬೆಳಗಾವಿ, ಮೇ.೧೯ : ೨೦೨೩ ನೇ ಸಾಲಿನ ಯುಜಿ ಸಿಇಟಿ ಪರೀಕ್ಷೆಗಳು ಮೇ ೨೦. ೨೦೨೩ ರಿಂದ ಮೇ ೨೨. ೨೦೨೩ ರ ವರಗೆ ನಡೆಯುಲಿದ್ದು, ಪರೀಕ್ಷಾ ವೇಳೆಯಲ್ಲಿ ಪರೀಕ್ಷಾ ಕೇಂದ್ರದ ಸುತ್ತ ಮುತ್ತಲಿನ ೨೦೦ ಮೀ. ಪ್ರದೇಶದಲ್ಲ್ಲಿ ಸಿಆರ್‌ಪಿಸಿ ೧೪೪ ಕಲಂ ಜಾರಿಗೊಳಿಸಿ ಜಿಲ್ಲಾಧಿsಕಾರಿ ನಿತೇಶ್ ಪಾಟೀಲ ಅವರು ಆದೇಶ ಹೋರಡಿಸಿರುತ್ತಾರೆ.
ನಗರದ-೧೭ ಕೇಂದ್ರಗಳಲ್ಲಿ ೬೭೨೮ ವಿದ್ಯಾರ್ಥಿಗಳು ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ನಾಲ್ಕು ತಾಲೂಕುಗಳಾದ ಚಿಕ್ಕೋಡಿ-೦೭, ಗೋಕಾಕ-೦೭, ನಿಪ್ಪಾನಿ-೦೩, ಅಥಣಿ-೦೬ ಹಿಗೆ ಒಟ್ಟು-೨೩ ಕೇಂದ್ರಗಳಲ್ಲಿ ೮೪೮೩ ವಿದ್ಯಾರ್ಥಿಗಳು ಒಟ್ಟಾರೆಯಾಗಿ ಜಿಲ್ಲೆಯ ೪೦ ಪರೀಕ್ಷಾ ಕೇಂದ್ರಗಳಲ್ಲಿ ೧೫೨೧೧ ವಿದ್ಯಾರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ.
ಮೇ ೨೦. ೨೦೨೩ ರಂದು ಬೆಳಿಗ್ಗೆ ೧೦.೩೦ ರಿಂದ ೧೧.೫೦ ಗಂಟೆವರೆಗೆ ಜೀವಶಾಸ್ತ್ರ ಮತ್ತು (ಮಧ್ಯಾಹ್ನ) ೨:೩೦ ರಿಂದ ೩:೫೦ ಗಂಟೆವರೆಗೆ ಗಣಿತ ಹಾಗೂ ಮೇ ೨೧. ೨೦೨೩ ರಂದು ಬೆಳಿಗ್ಗೆ ೧೦.೩೦ ರಿಂದ ೧೧.೫೦ ಗಂಟೆವರೆಗೆ ಭೌತಶಾಸ್ತ್ರ ಮತ್ತು (ಮಧ್ಯಾಹ್ನ) ೨:೩೦ ರಿಂದ ೩:೫೦ ಗಂಟೆವರೆಗೆ ರಸಾಯನಶಾಸ್ತ್ರ ಹಾಗೂ ಮೇ ೨೨. ೨೦೨೩ ರಂದು ಬೆಳಿಗ್ಗೆ ೧೧.೩೦ ರಿಂದ ೧೨.೩೦ ಗಂಟೆವರೆಗೆ ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದಂತೆ ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಪ್ರವೇಶ ಪರೀಕ್ಷೆಗಳು ನಡೆಯಲಿವೆ.
ಜಿಲ್ಲಾ ಖಜಾನೆ, ಉಪಖಜಾನೆಯಿಂದ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆಗಳನ್ನು ತಲುಪಿಸಲು ತ್ರಿಸದಸ್ಯರನ್ನು ಒಳಗೊಂಡ ೧೨ ತಂಡಗಳನ್ನು ರಚಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬರನ್ನು ಜಿಲ್ಲಾ, ತಾಲ್ಲೂಕಾ ಮಟ್ಟದ ಎ ಮತ್ತು ಬಿ ವೃಂದದ ಅಧಿಕಾರಿಯನ್ನು ವೀಕ್ಷರರಾಗಿ ನೇಮಿಸಲಾಗಿದೆ.
ಪರೀಕ್ಷಾ ಕೇಂದ್ರದ ಸಮೀಪದಲ್ಲಿರುವ ಝರಾಕ್ಸ್ ಅಂಗಡಿಗಳನ್ನು ಬಂದ ಮಾಡಲು ಕ್ರಮಕೈಗೊಂಡಿದ್ದು ಜೊತೆಗೆ ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಫೋನ್ ಹಾಗೂ ವಿದ್ಯುನ್ಮಾನ ವಸ್ತುಗಳನ್ನು ನಿಷೇಧಿಸಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಸೂಕ್ತ ಪೋಲೀಸ ಬಂಧೋಬಸ್ತ ಒದಗಿಸಲಾಗಿಸಿದೆ ಎಂದು ಜಿಲ್ಲಾದಿsಕಾರಿಗಳಾದ ನಿತೇಶ್ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ಯುಜಿ ಸಿಇಟಿ ಪರೀಕ್ಷೆ: ಸಿಆರ್‌ಪಿಸಿ ೧೪೪ ಕಲಂ ಜಾರಿ
ಯುಜಿ ಸಿಇಟಿ ಪರೀಕ್ಷೆ: ಸಿಆರ್‌ಪಿಸಿ ೧೪೪ ಕಲಂ ಜಾರಿ
Suresh19/05/2023
posted on