ಬೆಳಗಾವಿ, ಮಾರ್ಚ್ ೩೧ : ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಏಪ್ರಿಲ್ ೨ ಮತ್ತು ೩ ರಂದು ಬೆಂಗಳೂರಿನಿಂದ ಬೆಳಗಾವಿ ವಿಭಾಗದ ವ್ಯಾಪ್ತಿಯ ಸ್ಥಳಗಳಿಗೆ ಬರುವ ಪ್ರಯಾಣಿಕರಿಗೆ ಏಪ್ರಿಲ್೧ ರಂದು ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಳಗಾವಿಗೆ ವಿವಿಧ ಮಾದರಿಯ ಒಟ್ಟು ೨೧ ಹೆಚ್ಚುವರಿ ವಿವಿಧ ವಿಶೇಷ ವಾಹನಗಳ ವ್ಯವಸ್ಥೆ ಮಾಡಲಾಗಿದೆ.
ಮರಳಿ ಬೆಳಗಾವಿಯಿಂದ ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣಕ್ಕೆ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಈ ಸಾರಿಗೆಗೆ ಇ- ಟಿಕೆಟ್ನ್ನು ಆನ್ಲೈನ್ ತಿತಿತಿ.ಞsಡಿಣಛಿ.iಟಿ, ತಿತಿತಿ.ಟಿತಿಞಡಿಣಛಿ.iಟಿ ಹಾಗೂ ಮೊಬೈಲ್ ಮುಖಾಂತರವೂ ಪಡೆಯಬಹುದಾಗಿದೆ. ಸಂಸ್ಥೆಯಿಂದ ನಿಗದಿಪಡಿಸಿರುವ ಬೆಳಗಾವಿಯ ವಿವಿಧ ಸ್ಥಳಗಳಲ್ಲಿ ಸಂಸ್ಥೆಯ ಅವತಾರ ಬುಕ್ಕಿಂಗ್ ಏಜೆಂಟ್ರಲ್ಲಿಯೂ ಮುಂಗಡ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದು ಎಂದು ವಾ.ಕ.ರ.ಸಾ.ಸಂಸ್ಥೆಯ ಬೆಳಗಾವಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ಯುಗಾದಿ ಹಬ್ಬ: ವಿಶೇಷ ಬಸ್ ವ್ಯವಸ್ಥೆ