ಗದಗ ಜನೇವರಿ ೧೩: ಲೋಕಾಯುಕ್ತ ಪೋಲಿಸ್ ಅಧೀಕ್ಷಕರಾದ ಸತೀಶ ಚಿಟಗುಬ್ಬಿ ಅವರು ನಗರದ ಜಿಮ್ಸ ಹಾಗೂ ಗದಗ-ಬೆಟಗೇರಿ ನಗರಸಭೆ ಕಾರ್ಯಾಲಯಕ್ಕೆ ಗುರುವಾರದಂದು ಅನೀರಿಕ್ಷಿತವಾಗಿ ಭೇಟಿ ನೀಡಿ ಪರಿಶೀಲಿಸಿದರು.
ಲೋಕಾಯುಕ್ತ ಪೋಲಿಸ್ ಅಧಿಕ್ಷಕರಾದ ಸತೀಶÀ ಚಿಟಗುಬ್ಬಿ ಅವರು ಜಿಮ್ಸಗೆ ಭೇಟಿ ನೀಡಿ ವೈದ್ಯರ, ವೈದ್ಯಕೀಯ ಸಿಬ್ಬಂದಿ ಹಾಗೂ ಇತರೇ ಅಧಿಕಾರಿ ಮತ್ತು ಸಿಬ್ಬಂದಿಗಳ ಹಾಜರಾತಿಯನ್ನು ಪರಿಶೀಲಿಸಿದರು. ಹೊರಗುತ್ತಿಗೆ ನೌಕರರ ಹಾಜರಾತಿ ಮತ್ತು ವೇತನದ ಬಗ್ಗೆ ಮಾಹಿತಿ ಪಡೆದ ಅವರು ಹೊರಗುತ್ತಿಗೆ ನೌಕರರಿಗೆ ಸರಿಯಾದ ಸಮಯಕ್ಕೆ ವೇತನ ಪಾವತಿ ಆಗುವಂತೆ ನೋಡಿಕೊಳ್ಳುವಂತೆ ಸೂಚಿಸಿದರು. ಔಷಧ ಉಗ್ರಾಣಕ್ಕೆ ಭೇಟಿ ನೀಡಿದ ಅವರು ದಾಖಲಾತಿಗಳನ್ನು ಹಾಗೂ ದಾಸ್ತಾನನ್ನು ಪರಿಶೀಲಿಸಿ ನಾಯಿ ಕಡಿತಕ್ಕೆ ಸಂಬಂಧಿಸಿದಂತೆ ಔಷಧಗಳನ್ನು ಹೊರಗಡೆ ಬರೆದುಕೊಡದಂತೆ ಸೂಕ್ತ ಕ್ರಮ ಜರುಗಿಸುವಂತೆ ತಿಳಿಸಿದರು. ಶವ ಪರೀಕ್ಷೆ ಕಾಲಕ್ಕೆ ಮೃತ ಸಂಬಂಧಿಕರಿಗೆ ಹಾಗೂ ಕುಟುಂಬದವರಿಗೆ ಸತಾಯಿಸದೇ ಆದಷ್ಟು ಬೇಗನೇ ಶವ ಪರೀಕ್ಷೆ ಮಾಡಿಸಿಕೊಡುವ ಕುರಿತು ಅಗತ್ಯ ಕ್ರಮ ವಹಿಸುವಂತೆ ತಿಳಿಸಿ ಆಸ್ಪತ್ರೆಯ ಒಳರೋಗಿ ವಿಭಾಗಕ್ಕೆ ಭೇಟಿ ನೀಡಿದ ಅವರು ರೋಗಿಗಳ ಕುಂದುಕೊರತೆಗಳ ಕುರಿತು ವಿಚಾರಿಸಿದರು.
ಜಿಮ್ಸ ನಂತರ ಗದಗ-ಬೆಟಗೇರಿ ನಗರಸಭೆ ಕಾರ್ಯಾಲಯಕ್ಕೆ ಭೇಟಿ ನೀಡಿದ ಅವರು ಫಾರಂ ನಂ. ೩ ಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಪಡೆದರು. ಸಕಾಲದಡಿ ಸ್ವೀಕೃತವಾದ ಅರ್ಜಿಗಳ, ಕಸ ವಿಲೇವಾರಿ ಕುರಿತು ಕೈಕೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದ ಅವರು ಕಾಲಮಿತಿಯೊಳಗೆ ನಗರಸಭೆಗೆ ಬಂದಂತಹ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಅಧೀಕ್ಷಕರಾದ ಸತೀಶ ಚಿಟಗುಬ್ಬಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಶಂಕರ ಎಂ. ರಾಗಿ, ಪೊಲೀಸ್ ಇನ್ಸಪೆಕ್ಟರ್ ರವಿ ಪುರುಶೋತ್ತಮ್, ಎ.ಆರ್ ಕಲಾದಗಿ, ಜಿಮ್ಸ ನಿರ್ದೇಶಕರಾದ ಡಾ.ಬಿ.ಪಿ.ಬೊಮ್ಮನಹಳ್ಳಿ, ಗದಗ-ಬೆಟಗೇರಿ ನಗರಸಭೆ ವ್ಯವಸ್ಥಾಪಕರಾದ ಪರಶುರಾಮ ಶೇರಖಾನೆ ಸೇರಿದಂತೆ ಜಿಮ್ಸ ಹಾಗೂ ನಗರಸಭೆ ಸಿಬ್ಬಂದಿಗಳು ಹಾಜರಿದ್ದರು.
Gadi Kannadiga > State > ಲೋಕಾಯುಕ್ತ ಪೋಲಿಸ್ ಅಧೀಕ್ಷರಿಂದ ಜಿಮ್ಸ ಹಾಗೂ ನಗರ ಸಭೆಗೆ ಅನೀರಿಕ್ಷಿತ ಭೇಟಿ ಪರಿಶೀಲನೆ
More important news
ವಿದ್ಯುತ್ ವ್ಯತ್ಯಯ
23/03/2023
ಚುನಾವಣೆಯಲ್ಲಿ ಮಕ್ಕಳ ಬಳಕೆ ಸಲ್ಲದು
23/03/2023
ಮಾರ್ಚ ೨೪ ರಂದು ನಗರಸಭೆಯಲ್ಲಿ ಸಾಮಾನ್ಯ ಸಭೆ
23/03/2023