This is the title of the web page
This is the title of the web page

Please assign a menu to the primary menu location under menu

Local News

ಕಾರ್ಮಿಕ ಅದಾಲತ್-೨.೦ ಕಾರ್ಯಕ್ರಮದಡಿ ಕಾರ್ಮಿಕರು ಸಮಸ್ಯೆ ಬಗೆಹರಿಸಿಕೊಳ್ಳಿ: ವೆಂಕಟೇಶ ಶಿಂದಿಹಟ್ಟಿ


ಬೆಳಗಾವಿ,ಜುಲೈ೨೨: ಕಾರ್ಮಿಕ ಇಲಾಖೆಯ ಅಧಿಕಾರಿಗಳು ಪ್ರಾಧಿಕಾರಿಗಳಾಗಿರುವ ಕನಿಷ್ಠ ವೇತನ ಕಾಯ್ದೆ, ವೇತನ ಪಾವತಿ ಕಾಯ್ದೆ, ಉಪದಾನ ಪಾವತಿ ಕಾಯ್ದೆಯಡಿ ದಾಖಲಾದ ಪ್ರಕರಣಗಳನ್ನು ‘ಕಾರ್ಮಿಕ ಅದಾಲತ್-೨.೦’ ಕಾರ್ಯಕ್ರಮದಡಿ ಪರಿಹರಿಸಿಕೊಳ್ಳುವಂತೆ ಆಡಳಿತವರ್ಗ, ಕಾರ್ಮಿಕ ಸಂಘದ ಪ್ರತಿನಿಧಿಗಳು ಹಾಗೂ ಕಾರ್ಮಿಕರುಗಳಿಗೆ ಬೆಳಗಾವಿ ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತರಾದ ವೆಂಕಟೇಶ ಶಿಂದಿಹಟ್ಟಿ ಸೂಚಿಸಿದರು.
ಕಾರ್ಮಿಕ ಇಲಾಖೆಯಲ್ಲಿ ಬಾಕಿ ಇರುವ ಪ್ರಕರಣಗಳನ್ನು ವಿಲೇವಾರಿ ಮಾಡಲು ಆಗಸ್ಟ್ ೧೫ರವರೆಗೆ ಮಜಗಾವಿಯ ಕಾರ್ಮಿಕ ಭವನದಲ್ಲಿ‘ಕಾರ್ಮಿಕ ಅದಾಲತ್-೨.೦’ ಕಾರ್ಯಕ್ರಮ ಹಿನ್ನೆಲೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು, ನ್ಯಾಯಾಧೀಶರೂ ಆಗಿರುವ ಮುರಳಿ ಮೋಹನ ರೆಡ್ಡಿ ಅವರು ಕರ್ನಾಟಕ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ದಾಖಲಾಗಿರುವ ವಿವಿಧ ಕ್ಲೇಮ್ ಅರ್ಜಿಗಳನ್ನು ಕೂಡಲೇ ವಿಲೇ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮೊಹಮ್ಮದ ಅನ್ಸಾರಿ, ಸಹಾಯಕ ಕಾರ್ಮಿಕ ಆಯುಕ್ತರು, ಬೆಳಗಾವಿ ವಿಭಾಗ, ಬೆಳಗಾವಿ, ಶ್ರೀ. ಮಹೇಶ ಕುಳಲಿ, ಕಾರ್ಮಿಕ ಅಧಿಕಾರಿ, ಉಪ ವಿಭಾಗ-೧, ಬೆಳಗಾವಿ, ಶ್ರೀಮತಿ. ತರನ್ನುಂ ಬೆಂಗಾಲಿ, ಕಾರ್ಮಿಕ ಅಧಿಕಾರಿ, ಉಪ ವಿಭಾಗ-೨, ಬೆಳಗಾವಿ ಹಾಗೂ ಹಿರಿಯ ಕಾರ್ಮಿಕ ನಿರೀಕ್ಷಕರುಗಳು, ಕಾರ್ಮಿಕ ಸಂಘಟನೆಯ ಮುಖಂಡರುಗಳು, ವಕೀಲರು & ಕಾರ್ಮಿಕರುಗಳು ಹೆಚ್ಚಿನ ಪ್ರಮಾಣದಲ್ಲಿ ಭಾಗಿಯಾಗಿದ್ದರು.


Gadi Kannadiga

Leave a Reply