This is the title of the web page
This is the title of the web page

Please assign a menu to the primary menu location under menu

Local News

ದೇಶ ರಕ್ಷಣೆಯಲ್ಲಿ ಸೈನಿಕರು, ಪೊಲೀಸರ ಸೇವೆ ಅನನ್ಯ : ರಾಹುಲ್‌ ಜಾರಕಿಹೊಳಿ


ಘಟಪ್ರಭಾ : ಪ್ರಸ್ತುತ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಅವಶ್ಯವಾಗಿದೆ. ಆದರಿಂದ ಸೈನಿಕ ಹಾಗೂ ಪೊಲೀಸ್‌ ಕಾನ್ಸಟೇಬಲ್‌ ಆಕಾಂಕ್ಷಿಗಳಿಗೆ ಉಚಿತ ತರಬೇತಿ ನೀಡಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಯುವ ನಾಯಕ ರಾಹುಲ್‌ ಜಾರಕಿಹೊಳಿ ಹೇಳಿದರು.

ಇಲ್ಲಿನ ಡಾ.ಎನ್.ಎಸ್.ಹರ್ಡೇಕರ ಸೇವಾ ದಳ ತರಬೇತಿ ಕೇಂದ್ರದಲ್ಲಿ ಸತೀಶ್‌ ಜಾರಕಿಹೊಳಿ ಫೌಂಡೇಷನ್‌ ದಿಂದ ಸೈನಿಕ ಮತ್ತು ಪೊಲೀಸ್‌ ಕಾನ್ಸಟೇಬಲ್‌ ಆಕಾಂಕ್ಷಿಗಳಿಗೆ ನೀಡುತ್ತಿರುವ 10ದಿನಗಳ ಉಚಿತ ತರಬೇತಿ ಶಿಬಿರಕ್ಕೆ ಸೋಮವಾರ ಪ್ರಿಯಾಂಕಾ, ರಾಹುಲ್‌ ಜಾರಕಿಹೊಳಿ ಜಂಟಿಯಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸ್ಪರ್ಧಾತ್ಮಕ ಯುಗದಲ್ಲಿ ಸೈನಿಕ ಮತ್ತು ಪೊಲೀಸ್‌ ಕಾನ್ಸಟೇಬಲ್‌ ಹುದ್ದೆಗಳಿಗೆ ಸ್ಪರ್ಧೆ ಹೆಚ್ಚಿದೆ. ಲಕ್ಷಾಂತರ ಜನರು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುತ್ತಾರೆ. ಆದರೆ ಅವರಲ್ಲಿ ಸಾವಿರ ಜನರು ಮಾತ್ರ ಆಯ್ಕೆಯಾಗುತ್ತಾರೆ. ಆದ ಕಾರಣ ನಿರಂತರ ಪ್ರಯತ್ನ, ಉತ್ತಮ ರೀತಿಯಲ್ಲಿ ಅಧ್ಯಯನ ನಡೆಸಿ ಎಂದು ಕಿವಿಮಾತು ಹೇಳಿದರು.

ದೇಶ ರಕ್ಷಣೆಯಲ್ಲಿ ಸೈನಿಕರು ಮತ್ತು ಪೊಲೀಸರ ಸೇವೆ ಅನನ್ಯವಾಗಿದೆ. ಸೈನಿಕರು ದೇಶದ ಗಡಿಯಲ್ಲಿ ನಿಂತು ದೇಶ ಕಾಯುತ್ತಿದ್ದರೆ, ಪೊಲೀಸರು ದೇಶದೊಳಗೆ ಜನರನ್ನು ರಕ್ಷಣೆ ಮಾಡುವ ಕಾರ್ಯವನ್ನು ಮಾಡುತ್ತಾರೆ. ಆ ಉತ್ತಮ ಸೇವೆಯ ಆಕಾಂಕ್ಷಿಗಳು ನೀವಾಗಿದ್ದು, ತರಬೇತಿ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.

ಪ್ರಿಯಾಂಕಾ ಜಾರಕಿಹೊಳಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಉದ್ಯೋಗ ಕ್ಷೇತ್ರಕ್ಕೆ ತೆರಳಲು ಸಾಕಷ್ಟು ಅವಕಾಶವಿರುವ ಕಾಲಘಟ್ಟವಿದು. ಅದರ ತಯಾರಿಗಾಗಿ ನಗರದಲ್ಲಿ ಕೋಚಿಂಗ್‌ ಕೇಂದ್ರ, ತರಬೇತಿ ಸಂಸ್ಥೆಗಳು ಹುಟ್ಟಿಕೊಂಡಿವೆ. ಆದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಆಸಕ್ತಿ ಇದ್ದರೂ, ತರಬೇತಿ ಕೊರತೆ ಇದೆ. ಇದರಿಂದಲೇ ಸತೀಶ್‌ ಜಾರಕಿಹೊಳಿ ಫೌಂಡೇಷನ್‌ ದಿಂದ ತರಬೇತಿ ಶಿಬಿರ ನಡೆಸಲಾಗುತ್ತಿದೆ ಎಂದರು.

ಮತ್ತೋರ್ವ ಉದ್ಘಾಟಕರಾಗಿ ಆಗಮಿಸಿದಂತಹ ಬೆಳಗಾವಿ ತಹಶೀಲ್ದಾರ್ (ವಿಶೇಷ ಭೂ ಸ್ವಾಧಿನ ಅಧಿಕಾರಿ) ಶ್ರೀಧರ ಗೋಟೂರು ಮಾತನಾಡಿ, ಯುವಕರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭಯ ಇರುವುದು ಸಾಮಾನ್ಯ. ಆದರೆ ನಿರಂತರ ಪರಿಶ್ರಮ, ಪ್ರಯತ್ನ ಎಲ್ಲವನ್ನು ಸಾಧಿಸಬಹುದು. ತರಬೇತಿ ಶಿಬಿರದ ಲಾಭ ಪಡೆದುಕೊಳ್ಳಿ ಎಂದು ನುಡಿದರು.

ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಸತೀಶ್‌ ಜಾರಕಿಹೊಳಿ ಅವರು ತುಂಬಾ ದಿನಗಳ ಹಿಂದೆಯೇ ಈ ರೀತಿಯ ಪ್ರಯತ್ನ ಮಾಡಬೇಕೆಂಬ ಕನಸನ್ನು ಕಂಡಿದ್ದರು. ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ತರಬೇತಿ ಲಾಭ ಪಡೆದುಕೊಂಡರೇ ಸತೀಶ್‌ ಜಾರಕಿಹೊಳಿ ಫೌಂಡೇಷನ್‌ ನವರ ಪರಿಶ್ರಮ ಸಾರ್ಥಕವಾಗಲಿದೆಯಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಸೇವಾ ದಳದ ಕಾರ್ಯದರ್ಶಿ ಬಲರಾಂ ಸಿಂಗ್‌ ಬಡೋರಿಯ, ಕಾಂಗ್ರೆಸ್‌ ಸೇವಾದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ತುಳಸಿಗೇರಿ , ಸುಭಾಶ್‌ ನಾಯ್ಕ, ಪಿ.ವಿ.ಮೇಟಿ, ಸಂತೋಷ ಮೇಳವಂಕಿ, ಹನುಮಂತ ನಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.


Gadi Kannadiga

Leave a Reply