ಬೆಳಗಾವಿ, ಜು.೨೪ : ಕುಡಚಿ ರೈಲು ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿ(೬೦-೬೫) ಯಾವುದೋ ಖಾಯಿಲೆಯಿಂದ ಬಳಲಿ ಜುಲೈ.೨೧ ೨೦೨೩ ರಂದು ಸ್ವಾಭಾವಿಕವಾಗಿ ಮೃತಪಟ್ಟಿದ್ದು ಬೆಳಗಾವಿ ರೈಲ್ವೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಮೃತ ವ್ಯಕ್ತಿಯ ಚಹರೆ ಪಟ್ಟಿಯ :
೫.೫ ಎತ್ತರ, ಸಾದಾಗಪ್ಪು ಮೈಬಣ್ಣ, ಸದೃಡ ಮೈಕಟ್ಟು, ದುಂಡು ಮುಖ, ದುಂಡನೇಯ ಮೂಗೂ, ಬಿಳಿ ಕೂದಲು, ಸಣ್ಣಗೆ ಬಿಳಿ ಮೀಸೆ ದಾಡಿ ಬಿಟ್ಟಿರುತ್ತಾನೆ. ಸ್ವೇಟರ್, ನೀಲಿ ಹಾಪ್ ಶರ್ಟ, ಬಿಳಿ ಬನಿಯನ್ ನೀಲಿ ಕಲರ್ ಚಕ್ಸ ಲುಂಗಿ ಧರಿಸಿರುತ್ತಾನೆ.
ಈ ರೀತಿ ಚಹರೆಯುಳ್ಳ ವ್ಯಕ್ತಿಯ ವಾರಸುದಾರರು ಯಾರೂ ಪತ್ತೆಯಾಗಿರುವುದಿಲ್ಲ. ಸದರಿ ಮೃತನ ರಕ್ತ ಸಂಬಂಧಿಗಳು ಯಾರಾದರೂ ಪತ್ತೆಯಾದರೆ ಬೆಳಗಾವಿ ರೈಲ್ವೆ ಪೋಲಿಸ್ ಠಾಣೆ ದೂರವಾಣಿ ಸಂಖ್ಯೆ: (೦೮೩೧) ೨೪೦೫೨೭೩ ಪಿ.ಎಸ್.ಐ ಮೊಬೈಲ ನಂ:೯೪೮೦೮೦೨೧೨೭ ಅಥವಾ ರೈಲ್ವೆ ಪೊಲೀಸ್ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ. (೦೮೦) ೨೨೮೭೧೨೯೧ ಗೆ ಸಂಪರ್ಕಿಸಬಹುದು ಎಂದು ತನಿಖಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ಅಪರಿಚಿತ ವ್ಯಕ್ತಿ: ಸ್ವಾಭಾವಿಕ ಸಾವು
ಅಪರಿಚಿತ ವ್ಯಕ್ತಿ: ಸ್ವಾಭಾವಿಕ ಸಾವು
Suresh24/07/2023
posted on