This is the title of the web page
This is the title of the web page

Please assign a menu to the primary menu location under menu

Local News

ಬಸ್ ಸ್ಟಾಪನಲ್ಲಿ ಅಪರಿಚಿತ ವ್ಯಕ್ತಿ ಸಾವು


ಬೆಳಗಾವಿ : ಬೆಳಗಾವಿಯ ಹೈವೆ ರಸ್ತೆಯ ಬದಿಗಿರುವ ಮುಕ್ತಿಮಠ ಕ್ರಾಸ್ ಸಮೀಪವಿರುವ ಬಸ್ ಸ್ಟಾಪನಲ್ಲಿ ಅಪರಿಚಿತ ವ್ಯಕ್ತಿ ಮಲಗಿಕೊಂಡಲ್ಲಿಯೆ ಮೃತಪಟ್ಟಿದ್ದಾನೆ.

ಮೃತ ವ್ಯಕ್ತಿಯು ಸುಮಾರು 40 ರಿಂದ 45 ವರ್ಷದವನಾಗಿದ್ದು, 5 ಪುಟ್ 2 ಇಂಚ್ ಎತ್ತರ, ಗೊದಿ ಬಣ್ಣ ಮೈಬಣ್ಣ, ಉದ್ದ ಮೂಖ, ಉದ್ದ ಮೂಗು, ಬಿಳಿ ಬಣ್ಣದ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.

ಈ ಕುರಿತು ದಿನಾಂಕ 14/01/2022 ರಂದು ಬೆಳಗಾವಿ ತಾಲ್ಲೂಕಿನ ಜೋಗ್ಯಾನಟ್ಟಿ ಗ್ರಾಮಹದ್ದಿನಲ್ಲಿರುವ ರಾಜಪುರೋಹಿತ ದಾಬಾ ಮ್ಯಾನೇಜರ ಕಿಶನಸಿಂಗ ಸೃಜನಸಿಂಗ ರಾಠೋಡ ಅವರು ದೂರು ನೀಡಿದ್ದು, ಮೃತನ ಬಗ್ಗೆ ಕಾಕತಿ ಪೊಲೀಸ್ ಭಾಷೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಈ ಅಪರಿಚಿತ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲಿ ಕಾಕತಿ ಪೊಲೀಸ್ ಠಾಣೆ ಪೊನ
ನಂ- 0831-2405203, ಪಿ.ಐ ರವರ ಮೊ.ನಂ- 9480804115 ಗೆ ಮಾಹಿತಿ ತಿಳಿಸವಂತೆ ಕಾಕತಿ ಪೊಲೀಸ್ ಠಾಣೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply