ಬೆಳಗಾವಿ ಸುವರ್ಣಸೌಧ,ಡಿ.೧೯: ಬೆಳಗಾವಿಯ ಸುವರ್ಣಸೌಧದಲ್ಲಿ ರಾಷ್ಟ್ರೀಯ ನಾಯಕರುಗಳ ಭಾವಚಿತ್ರಗಳನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಬೆಳಗ್ಗೆ ಅನಾವರಣಗೊಳಿಸಿದರು.
ವಿಶ್ವಗುರು ಬಸವೇಶ್ವರರು, ಸ್ವಾಮಿ ವಿವೇಕಾನಂದ, ರಾಷ್ಟ್ರಪಿತ ಮಹಾತ್ಮಗಾಂಧೀಜಿ, ಸ್ವಾತಂತ್ರö್ಯ ಹೋರಾಟಗಾರರಾದ ನೇತಾಜಿ ಸುಭಾಷಚಂದ್ರ ಭೋಸ್, ಸರ್ದಾರ್ ವಲ್ಲಭಬಾಯಿ ಪಟೇಲ್, ವೀರಸಾವರ್ಕರ್, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಸುವರ್ಣಸೌಧದದ ವಿಧಾನಸಭೆಯ ಪ್ರಾಂಗಣದಲ್ಲಿ ಅಳವಡಿಸಲಾಗಿದೆ.
ಈ ಸಂದರ್ಭದಲ್ಲಿ ಸಚಿವರುಗಳಾದ ಜೆ.ಸಿ.ಮಾಧುಸ್ವಾಮಿ, ಗೋವಿಂದ ಕಾರಜೋಳ,ಸಿ.ಸಿ.ಪಾಟೀಲ್, ಕೋಟ ಶ್ರೀನಿವಾಸ ಪೂಜಾರಿ, ನಾರಾಯಣಗೌಡ, ಭೈರತಿ ಬಸವರಾಜ, ಪ್ರಭು ಚವ್ಹಾಣ ಸೇರಿದಂತೆ ಇನ್ನೀತರರು ಇದ್ದರು.
Gadi Kannadiga > Local News > ಬೆಳಗಾವಿ ಸುವರ್ಣಸೌಧದಲ್ಲಿ ರಾಷ್ಟ್ರೀಯ ನಾಯಕರುಗಳ ಭಾವಚಿತ್ರಗಳ ಅನಾವರಣ