ಕುಷ್ಠಗಿ:-ತಾಲೂಕಿನ ಗಂಗನಾಳ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಪೋಟೋಗೆ ಗ್ರಾಮಸ್ಥರು ಪೂಜೆ ಸಲ್ಲಿಸಿದರು.ನಂತರ ಮಾತನಾಡಿದ ಗ್ರಾಮಸ್ಥರಾದ ರಾಘವೇಂದ್ರರಾವ್ ದೇಸಾಯಿ ಜಗತ್ತಿಗೆ ರಾಮಾಯಣ ಎಂಬ ಮಹಾಕಾವ್ಯ ನೀಡಿದ ಆದಿಕವಿ
ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ
ಅಳವಡಿಸಿಕೊಂಡು ಮುನ್ನಡೆಯುವುದೇ ಆ ಮಹಾಸಂತನಿಗೆ ನಾವು ನೀಡುವ ನಿಜವಾದ ಗೌರವವಾಗಿದೆ. ಅವರು ಸಾರಿರುವ ಮೌಲ್ಯಗಳನ್ನು ಹಾಗೂ ಆದರ್ಶಗಳನ್ನು ನಾವೆಲ್ಲರೂ ಪಾಲಿಸೋಣ ಎಂದರು. ಈ ಸಂದರ್ಭದಲ್ಲಿ ಎಸ್ ಯಮನೂರ ಕೆ ಯಾಪಲದಿನ್ನಿ,ನಿರುಪಾದೆಪ್ಪ ಯಾಪಲದಿನ್ನಿ, ಕರಿಯಪ್ಪ ಕಮತರ, ದುರಗಪ್ಪ ಹತ್ತಿಗುಡ್ಡ ಉಮೇಶ್ ಚೌಡಕಿ, ರಾಘವೇಂದ್ರ ರಾವ್ ದೇಸಾಯಿ ನಾಗರಾಜ ಪೂಜಾರ, ಯಮನೂರ ಪ್ರಧಾನಿ ,ರವಿ ಮ್ಯಾಗೇರಿ ,ರವಿ ಕಲಬಾವಿ, ಕರಿಯಪ್ಪ ಹುಲೇಗುಡ್ಡ, ಸೇರಿದಂತೆ ಸಮಾಜದ ಹಿರಿಯರು ಮುಖಂಡರು,ಮಕ್ಕಳು ,ಗ್ರಾಮಸ್ಥರು ಉಪಸ್ಥಿತರಿದ್ದರು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ