ಬೆಳಗಾವಿ ೧೦- ನಗರದ ರಂಗಸಂಪದದವರು ತಿಲಕಚೌಕ ಹತ್ತಿರವಿರುವ ಲೋಕಮಾನ್ಯ ರಂಗಮಂದಿರದಲ್ಲಿ ಶರತ್ ನಾಟಕೋತ್ಸವವನ್ನು ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದರು. ಕೊನೆ ದಿನವಾದ ಇಂದು ಡಾ. ಎಸ್. ಎಲ್ ಭೈರಪ್ಪನವರ ವಂಶವೃಕ್ಷ ಕಥೆಯಾಧಾರಿತ ‘ವಂಶವೃಕ್ಷ’ ನಾಟಕವು ಪ್ರದರ್ಶನಗೊಂಡಿತು.
ಬೆಂಗಳೂರಿನ ವಟಿ ಕುಟೀರ ತಂಡದವರಿಂದ ಪ್ರದರ್ಶನಗೊಂಡ ವಂಶವೃಕ್ಷ ನಾಟಕವನ್ನು ಶ್ರೀಪತಿ ಮಂಜನಬೈಲು ರಂಗರೂಪಕ್ಕೆ ತಂದಿದ್ದು ಅಭಿರುಚಿ ಚಂದ್ರು ನಿರ್ದೇಶಿಸಿದ್ದಾರೆ.
‘ವಂಶವೃಕ್ಷ’. ನಾಟಕದ ಪ್ರಮುಖ ಪಾತ್ರವಾದ ವಿಧವೆ ಕಾತ್ಯಾಯಿನಿ ಮರುಮದುವೆ ಮಾಡಿಕೊಳ್ಳಲು ನಿರ್ಧರಿಸಿದಾಗ ಸಮಾಜದ ಪ್ರತಿಕ್ರಿಯೆ ಯಾವ ರೀತಿಯಿರುತ್ತದೆ. ಅಲ್ಲದೇ ಹೆಣ್ಣು ವಂಶೋದ್ಧಾರಕ್ಕೆ ಮಾತ್ರವೇ ಸೀಮಿತವೆ ಎಂಬ ವಿಷಯವನ್ನು ಈ ನಾಟಕ ಚರ್ಚಿಸುತ್ತ ಹೋಗುತ್ತದೆ.
ಕಲಾವಿದರೆಲ್ಲ ನೈಜ ಅಭಿನಯದಿಂದ ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಸುಮಾರು ಮುನ್ನೂರು ಪುಟಗಳ ಈ ಕಾದಂಬರಿಯನ್ನು ಎರಡು ಗಂಟೆಯಲ್ಲಿ ಜನರ ಮುಂದಿಡುವುದು ತುಂಬ ಕಷ್ಟದ ಕೆಲಸ. ಕಾದಂಬರಿ ಕಥೆಗೆ ಕುಂದು ಬರದಂತೆ. ಕನ್ನಡಿಯಲ್ಲಿ ಕರಿಯನ್ನು ತೋರಿಸುವಂತೆ. ಶ್ರೀಪತಿ ಮಂಜನಬೈಲು ಅವರು ರಂಗರೂಪಕ್ಕೆ ತಂದಿದ್ದಾರೆ. ರಂಗಸಂಪದದ ಡಾ. ಅರವಿಂದ ಕುಲಕರ್ಣಿ ಹಾಗೂ ತಂಡದವರು ಪ್ರೇಕ್ಷರವರೆಗೆ ತಲುಪಿಸಿದ್ದಾರೆ.
ಎರಡು ಗಂಟೆಗಳ ಈ ನಾಟಕ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿ ಕೊನೆಯವರೆಗೂ ಹಿಡಿದು ಕೂಡಿಸುವಲ್ಲಿ ಯಶಸ್ವಿಯಾಯಿತು. ನಾಟಕ ಮುಗಿದು ಹೊರಹೋಗುವಾಗ ಎಲ್ಲರದ್ದು ಒಂದೇ ಮಾತಾಗಿತ್ತು ‘ನಾಟಕ ಚೆನ್ನಾಗಿತ್ತು’
Gadi Kannadiga > Local News > ಪ್ರೇಕ್ಷರನ್ನು ಮಂತ್ರಮುಗ್ಧರನ್ನಾಗಿಸಿದ ‘ವಂಶವೃಕ್ಷ’