This is the title of the web page
This is the title of the web page

Please assign a menu to the primary menu location under menu

Local News

ವಿವಿಧ ಜಾತಿಯ ಸಸಿಗಳು: ರಿಯಾಯಿತಿ ದರದಲ್ಲಿ ಮಾರಾಟ


ಬೆಳಗಾವಿ,ಜೂನ್೨೦: ಪ್ರಸಕ್ತ ೨೦೨೨-೨೩ನೇ ಸಾಲಿನಲ್ಲಿ ಬೆಳಗಾವಿ ಅರಣ್ಯ ಪ್ರಾದೇಶಿಕ ಅರಣ್ಯ ವಿಭಾಗದ ಬೆಳಗಾವಿ, ಕಾಕತಿ, ನೇಸರಗಿ, ಗುಜನಾಳ, ಖಾನಾಪೂರ, ಕಣಕುಂಬಿ, ಲೋಂಡಾ, ನಾಗರಗಾಳಿ ಹಾಗೂ ಗೋಲಿಹಳ್ಳಿ ವಲಯಗಳಲ್ಲಿ ಆರ್‌ಎಸ್‌ಪಿಡಿ ಯೋಜನೆಯಡಿ ೬”x೯” & ೮”x೧೨” ಅಳತೆಯ ವಿವಿಧ ಜಾತಿಯ ಸಸಿಗಳನ್ನು ಬೆಳೆಸಿ ರಿಯಾಯತಿ ದರದಲ್ಲಿ ರೈತರಿಗೆ ಹಾಗೂ ಸಾರ್ವಜನಕರಿಗೆ ವಿತರಣೆ ಮಾಡಲಾಗುತ್ತಿದ್ದು ಈ ಕುರಿತು ೬”x೯” ಅಳತೆಯ ಪ್ರತಿ ಸಸಿಗೆ ರೂ. ೧.೦೦ ಹಾಗೂ ೮”x೧೨” ಅಳತೆ ಪ್ರತಿ ಸಸಿಗೆ ರೂ. ೩.೦೦ ರಿಯಾಯತಿ ದರ ಇದ್ದು ರೈತರು ಹಾಗೂ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಸಸಿಗಳನ್ನು ಖರೀದಿಸಬಹುದು ಎಂದು ಬೆಳಗಾವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply