This is the title of the web page
This is the title of the web page

Please assign a menu to the primary menu location under menu

State

ತಾಲೂಕಾ ಬಣಜಿಗರ ಸಂಘ ಮಹಿಳಾ ಘಟಕದ ವತಿಯಿಂದ ಬಸವ ಜಯಂತಿ ಅಂಗವಾಗಿ ಮಕ್ಕಳಿಂದ ವಿವಿಧ ಕಾರ್ಯಕ್ರಮ


ಕುಷ್ಟಗಿ:- ತಾಲೂಕಾ ಬಣಜಿಗರ ಸಂಘ ಮಹಿಳಾ ಘಟಕದ ವತಿಯಿಂದ ಬಸವ ಜಯಂತಿ ನಿಮಿತ್ಯ ನಗರದ ಬಸವ ಭವನದಲ್ಲಿ ಮಕ್ಕಳಿಗೆ ವಚನ ಗಾಯನ ಹಾಗೂ ಶರಣ ಶರಣೆಯರ ವೇಷ ಭೂಷಣ ಸ್ಪರ್ಧೆ ಇಂದು ಏರ್ಪಡಿಸಲಾಗಿತ್ತು. ಸಾನಿಧ್ಯವನ್ನು ಅತ್ತಿವೇರಿ ಬಸವೇಶ್ವರಿ ಮಾತಾಜಿ ವಹಿಸಿದ್ದರು.ನಂತರ ಮಾತನಾಡಿದ ಅವರು ಚಿಕ್ಕ ಮಕ್ಕಳಲ್ಲಿ ಈ ವಯಸ್ಸಿನಿಂದಲೇ ಸಂಸ್ಕಾರ ಕಲಿಸಿದರೆ ಸಮಾಜಕ್ಕೆ ಅವರು ಒಳ್ಳೆಯ ಕೊಡುಗೆ ನೀಡುತ್ತಾರೆ ಎಂದರು. ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿ ಮಾತನಾಡಿದ ಪ್ರಭಾ ಬಂಗಾರಶೆಟ್ಟರ ಮಾತನಾಡಿ ಕಳೆದ ಹಲವು ವರುಷಗಳಿಂದ ಬಸವ ತತ್ವ ಪ್ರಚಾರದಂತಹ ಕೆಲಸಗಳು ನಗರದಲ್ಲಿ ಆರಂಭಗೊಂಡಿದ್ದು ಬಸವ ಮೂರ್ತಿ, ಬಸವ ಭವನ ನಿರ್ಮಾಣಗೊಂಡು ನಮ್ಮ ಕೆಲಸಗಳಿಗೆ ಸ್ಪೂರ್ತಿ ನೀಡಿವೆ ಎಂದರು. ಮುಖ್ಯ ಅತಿಥಿಗಳಾಗಿ ಬಸವ ಸಮಿತಿ ಅಧ್ಯಕ್ಷ ಶಿವಸಂಗಪ್ಪ ಬಿಜಕಲ್ಲ ಇದ್ದರು.
ಈ‌ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಸವಿತಾ ಮಳಗಿ, ರತ್ನಾ ಪಡಿ, ರತ್ನಾ ಹೊಸವಕ್ಕಲ, ಶಾಂತಾ ಹೊಸವಕ್ಕಲ, ಶರಣಮ್ಮ ಅಂಗಡಿ, ಶಿಲ್ಪ ಸುಂಕದ ಗುರುಬಸಮ್ಮ ಕವಲಿ, ಶಶಿಕಲ ಕುಡತಿನಿ, ಅಶ್ವಿನಿ ಪಾಟೀಲ, ಗಿರಿಜನರ ಚಿನಿವಾಲ ಗೌರಮ್ಮ ಕುಡತಿನಿ , ಬಸಮ್ಮ ಹೊಸವಕ್ಕಲ, ನೀಲಮ್ಮ ಮಹಾಲಿಂಗಪೂರ,
ಮಂಜುಳಾ ಪಟ್ಟಣಶೆಟ್ಟಿ, ಪ್ರಿಯಾಂಕ ಅಂಗಡಿ ರೇಖಾ ಮಂಟಗೇರಿ,ಚೈತನ್ಯ ಬಳ್ಳೊಳ್ಳಿ ಪ್ರಥಮ, ಓಂಕಾರೇಶ್ವರಿ ಪಟ್ಟಣಶೆಟ್ಟಿ ದ್ವೀತೀಯ, ಹರಿಪ್ರಿಯ ಬಳ್ಳೊಳ್ಳಿ ಸೇರಿದಂತೆ ಇತರರು ಭಾಗವಹಿಸಿದ್ದರು.

ಆರ್ ಶರಣಪ್ಪ ಗುಮಗೇರಾ

ಕೊಪ್ಪಳ


Leave a Reply