- ಬೆಂಗಳೂರು : ಕರ್ನಾಟಕ ಘನ ಸರಕಾರ ಕರಾವಳಿ ದೈವಾರಧಕರಿಗೆ ಮಾಸಾಶನ ನೀಡುವ ಸರಕಾರದ ನಿರ್ಧಾರವನ್ನು ಸ್ವಾಗತಿಸಿರುವ ವೀರಶೈವ ಲಿಂಗಾಯತ ಸಂಘಟನೆ ವೇದಿಕೆ ಅಧ್ಯಕ್ಷ ಮಾಡಿ ಅವರು ವೀರಗಾಸೆ ಕಲಾವಿದರಿಗೆ ಮಾಸಾಶನ ನೀಡುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ .
ಈ ಸಂಬಂಧ ಮುಖ್ಯಮಂತ್ರಿಗಳಿಗೆ ಮನವಿಯೊಂದನ್ನು ನೀಡಿರುವ ಅವರು ಸಂದರ್ಭದಲ್ಲಿ ಕರ್ನಾಟಕ ಘನ ಸರ್ಕಾರದ ಹೃದಯ ವೈಶಾಲ್ಯತೆಯನ್ನು ಪ್ರಶಂಸಿಸುತ್ತ ಉತ್ತರ ಕರ್ನಾಟಕದ ವೀರಭದ್ರ (ವೀರಗಾಸೆ) ಕುಣಿತವನ್ನು ಮಾಡುವವರಿಗೂ ಕೂಡ ಕರಾವಳಿಯ ದೈವಾರಾಧಕರಿಗೆ ನೀಡುವ ಮಾದರಿಯಲ್ಲಿ ಮಾಸಿಕ ರೂ. ೨೦೦೦ ರೂಪಾಯಿಗಳನ್ನು ನೀಡಿ ಪ್ರೋತ್ಸಾಹಿಸಬೇಕೆಂದು ಅವರು ಆಗ್ರಹಿಸಿದ್ದಾರೆ .
ಈ ನಾಡು ಕಂಡ ಶ್ರೇಷ್ಠ ಸಂಶೋಧಕರಾದ ಡಾಟಟ ಜ.ಚ.ನಿ. ಯವರಿಂದ ಕನ್ನಡಿಗರ ಮೂಲಪುರುಷ ಶ್ರೀ ವೀರಭದ್ರ ಎಂದು ಹೇಳಲ್ಪಟ್ಟಿದೆ. ವೀರಭದ್ರ ದೇವರ ಪರಂಪರೆ ಸಂಸ್ಕöತಿ ಮತ್ತು ಪ್ರಾಗೈತಿಹಾಸಿಕ ಹಿನ್ನೆಲೆಯನ್ನು ತಮ್ಮ ಒಡಪುಗಳ ಮೂಲಕ ಜನಮಾನಸದಲ್ಲಿ ಅಚ್ಚಳಿಯದೆ ಪರಿಣಾಮ ಬೀರುವ ನಿಟ್ಟಿನಲ್ಲಿ ಕಾರ್ಯತತ್ಪರರಾಗಿರುವ ಕನ್ನಡ ನಾಡಿನ ವೀರಗಾಸೆ ಕಲಾವಿದರಿಗೆ ಆದಷ್ಟು ಬೇಗ ಮಾಸಾಶನ ದೊರೆಯುವಂತೆ ಆದೇಶವನ್ನು ನೀಡಿ ಪ್ರೋತ್ಸಾಹಿಸಬೇಕೆಂದು ಅವರು ಮನವಿಯಲ್ಲಿ ವಿನಂತಿಸಿದ್ದಾರೆ .
Gadi Kannadiga > State > ವೀರಗಾಸೆ ಕಲಾವಿದರಿಗೆ ಮಾಸಾಶನ ನೀಡುವಂತೆ ವೀರಶೈವ ಲಿಂಗಾಯತ ವೇದಿಕೆ ಆಗ್ರಹ