This is the title of the web page
This is the title of the web page

Please assign a menu to the primary menu location under menu

State

ಮಾರಾಟಗಾರರು ಹಾಗೂ ಕಂಪನಿಗಳು ರೈತರಿಗೆ ರಸಗೊಬ್ಬರ ಲಿಂಕ್ ಮಾಡದೇ ನೀಡಿ


ಕೊಪ್ಪಳ, ಸೆ. ೧೫: ಜಿಲ್ಲೆಯ ರಸಗೊಬ್ಬರ ಮಾರಾಟಗಾರರು ಹಾಗೂ ಕಂಪನಿಗಳು ರೈತರಿಗೆ ರಸಗೊಬ್ಬರ ಲಿಂಕ್ ಮಾಡದೇ ನೀಡುವಂತೆ ಕೊಪ್ಪಳ ಜಂಟಿ ಕೃಷಿ ನಿರ್ದೇಶಕ ಸದಾಶಿವ ಅವರು ಸೂಚನೆ ನೀಡಿದ್ದಾರೆ.
ಕೊಪ್ಪಳ ಜಿಲ್ಲೆಯ ವಿವಿಧ ರಸಗೊಬ್ಬರ ಮಾರಾಟ ಮಳಿಗೆಗಳಲ್ಲಿ ಮೂಲ ರಸಗೊಬ್ಬರವಾದ ಯೂರಿಯಾ ಹಾಗೂ ಡಿಎಪಿ ಯನ್ನು ರೈತರು ಖರೀದಿಸುವ ಸಂದರ್ಭದಲ್ಲಿ ಮೂಲ ರಸಗೊಬ್ಬರದೊಡನೆ ರೈತರಿಂದ ಬೇಡಿಕೆ ಇಲ್ಲದಿದ್ದರೂ ರಸಗೊಬ್ಬರ ಮಾರಾಟಗಾರರು ಹಾಗೂ ಕಂಪನಿಗಳು ತಮ್ಮ ಸಂಸ್ಥೆಯ ಸೆಟ್ರೆöÊಟ್, ಕಾಂಪ್ಲೆಕ್ಸ್, ಪೋಟ್ಯಾಶ್ ಹಾಗೂ ಮೈಕ್ರೋನ್ಯೂಟ್ರಿಯಂಟ್ಸ್ ಕಡ್ಡಾಯವಾಗಿ ಜೋಡಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಜಿಲ್ಲೆಯ ರೈತರು ಹಾಗೂ ಸಂಘಟನೆಗಳಿಂದ ದೂರುಗಳು ಬರುತ್ತಿವೆ.
ಇನ್ನು ಮುಂದೆ ಕೊಪ್ಪಳ ಜಿಲ್ಲೆಯ ಸಗಟು ಮತ್ತು ಚಿಲ್ಲರೆ ರಸಗೊಬ್ಬರ ಮಾರಾಟಗಾರರ ಮೂಲಕ ರೈತರಿಗೆ ರಸಗೊಬ್ಬರವನ್ನು ವಿತರಿಸುವಾಗ ತಮ್ಮ ಸಂಸ್ಥೆಯ ಇತರೆ ರಸಗೊಬ್ಬರ ಲಘು ಪೋಷಕಾಂಶಗಳನ್ನು ಜೋಡಣೆ ಮಾಡಿ ಖರೀದಿಸಲು ಒತ್ತಾಯ ಮಾಡುವುದು ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಈ ಮೂಲಕ ಜಿಲ್ಲೆಯ ರಸಗೊಬ್ಬರ ಮಾರಾಟಗಾರರು ಹಾಗೂ ಕಂಪನಿಯವರಿಗೆ ಎಚ್ಚರಿಕೆ ನೀಡಲಾಗಿದೆ. ಈ ಆದೇಶ ಮೀರಿ ರೈತರಿಗೆ ಯಾವುದಾರೂ ಷರತ್ತುಗಳನ್ನು ವಿಧಿಸಿರುವ ಬಗ್ಗೆ ದೂರುಗಳು ಕಂಡು ಬಂದಲ್ಲಿ ಅಂತಹ ಮಾರಾಟಗಾರರ ಹಾಗೂ ಸಂಸ್ಥೆಯ ಮೇಲೆ ಅಗತ್ಯ ವಸ್ತುಗಳ ಕಾಯ್ದೆ ೧೯೫೫ ಮತ್ತು ರಸಗೊಬ್ಬರ ನಿಯಂತ್ರಣ ಆದೇಶ ೧೯೮೫ ರಡಿ ಕಾನೂನು ರೀತಿಯ ಕ್ರಮಕೈಗೊಳ್ಳಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.


Gadi Kannadiga

Leave a Reply