This is the title of the web page
This is the title of the web page

Please assign a menu to the primary menu location under menu

State

ಸುಧಾಮ್ ದಾಸ್ ಎಂಬ ವ್ಯಕ್ತಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡದಿರಲು ವೆಂಕಟೇಶ್ ಹೆಗಡೆ ಒತ್ತಾಯ


ಬಳ್ಳಾರಿ ಜೂನ್ ೨೭.ವಿಧಾನ ಪರಿಷತ್‌ನಲ್ಲಿ ಖಾಲಿ ಇರುವ ಸ್ಥಾನಗಳ ಭರ್ತಿಗೆ ಸರ್ಕಾರ ಮುಂದಾಗಿದ್ದು, ಈ ಪೈಕಿ ಒಂದು ಸ್ಥಾನವನ್ನು ಎಸ್‌ಸಿ ಎಡಗೈ ಸಮುದಾಯಕ್ಕೆ ನೀಡಲು ಮುಂದಾಗಿದೆ ಎಂದು ತಿಳಿದುಬಂದಿದೆ. ಅದ್ಯಾಗೋ ಯಾರೋ ಸುಧಾಮ್ ದಾಸ್ ಎಂಬ ವ್ಯಕ್ತಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನವನ್ನು ನಾಮಕರಣ ಮಾಡಬೇಕಂತ ಹೇಳಿ ಹೈಕಮಾಂಡ್ನಲ್ಲಿ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ, ಆ ವ್ಯಕ್ತಿ ಯಾರು ಅನ್ನೋದೇ ನಮ್ಮ ಸಮಾಜದ ನಾಯಕರಿಗಳಿಗೆ ಮತ್ತು ನಮ್ಮ ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಗೊತ್ತಿಲ್ಲ ಮತ್ತು ಅವರು ಎಷ್ಟು ವರ್ಷದಿಂದ ಪಕ್ಷಕ್ಕೆ ದುಡಿದಿದ್ದಾರೆ ಎಂಬುದೇ ತಿಳಿದಿಲ್ಲ, ಹಾಗಾಗಿ ಆ ವ್ಯಕ್ತಿಗೆ ಸ್ಥಾನವನ್ನು ನೀಡುವುದಕ್ಕೆ ನಮ್ಮ ಸಮಾಜದ ಪ್ರಬಲ ವಿರೋಧವಿದೆ, ಯಾವುದೇ ಕಾರಣಕ್ಕೂ ಆ ವ್ಯಕ್ತಿಗೆ ನೀಡಬಾರದು, ಪಕ್ಷದಲ್ಲಿ ಅನೇಕ ವರ್ಷದಿಂದ ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿದಂತಹ ನಾಯಕರುಗಳಿಗೆ ನೀಡಬೇಕೆಂದು ವೆಂಕಟೇಶ್ ಹೆಗಡೆ, ವಕೀಲರು,ಕೆಪಿಸಿಸಿ ಮಾಧ್ಯಮ ವಕ್ತಾರರು ಹಾಗೂ ಕೆಪಿಸಿಸಿ ರಾಜ್ಯ ಜಂಟಿ ಸಂಯೋಜಕರು ಪ್ರಚಾರ ಸಮಿತಿ ಒತ್ತಾಯಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ೪೦ ಸೀಟುಗಳಲ್ಲಿ ಈ ಭಾಗದಲ್ಲಿ ಒಂದು ಸೀಟನ್ನು ಎಡಗೈ ಸಮುದಾಯಕ್ಕೆ ನೀಡಲಿಲ್ಲ, ಹಾಗೂ ಸೀಟು ಹಂಚಿಕೆಯಲ್ಲಿ ಉಂಟಾದ ಗೊಂದಲದ ಕಾರಣದಿಂದಾಗಿ ನಾವು ಒಟ್ಟು ೮ ಸೀಟುಗಳ ಪೈಕಿ ೨ ಸೀಟನ್ನು ಮಾತ್ರ ಪಡೆದುಕೊಂಡಿದ್ದೇವೆ. ಅದೂ ಅಲ್ಲದೆ ಕಳೆದ ೧೦ ವರ್ಷಗಳಿಂದ ಬಳ್ಳಾರಿ ಜಿಲ್ಲೆಗೆ ಒಂದು ಎಸ್‌ಸಿ ವಿಧಾನ ಪರಿಷತ್ ಸ್ಥಾನ ನೀಡಬೇಕು ಎಂಬ ಚರ್ಚೆ ನಡೆಯುತ್ತಲೇ ಇದೆ. ಕಳೆದ ಬಾರಿಯ ಲೋಕಸಭಾ ಉಪ ಚುನಾವಣೆ ವೇಳೆ ನಮ್ಮ ಬಳ್ಳಾರಿ ಎಸ್‌ಟಿ ಮೀಸಲು ಕ್ಷೇತ್ರದಿಂದ ವಿ.ಎಸ್. ಉಗ್ರಪ್ಪ ರವರನ್ನು ಕಣಕ್ಕೆ ಇಳಿಸಿ, ಗೆಲ್ಲಿಸಲಾಯಿತು. ಅವರು ವಿಧಾನ ಪರಿಷತ್ ಸ್ಥಾನಕ್ಕೆ ರಾಜಿನಾಮೆ ನೀಡಿ, ಸಂಸತ್‌ಗೆ ಸ್ಪರ್ಧೆಮಾಡಿದ್ದರು. ಅವರ ರಾಜಿನಾಮೆಯಿಂದ ತೆರವಾದ ಸ್ಥಾನವನ್ನು ಬಳ್ಳಾರಿ ಜಿಲ್ಲೆಗೆ ಕೊಡಬೇಕು ಮತ್ತು ಎಸ್‌ಸಿ ಯಲ್ಲಿ ಎಡಗೈ ಸಮುದಾಯಕ್ಕೆ ನೀಡಬೇಕು ಎಂದು ಒತ್ತಡ ಹೇರಲಾಗಿತ್ತು. ಇದಕ್ಕೆ ಪಕ್ಷ ತಾತ್ಪೂವಿಕವಾಗಿ ಒಪ್ಪಿಗೆ ಸಹ ನೀಡಿತ್ತು. ಆದರೆ, ಅದು ಈಡೇರಲೇ ಇಲ್ಲ. ಇದೀಗ ಮತ್ತೊಂದು ಅವಕಾಶ ಇದೆ. ಪಕ್ಷದ ಮುಖಂಡರು ಈಗಲಾದರೂ ಬಳ್ಳಾರಿ ಜಿಲ್ಲೆಗೆ ನ್ಯಾಯ ಒದಗಿಸಬೇಕು. ನಾನು ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದೇನೆ. ನನ್ನ ಸೇವೆಯನ್ನು ಪರಿಗಣಿಸಿ, ಸ್ಥಾನಮಾನ ನೀಡಬೇಕು. ಇಲ್ಲವೇ ಜಗದೀಶ್ ಶೆಟ್ಟರ್ ಅವರಿಗೆ ಅವಕಾಶ ಕೊಟ್ಟಂತೆ ನಮ್ಮ ಎಡಗೈ ಸಮುದಾಯದ ಪ್ರಮುಖ ನಾಯಕ, ಮಾಜಿ ಸಚಿವ ಎಚ್.ಆಂಜನೇಯ ಅವರನ್ನು ಇದೇ ಕೋಟಾದಡಿ ವಿಧಾನ ಪರಿಷತ್‌ಗೆ ನೇಮಕಮಾಡಬೇಕು. ಆಂಜನೇಯ ರವರು ಪಕ್ಷಕ್ಕಾಗಿ ವಿದ್ಯಾರ್ಥಿ ದಿಸೆಯಿಂದ ದುಡಿದುಕೊಂಡು ಬಂದಿದ್ದಾರೆ. ಅವರ ಸೇವೆ ಪರಿಗಣಿಸಿ, ಅವರಿಗೆ ಒಂದು ಅವಕಾಶ ಕೊಡಬೇಕು. ಸಮಾಜದ ಎಲ್ಲಾರ ಪರವಾಗಿ ಮತ್ತು ಪಕ್ಷದ ನಿಷ್ಠಾವಂತ ನಾಯಕನಾಗಿ ಕೋರಿದ್ದಾರೆ.


Leave a Reply