This is the title of the web page
This is the title of the web page

Please assign a menu to the primary menu location under menu

Local News

ಹಿರಿಯ ರಂಗ ಕಲಾವಿದೆ ಲಕ್ಷ್ಮೀ ಬಾಯಿ ಏಣಗಿ ನಿಧನ


ಧಾರವಾಡ : ಪ್ರಸಿದ್ದ ರಂಗ ಕಲಾವಿದೆ ಹಾಗೂ ದಿ. ಏಣಗಿ ಬಾಳಪ್ಪ ಅವರ ಧರ್ಮ ಪತ್ನಿ ಶ್ರೀಮತಿ ಲಕ್ಷ್ಮಿಬಾಯಿ ಬಾಳಪ ಏಣಗಿ (೯೬) ಮಂಗಳವಾರ ಬೆಳಗ್ಗೆ ಇಲ್ಲಿನ ರಜತಗಿರಿ ನಿವಾಸದಲ್ಲಿ ನಿಧನರಾದರು.

ಚಿತ್ರನಟ ದಿ. ನಟರಾಜ ಏಣಗಿ ಹಾಗೂ ಓರ್ವಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ.
ಅವರ ಅಂತ್ಯ ಕ್ರಿಯೆ ಇಂದು ಮಧ್ಯಾನ 2:೦೦ ಗಂಟೆಗೆ ಹೋಸಯಲಾಪೂರ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

೧೯೪೦-೫೦ ರ ದಶಕದಲ್ಲಿ ಕನ್ನಡ ಮತ್ತು ಮರಾಠಿ ರಂಗಭೂಮಿ ಯಲ್ಲಿ ಪ್ರಸಿದ್ದ ನಟಿಯಾಗಿದ್ದ ಅವರು ಕರ್ನಾಟಕದ ಏಕೀಕರಣ ಚಳುವಳಿ ಆರಂಭವಾದಾಗ ತಮ್ಮ ನಾಟಕಗಳ ಮೂಲಕವೇ ಕನ್ನಡ ಕಟ್ಟುವ ಕೆಲಸ ಮಾಡಿದರು.
ಸಿಂಗಾರೆವ್ವ ಮತ್ತು ಅರಮನೆ ಸೇರಿದಂತೆ ಹತ್ತಾರು ಕನ್ನಡ ಸಿನಿಮಾ ಗಳಲ್ಲಿ ನಟಿಸಿರುವ ಅವರು ಇಡೀ ತಮ್ಮ ಜೀವನವನ್ನೇ ರಂಗಭೂಮಿಗಾಗಿ ಮುಡುಪಾಗಿಟ್ಟಿದ್ದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ನೂರಕ್ಕೂ ಹೆಚ್ಚು ರಂಗ ಸನ್ಮಾನಗಳು ಅವರ ಮುಡಿಗೇರಿದ್ದವು.


Gadi Kannadiga

Leave a Reply