This is the title of the web page
This is the title of the web page

Please assign a menu to the primary menu location under menu

Local News

ಪಶು ಮಿತ್ರ ಉಚಿತ ತರಬೇತಿ


ಬೆಳಗಾವಿ,ಜೂನ್೧೭): ಕೆನರಾ ಬ್ಯಾಂಕ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (ಸಿಬಿಆರ್‌ಸೆಟಿ) ಬೆಳಗಾವಿ ಜಿಲ್ಲೆಯ ಯುವಕ ಯುವತಿಯರಿಗೆ, ನಿರುದ್ಯೋಗಿಗಳಿಗೆ ಜೂನ್ ೨೪ ರಂದು ಪಶು ಮಿತ್ರ ತರಬೇತಿಯನ್ನು ನೀಡಲಾಗುವುದು.
ಈ ತರಬೇತಿಯಲ್ಲಿ ಹೈನುಗಾರಿಕೆ, ಕುರಿ/ಆಡು ಸಾಕಾಣಿಕೆ ಮತ್ತು ಹಂದಿ ಸಾಕಾಣಿಕೆ ಕುರಿತು ನೀಡಲಾಗುವುದು. ಭಾಗವಹಿಸಲಿರುವ ಅಭ್ಯರ್ಥಿಗಳು ನಿರುದ್ಯೋಗಿಗಳಾಗಿದ್ದು, ೧೮ ರಿಂದ ೪೫ ವರ್ಷದ ವಯೋಮಿತಿಯಲ್ಲಿರಬೇಕು. ತರಬೇತಿ ಪಡೆದ ನಂತರ ಸ್ವ ಉದ್ಯೋಗ ಕೈಗೊಳ್ಳಲು ಸಿದ್ಧರಿರಬೇಕು. ತರಬೇತಿಯ ಅವಧಿಯಲ್ಲಿ ಉಚಿತ ಊಟ ಮತ್ತು ವಸತಿ ಸೌಲಭ್ಯವಿದೆ.
ತರಬೇತಿ ಪಡೆಯಲಿಚ್ಚಿಸುವ ಅಭ್ಯರ್ಥಿಗಳು, ಬಿಳಿ ಹಾಳೆಯ ಮೇಲೆ ಅಥವಾ ನಮ್ಮ ಸಂಸ್ಥೆಯಲ್ಲಿ ದೊರೆಯುವ ಅರ್ಜಿ ನಮೂನೆಯಲ್ಲಿ ತಮ್ಮ ಹೆಸರು, ವಿಳಾಸ, ವಿದ್ಯಾಭ್ಯಾಸ, ಮುಂತಾದ ಮಾಹಿತಿಗಳನ್ನು ಬರೆದು ಅರ್ಜಿಯ ಜೊತೆಗೆ, ಆಧಾರ ಕಾರ್ಡ, ಬ್ಯಾಂಕ ಪಾಸಬುಕ್ ಝೆರಾಕ್ಸ್ ಪ್ರತಿಗಳನ್ನು ಲಗತ್ತಿಸಿ ಜೂನ್ ೨೦ರೊಳಗಾಗಿ ಸಂಸ್ಥೆಗೆ ತಲುಪುವಂತೆ ಕಳುಹಿಸಲು ಸೂಚಿಸಲಾಗಿದೆ. ಮಾಹಿತಿಗಾಗಿ ನಿರ್ದೇಶಕರು, ಕೆನರಾ ಬ್ಯಾಂಕ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (ಸಿ ಬಿ ಆರ್‌ಸೆಟಿ), ಪ್ಲಾಟ ನಂ. ಸಿ ಎ -೦೩ (ಪಾರ್ಟ) ಕಣಬರ್ಗಿ ಇಂಡಸ್ಟ್ರಿಯಲ್ ಏರಿಯಾ, ಆಟೋ ನಗರ. ಬೆಳಗಾವಿ. ದೂರವಾಣಿ ಸಂಖ್ಯೆ ೮೨೯೬೭೯೨೧೬೬, ೯೮೪೫೭೫೦೦೪೩, , ೮೮೬೭೩೮೮೯೦೬ ಇವರನ್ನು ಸಂಪರ್ಕಿಸಬಹುದು ಎಂದು ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply