This is the title of the web page
This is the title of the web page

Please assign a menu to the primary menu location under menu

Local News

ಬಿಜೆಪಿ ಮಹಾನಗರ ಹಾಗೂ ಅನಿಲ ಬೆನಕೆ ನೇತೃತ್ವದಲ್ಲಿ ವಿಜಯೋತ್ಸವ ಆಚರಣೆ


ಬೆಳಗಾವಿ: ಎನ್ ಡಿ ಎ ಮೈತ್ರಿಕೂಟದ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಬೆಳಗಾವಿ ಉತ್ತರ ಮತ ಕ್ಷೇತ್ರದ ಶಾಸಕ ಅನಿಲ ಬೆನಕೆ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಗಿದೆ.

ಗುರುವಾರ ಬೆಳಗಾವಿ ಗ್ಯಾಂಗವಾಡಿ ಮರಗಾಯಿದೇವಿ ಮಂದಿರದ ಬಳಿ ಉತ್ತರ ಮತ ಕ್ಷೇತ್ರದ ಶಾಸಕ ಅನಿಲ ಬೆನಕೆ ಅವರು ಬಿಜೆಪಿ ಪದಾದಿಕಾರಗಳ ಜೊತೆಗೆ ವಿಜಯೋತ್ಸವ ಆಚರಿಸಿ ದ್ರೌಪದಿ ಮುರ್ಮು ಅವರಿಗೆ ಶುಭ ಹಾರೈಸಿದರು.

ಈ ವೇಳೆ ಮಾತನಾಡಿ ಶಾಸಕ ಅನಿಲ ಬೆನಕೆ ಅವರು, ಇಂದಿನ ದಿನವನ್ನು ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆಯಬೇಕು. ಒಬ್ಬ ಬಡ ಆದಿವಾಸಿ ಮಹಿಳೆ ನಮ್ಮ ದೇಶದ ರಾಷ್ಟ್ರಪತಿ ಆಗುತ್ತಿದ್ದಾರೆ. ದ್ರೌಪದಿ ಮುರ್ಮು ಅವರು ಎಂ ಎಲ್ ಎ, ಎಂಪಿ ಆಗಿ ಜೊತೆಗೆ ಉತ್ತರಾಖಂಡ ಹಾಗೂ ಜಾರ್ಖಂಡ್ ರಾಜ್ಯಗಳ ರಾಜ್ಯಪಾಲರಾಗಿ ಸಾಕಷ್ಟು ಸೇವೆಯನ್ನು ಮಾಡಿದ್ದಾರೆ. ಇಂದು ಅವರು ರಾಷ್ಟ್ರಪತಿ ಆಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಆದಿವಾಸಿ ಜನರನ್ನು ಅಭಿವೃದ್ಧಿ ಪಡಿಸಲು ದ್ರೌಪದಿ ಮುರ್ಮು ಅವರ ಹೆಸರನ್ನು ಬಿಜೆಪಿ ಘೋಷಣೆ ಮಾಡಿ,ಇಂದು ಅವರನ್ನು ರಾಷ್ಟ್ರಪತಿ ಆಗಿ ಮಾಡಿದ್ದು ಸಂತೋಷ ಸಂಗತಿ. ಬಿಜೆಪಿ ಪಕ್ಷವು ಬಡವರಲ್ಲಿ ಅತೀ ಬಡವರ ಪರವಾಗಿ ಸದಾ ಇರುತ್ತದೆ ಎಂದು ಮತ್ತೊಮ್ಮೆ ಸಾಭಿತು ಪಡಿಸಿದೆ ಎಂದು ಖುಷಿ ವ್ಯಕ್ತಿ ಪಡಿಸಿದರು.

ಈ ವೇಳೆ ಶಾಸಕ ಅನಿಲ ಬೆನಕೆ ಅವರು ಹಾಗೂ ಬಿಜೆಪಿ ಪದಾದಿಕಾರಿಗಳು ಜಯ ಘೋಷಣೆಯೊಂದಿಗೆ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಬಿಜೆಪಿ ಉತ್ತರ ಮಂಡಳ ಅಧ್ಯಕ್ಷ ವಿಜಯ ಕೊಡಗನವರ, ಜನರಲ್ ಸೆಕ್ರೆಟರಿ ದಾದಾಗೌಡಾ ಬಿರಾದರ, ನಗರ ಸೇವಕರಾದ ಜಯತಿರ್ಥ ಸವದತ್ತಿ, ಸಂದೀಪ ಜೀರ್ಗಿಹಾಳ, ವೀಣಾ ವಿಜಾಪೂರೆ, ಸವಿತಾ ಕಾಂಬಳೆ ಸೇರಿದಂತೆ ಹಿರಯ್ಯ ಕೋತ, ಮಹಾದೇವ ರಾಠೋಡ, ಮುರಗೇಂದ್ರಗೌಡ ಪಾಟೀಲ್, ಪವನ ಹುಗಾರ, ಪ್ರವೀಣ ಪಾಟೀಲ್, ರಾಜು ಮಿಶಿ, ಮಂಜುನಾಥ ಪಮ್ಮಾರ, ವಿಜಯ ಭದ್ರಾ ಸೇರಿದಂತೆ ಬಿಜೆಪಿ ಮಹಿಳಾ ಮಂಡಳದ ಸದಸ್ಯರು ಉಪಸ್ಥಿತರಿದ್ದರು.


Gadi Kannadiga

Leave a Reply