This is the title of the web page
This is the title of the web page

Please assign a menu to the primary menu location under menu

Local News

ವಿಟಿಯು ಕುಲಪತಿಯಾಗಿ ವಿದ್ಯಾಶಂಕರ ನೇಮಕ


ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಮಸೂರಿನ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ವಿದ್ಯಾಶಂಕರ ನೇಮಕವಾಗಿದ್ದಾರೆ. ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆಗಿರುವ ರಾಜ್ಯಪಾಲರು ಈ ಕುರಿತು ಆದೇಶ ಹೊರಡಿಸಿದ್ದಾರೆ.

ಬೆಳಗಾವಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿಟಿಯು ಅತ್ಯುನ್ನತ ಹುದ್ದೆಗೆ ಆಯ್ಕೆ ಮಾಡಿರುವ ಪಟ್ಟಿಯು ಮೂವರು ಅಭ್ಯರ್ಥಿಗಳ ವಿರುದ್ಧ ಗಂಭೀರ ಆರೋಪ ವ್ಯಕ್ತವಾಗಿತ್ತು. ಎಸ್. ವಿದ್ಯಾಶಂಕರ್, ಆನಂದ ದೇಶಪಾಂಡೆ ಮತ್ತು ಗೋಪಾಲ್ ಮುಗೆರಾಯ ಅವರ ಹೆಸರುಗಳು ಅಂತಿಮ ಪಟ್ಟಿಯಲ್ಲಿ ಕಾಣಿಸಿಕೊಂಡ ತಕ್ಷಣ ಆರೋಪಗಳು ಸೃಷ್ಟಿಯಾಗಿದ್ದವು. ವಿಟಿಯು ಕುಲಪತಿ ಹುದ್ದೆಗೆ ಆಯ್ಕೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ವಿದ್ಯಾಶಂಕರ್ ಅವರ ವಿರುದ್ಧ ಅನೇಕ ಕ್ರಿಮಿನಲ್ ಪ್ರಕರಣಗಳು ಇರುವುದಾಗಿ ಮೈಸೂರು ವಿಶ್ವವಿದ್ಯಾಲಯದ ಯೋಜನೆ ನಿಗಾವಣೆ ಹಾಗೂ ಮೌಲ್ಯಮಾಪನದ ಮಂಡಳಿ ಸದಸ್ಯರಾಗಿದ್ದ ಡಾ.ಕೆ. ಮಹದೇವ್ ಗಂಭೀರ ಆರೋಪ ಮಾಡಿದ್ದರು.

ಈ ಎಲ್ಲ ಆರೋಪಗಳ ನಡುವೆಯೂ ಇದೀಗ ರಾಜ್ಯ ಸರಕಾರದ ಶಿಫಾರಸಿನ ಮೇರೆಗೆ ರಾಜ್ಯಪಾಲರು ವಿದ್ಯಾಶಂಕರ್ ಅವರನ್ನು ವಿಟಿಯುಗೆ ನೂತನ ಕುಲಪತಿಯನ್ನಾಗಿ ಮಾಡಿದ್ದಾರೆ.


Gadi Kannadiga

Leave a Reply