ಗಡಿ ಕನ್ನಡಿಗ
ಬೆಳಗಾವಿ: ಗಣೇಶಪುರ ರಸ್ತೆಯ ಗುಡ್ ಶೆಫರ್ಡ್ ಶಾಲೆಯ ಆವರಣದಲ್ಲಿರುವ ಬೆಳಗಾವಿ ಟರ್ಫ್ ಮೈದಾನದಲ್ಲಿ ಆಯೋಜಿಸಿದ್ದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆ ಗಣೇಶಪುರ, ಅನಗೋಳದ ಸಂತ ಮೀರಾ, ಬೆಳಗಾವಿಯ ಗಜಾನನರಾವ್ ಬಾತಕಾಂಡೆ, ಖಾನಾಪುರದ ಶಾಂತಿನಿಕೇತನ ಶಾಲೆ, ಸ್ವಾಮಿ ವಿವೇಕಾನಂದ ಶಾಲೆ ತಂಡಗಳು ಜಯ ಸಾಧಿಸಿದವು.
ಬೆಳಗ್ಗೆ ನಡೆದ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಉಪ ಮೇಯರ್ ಆನಂದ ಚವ್ಹಾಣ, ವಿಮಲ್ ಸ್ಪೋರ್ಟ್ಸ್ ಫೌಂಡೇಶನ್ ಅಧ್ಯಕ್ಷ ಕಿರಣ ಜಾಧವ್, ಜನಕಲ್ಯಾಣ ಟ್ರಸ್ಟ್ ಕಾರ್ಯದರ್ಶಿ ಸುಧೀರ್ ಗಾಡ್ಗೀಳ್, ಟ್ರಸ್ಟಿ ಲಕ್ಷ್ಮಣ ಪವಾರ, ಅಶೋಕ್ ಶಿಂತ್ರೆ, ಸಂತ ಮೀರಾ ಸಂತ ಮೀರಾ ಗಣೇಶಪುರ ಶಾಲೆಯ ಅಧ್ಯಕ್ಷ ಡಾ.ವಿಜಯ್ ಗೋವೇಕರ್, ಜಿಲ್ಲಾ ಕಾರ್ಯದರ್ಶಿ ದೇವಿಪ್ರ ಪಾಟೀಲ, ವಿದ್ಯಾ. ರಾಮನಾಥ ನಾಯ್ಕ, ವಿನಾಯಕ ಗ್ರಾಮೋಪಾಧ್ಯಾಯ, ವಿದ್ಯಾಭಾರತಿ ಜಿಲ್ಲಾ ದೈಹಿಕ ಮುಖ್ಯಸ್ಥ ಚಂದ್ರಕಾಂತ ಪಾಟೀಲ, ಶ್ವೇತಾ ಪಾಟೀಲ, ಆಶಾ ಭುಜಬಲ್, ಶ್ರೀಕಾಂತ ಕಾಂಬಳೆ, ಓಂಕಾರ ಭಾಗವಹಿಸಿ ಸರಸ್ವತಿ ಭಾರತಮಾತಾ ಛಾಯಾಚಿತ್ರ ಪೂಜೆ ನಡೆಯಿತು. ಕಿರಣ ಜಾಧವ, ಆನಂದ ಚವ್ಹಾಣ, ಅಶೋಕ್ ಶಿಂತ್ರೆ ಆಟಗಾರರಿಗೆ ಮಾರ್ಗದರ್ಶನ ನೀಡಿ ಭವಿಷ್ಯದಲ್ಲಿಯೂ ಉತ್ತಮ ಸಾಧನೆ ಮಾಡುವಂತೆ ಸಲಹೆ ನೀಡಿದರು.
ಶಿವಕುಮಾರ್ ಸುತಾರ್, ಯಶ್ ಪಾಟೀಲ, ಪಂಚ ಮಾನಸ ನಾಯಕ್, ಆದಿತ್ಯ ಸಾನಿ, ಸೋಹಂ ತಹಶೀಲ್ದಾರ, ಪ್ರಣವ್ ದೇಸಾಯಿ, ಓಂಕಾರ ಗಾವಡೆ, ಹರ್ಷ ರೆಡೇಕರ್, ಮೊದಲಾದವರು ಉಪಸ್ಥಿತರಿದ್ದರು.