ಗದಗ ಜನೆವರಿ ೨೦: ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ಹಿನ್ನಲೆಯಲ್ಲಿ ಪ್ರತಿ ತಿಂಗಳಿನ ೩ನೇ ಶನಿವಾರ ಎಲ್ಲಾ ಅಧಿಕಾರಿಗಳು ಜನೆವರಿ ೨೧ ರಂದು ರೋಣ ವಿಭಾಗದ ಅಸೂಟಿ, ಯಾವಗಲ್ಲ, ಕೋಟುಮಚಗಿ ; ನರಗುಂದ ಉಪವಿಭಾಗದ ಸಿದ್ದಾಪುರ, ಬೆಳ್ಳೇರಿ, ಗಜೇಂದ್ರಗಡ ಉಪವಿಭಾಗದ ರುದ್ರಾಪೂರ ಗ್ರಾಮಗಳಿಗೆ ಭೇಟಿ ನೀಡಿ ವಿದ್ಯುತ್ ಅದಾಲತ್ ನಡೆಸಲಿದ್ದಾರೆ. ಸಭೆಗೆ ವಿದ್ಯುತ್ ಗ್ರಾಹಕರು, ರೈತರು ಮತ್ತು ಸಾರ್ವಜನಿಕರು ಭಾಗವಹಿಸಿ ಸಭೆಯ ಸದುಪಯೋಗವನ್ನು ಪಡೆದುಕೊಳ್ಳಲು ಪ್ರಕಟಣೆ ಹೆಸ್ಕಾಂ ತಿಳಿಸಿದೆ.