This is the title of the web page
This is the title of the web page

Please assign a menu to the primary menu location under menu

Local News

ವಿದ್ಯುತ್ ಅದಾಲತ್: ಆ.೨೦ ರಂದು


ಬೆಳಗಾವಿ,ಆ.೧೮: ಗ್ರಾಮೀಣ ಜನತೆಯ ವಿದ್ಯುತ್ ಸಮಸ್ಯೆಯ ತಕ್ಷಣ ಪರಿಹಾರಕ್ಕಾಗಿ ಇಂಧನ ಇಲಾಖೆ ಹುವಿಸಕಂನಿ / ಹೆಸ್ಕಾಂ ಮುಂದಾಗಿದ್ದು ಪ್ರತಿ ತಿಂಗಳ ಮೂರನೇ ಶನಿವಾರ ಬೆಳಗಾವಿ ವೃತ್ತ ವ್ಯಾಪ್ತಿಯಲ್ಲಿ ವಿದ್ಯುತ್ ಅದಾಲತ್ ನಡೆಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಅದರಂತೆ ೨೦ ಆಗಸ್ಟ್ ೨೦೨೨ ರಂದು ಶನಿವಾರ ಬೆಳಗ್ಗೆ ೧೧.೦೦ ಘಂಟೆಗೆ ಬೆಳಗಾವಿ ವೃತ್ತ ವ್ಯಾಪ್ತಿಯಲ್ಲಿ ಆಯ್ದ ಸ್ಥಳಗಳಲ್ಲಿ ನಡೆಸಲಾಗುವುದು.
ಗ್ರಾಮೀಣ ಜನರ ಸಮಸ್ಯೆಗಳಿಗೆ ಸ್ಪಂದಿಸಿ ತಕ್ಷಣ ಪರಿಹಾರ ಕಲ್ಪಿಸುವುದಕ್ಕಾಗಿ ರಾಜ್ಯ ಸರ್ಕಾರ ಜಾರಿಗೆ ತರುತ್ತಿರುವ ಮಹತ್ವಾಕಾಂಕ್ಷಿಯ ಜನ ಸ್ನೇಹಿ ಯೊಜನೆಗಳಲ್ಲಿ ಇದು ಒಂದಾಗಿದೆ. ಬೆಳಗಾವಿ ವೃತ್ತ ವ್ಯಾಪ್ತಿಯ ಬೆಳಗಾವಿ ತಾಲ್ಲೂಕಿನಲ್ಲಿ ಬರುವ ಹಳ್ಳಿಗಳಾದ ಮುತನಾಳ, ಕಂಗ್ರಾಳಿ.ಬಿ.ಕೆ, ಗಣೇಶಪೂರ, ಕರವಿನಕುಂಪಿ, ಮಲ್ಯಾನಟ್ಟಿ, ಮಚ್ಚೆ, ಹುಂಚಾನಟ್ಟಿ, ಬಿಜಗರ್ಣಿ, ಸುಳೇಭಾವಿ, ಖಾನಾಪೂರ ತಾಲ್ಲೂಕಿನಲ್ಲಿ ಬರುವ ಹಳ್ಳಿಗಳಾದ ಡುಕ್ಕರವಾಡಿ, ಕಾರಲಗಾ, ನಿಡಗಲ್, ಪಾರಿಶ್ವಾಡ, ಕೇರವಾಡ, ಮುದೆಕೊಪ್ಪ ಬೈಲಹೊಂಗಲ ತಾಲ್ಲೂಕಿನಲ್ಲಿ ಬರುವ ಹಳ್ಳಿಗಳಾದ ಸಾಣಿಕೊಪ್ಪ, ಪುಲಾರಕೊಪ್ಪ, ಹಣಬರಟ್ಟಿ, ಸಿದ್ದಸಮುದ್ರ ಕಿತ್ತೂರು ತಾಲ್ಲೂಕಿನಲ್ಲಿ ಬರುವ ಹಳ್ಳಿಗಳಾದ ದಾಸ್ತಿಕೊಪ್ಪ, ಡೊಂಬರಕೊಪ್ಪ ಸವದತ್ತಿ ತಾಲ್ಲೂಕಿನಲ್ಲಿ ಬರುವ ಹಳ್ಳಿಗಳಾದ ಕುರುಬಗಟ್ಟಿ, ಹಿರೇಉಳ್ಳಿಗೇರಿ, ಉಗರಗೋಳ, ಮುತವಾಡ ರಾಮದುರ್ಗ ತಾಲ್ಲೂಕಿನಲ್ಲಿ ಬರುವ ಹಳ್ಳಿಗಳಾದ ಗೊಣ್ಣಾಗರ, ಚಿಪ್ಪಲಕಟ್ಟಿ, ಹಣುಮಸಾಗರ, ದಾಡಿಬಾವಿ, ಬಾಗೋಜಿಕೊಪ್ಪ ಗೋಕಾಕ ತಾಲ್ಲೂಕಿನಲ್ಲಿ ಬರುವ ಹಳ್ಳಿಗಳಾದ ಗಡ್ಡಿಹೊಳ್ಳಿ, ಗಿಳಿಹೊಸೂರು, ಮರಡಿಮಠ, ಬಡಿಗವಾಡ ಮೂಡಲಗಿ ತಾಲ್ಲೂಕಿನಲ್ಲಿ ಬರುವ ಹಳ್ಳಿಗಳಾದ ಪಟಗುಂದಿ, ಗುಲಗುಂಜಿಕೊಪ್ಪ, ಮನ್ನಿಕೇರಿ ಸದರಿ ವಿದ್ಯುತ್ ಅದಾಲತ್ ಮೂಲಕ ಗ್ರಾಮೀಣ ವಿದ್ಯುತ್ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಹೆಸ್ಕಾಂ ಕಾರ್ಯ ಮತ್ತು ಪಾಲನಾ ಬೆಳಗಾವಿ ವೃತ್ತದ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply