ಗದಗ ಅ. ೧೪: ಸರ್ಕಾರಿ ಆದೇಶದಂತೆ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ಹಿನ್ನಲೆಯಲ್ಲಿ ಪ್ರತಿ ತಿಂಗಳಿನ ೩ನೇ ಶನಿವಾರ ಎಲ್ಲಾ ಅಧಿಕಾರಿಗಳು ತಾಲ್ಲೂಕಿನ ಕೊನೆಯ ಹಳ್ಳಿಗೆ ಭೇಟಿ ನೀಡಿ ವಿದ್ಯುತ್ ಅದಾಲತ್ ನಡೆಸಲಾಗುವುದು. ಅಕ್ಟೋಬರ್ ೧೫ ರಂದು ರೋಣ ವಿಭಾಗಕ್ಕೆ ಸಂಬಂಧಿಸಿದಂತೆ ಯರೇಬೇಲೇರಿ, ಮೂಗನೂರ, ಕಪ್ಲಿ, ಮೇಲ್ಮಠ, ಮುಶಿಗೇರಿ, ಕುರಹಟ್ಟಿ, ಬಾಚಲಾಪುರ, ಕಾಲಕಾಲೇಶ್ವರ ಗ್ರಾಮಗಳಲ್ಲಿ ವಿದ್ಯುತ್ ಅದಾಲತ್ ಜರುಗಲಿದೆ.
ರೈತರು ಮತ್ತು ಸಾರ್ವಜನಿಕರು ತಪ್ಪದೇ ಭಾಗವಹಿಸಲು ಮತ್ತು ಸಭೆಯ ಸದುಪಯೋಗಪಡೆದುಕೊಳ್ಳಲು ಹೆಸ್ಕಾಂ ಪ್ರಕಟಣೆ ತಿಳಿಸಿದೆ.
Gadi Kannadiga > State > ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ವಿದ್ಯುತ್ ಅದಾಲತ್