This is the title of the web page
This is the title of the web page

Please assign a menu to the primary menu location under menu

State

ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ವಿದ್ಯುತ್ ಆದಾಲತ್


ಗದಗ ಸೆ. ೧೬ : ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ಹಿನ್ನಲೆಯಲ್ಲಿ ಪ್ರತಿ ತಿಂಗಳಿನ ೩ನೇ ಶನಿವಾರ ಎಲ್ಲಾ ಅಧಿಕಾರಿಗಳು ತಾಲ್ಲೂಕಿನ ಕೊನೆಯ ಹಳ್ಳಿಗೆ ಭೇಟಿ ನೀಡಿ ವಿದ್ಯುತ್ ಅದಾಲತ್ ನಡೆಸುವ ಮೂಲಕ ಸ್ಥಳದಲ್ಲಿಯೇ ಗ್ರಾಹಕರ ಸಮಸ್ಯೆಗಳಿಗೆ ಪರಿಹಾರ ನೀಡಲು ಕ್ರಮ ವಹಿಸಲಾಗುವುದು. ಸೆ. ೧೭ ರಂದು ರೋಣ ಉಪವಿಭಾಗದ ನೈನಾಪುರ, ತೋಟಗಂಟಿ, ಹುನಗುಂಡಿ, ಗಜೇಂದ್ರಗಡ ಉಪವಿಭಾಗದ ಗೌಡಗೇರಿ, ಗುಳಗುಳಿ, ನರಗುಂದ ಉಪವಿಭಾಗದ ಹದ್ಲಿ ಗ್ರಾಮಗಳಲ್ಲಿ ವಿದ್ಯುತ್ ಆದಾಲತ್ ಜರುಗಲಿದೆ. ವಿದ್ಯುತ್ ಗ್ರಾಹಕರು, ರೈತರು ಮತ್ತು ಸಾರ್ವಜನಿಕರು ಸಭೆಯ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಹು.ವಿ.ಸ.ಕಂ.ನಿ ರೋಣ ಹೆಸ್ಕಾಂ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply