ಗದಗ )ಅ. ೧೪: ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ಹಿನ್ನಲೆಯಲ್ಲಿ ಪ್ರತಿ ತಿಂಗಳಿನ ೩ನೇ ಶನಿವಾರ ಎಲ್ಲಾ ಅಧಿಕಾರಿಗಳು ತಾಲ್ಲೂಕಿನ ಕೊನೆಯ ಹಳ್ಳಿಗೆ ಭೇಟಿ ನೀಡಿ ವಿದ್ಯುತ್ ಅದಾಲತ್ ನಡೆಸಲಾಗುವುದು. ಅಕ್ಟೋಬರ್ ೧೫ ರಂದು ವಿದ್ಯುತ್ ಅದಾಲತ್ ಜರುಗಲಿದ್ದು, ಗದಗ ತಾಲೂಕಿನ ಬೆಳದಡಿ, ಹೊಂಬಳ, ಹಂಗನಕಟ್ಟಿ, ದುಂದೂರು ಗ್ರಾಮಗಳಲ್ಲಿ, ಮುಂಡರಗಿ ತಾಲೂಕಿನ ಚುರ್ಚಿಹಾಳ, ಬೆಣ್ಣೆಹಳ್ಳಿ , ಶಿರಹಟ್ಟಿ/ ಲಕ್ಷ್ಮೇಶ್ವರ ತಾಲೂಕಿನ ಸಾಸಲವಾಡ , ಗುಲಗಂಜಿಕೊಪ್ಪ, ಅಮರಾಪುರ , ಹೊಳಲಾಪುರ ಗ್ರಾಮಗಳಲ್ಲಿ ವಿದ್ಯುತ್ ಅದಾಲತ್ ಜರುಗಲಿವೆ.
ವಿದ್ಯುತ್ ಗ್ರಾಹಕರು, ರೈತರು ಮತ್ತು ಸಾರ್ವಜನಿಕರು ತಪ್ಪದೇ ಭಾಗವಹಿಸಿ ಇದರ ಸದುಪಯೋಗಪಡೆದುಕೊಳ್ಳಬಹುದಾಗಿದೆ.
Gadi Kannadiga > State > ವಿದ್ಯುತ್ ಆದಾಲತ್