whatsapp facebooktwitter

ನ. ೨೧ ರಂದು ಕೊಪ್ಪಳ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ

ನ. ೨೧ ರಂದು ಕೊಪ್ಪಳ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ

19-11-2020 05:40 PM

ಕೊಪ್ಪಳ, ನ.೧೯: ಕೊಪ್ಪಳ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯನ್ನು ನವೆಂಬರ್. ೨೧ ರಂದು ಬೆಳಿಗ್ಗೆ ೧೦-೩೦ ಗಂಟೆಗೆ ಜಿ.ಪಂ. ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯನ್ನು ನವೆಂಬರ್. ೨೩ ರಂದು ಆಯೋಜಿಸಲಾಗಿತ್ತು. ಆದರೆ ಅನಿವಾರ್ಯ ಕಾರಣದಿಂದ ಸಭೆಯ ದಿನಾಂಕವನ್ನು ಪರಿಷ್ಕರಿಸಿ ನ. ೨೩ರ ಬದಲಾಗಿ, ನ. ೨೧ ರಂದು ನಿಗದಿಪಡಿಸಲಾಗಿದೆ. ಸಭೆಯ ಅಧ್ಯಕ್ಷತೆಯನ್ನು ಜಿ.ಪಂ. ಅಧ್ಯಕ್ಷ ರಾಜಶೇಖರ ಹಿಟ್ನಾಳ ಅವರು ವಹಿಸುವರು. ಸಭೆಯಲ್ಲಿ ೨೦೨೦-೨೧ನೇ ಸಾಲಿನ ಕ್ರಿಯಾ ಯೋಜನೆ ಕುರಿತಂತೆ ಚರ್ಚೆ ಮತ್ತು ಅನುಮೋದನೆ, ಜಿ.ಪಂ

Advertise

ವ್ಯಾಪ್ತಿಯ ಇಲಾಖೆಗಳ ಅಭಿವೃದ್ಧಿ ಯೋಜನೆಗಳ ವಿವರವಾದ ಚರ್ಚೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೋವಿಡ್ ನಿರ್ವಹಣೆ, ಕೃಷಿ ಇಲಾಖೆಯ ಬೀಜ ಹಾಗೂ ರಸಗೊಬ್ಬರ ಸರಬರಾಜು ನಿರ್ವಹಣೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಕಟ್ಟಡಗಳ ನಿರ್ವಹಣೆ ಹಾಗೂ ಇತರೆ ವಿಷಯಗಳ ಚರ್ಚೆ ನಡೆಯಲಿದೆ. ಸಭೆಗೆ ಪ್ರತಿನಿಧಿಗಳನ್ನು ಕಳುಹಿಸದೇ ಖುದ್ದಾಗಿ ಇಲಾಖಾ ಮುಖ್ಯಸ್ಥರು ಹಾಜರಿರಬೇಕು ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಬರಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertise

ನಿಮ್ಮ ಅನಿಸಿಕೆ ತಿಳಿಸಿ

Read More News

"ಅಗ್ನಿ ಹೋತ್ರ" ದ ಲಾಭ ಮತ್ತು ಮಹತ್ವ

ಗೋವು ಉಸಿರಾಟ ಪ್ರಕ್ರಿಯೆಯಲ್ಲಿ ಆಮ್ಲಜನಕವನ್ನು ಒಳಗೆಳೆದುಕೊಂಡು ಆಮ್ಲಜನಕವನ್ನೇ ಹೊರಗೆ ಬಿಡುತ್ತದೆ !!ಮತ್ಯಾವ ಜೀವಸಂಕುಲದಲ್ಲೂ
ಹೀಗಿಲ್ಲಗೋವಿನ...

Read More

01-12-2020 07:55 AM

ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಅಡಿಗಲ್ಲು ಸಮಾರಂಭ

ಗಂಗಾವತಿ : ಸಮೀಪದ ಶ್ರೀಕ್ಷೇತ್ರ ಗಡ್ಡಿ ಗ್ರಾಮದಲ್ಲಿ ಸದ್ದರ್ಮ ಶ್ರೀ ಅಜಾತ ಅಪ್ಪಾಜಿಯವರ ಪುಣ್ಯಾಶ್ರಮದಲ್ಲಿ ಇಂದು ಶ್ರೀ ಶ್ರೀ ರಾಜರಾಜೇಶ್ವರಿ ದೇವಸ್ಥಾನದ...

Read More

01-12-2020 07:46 AM

ಆನ್ ಲೈನ್ ಪದ್ದತಿಯಿಂದ ಶೈಕ್ಷಣಿಕಾಭಿವೃದ್ಧಿ ಶೂನ್ಯ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಪಂಚಾಯ್ತಿ ಸಾಮಾನ್ಯ ಸಭೆ ನ30ರಂದು ಜರುಗಿತು, ಶಾಸಕರಿಗೆ ಅಭಿನಂದನೆ:-ಸಭೆಯ ಪ್ರಾರಂಭದಲ್ಲಿಯೇ, ಕೂಡ್ಲಿಗಿ ತಾಲೂಕನ್ನು...

Read More

01-12-2020 06:30 AM

ಮಾಧ್ಯಮ ಸಾಕ್ಷರತೆ ತರಬೇತಿಗಳು

ಬೆಳಗಾವಿ : ಫ್ಯಾಕ್ಟ್ ಶಾಲಾ ಇಂಡಿಯಾ ಮಿಡಿಯಾಲಿಟ್ರಸಿ ನೆಟವರ್ಕ್, ಡಾಟಾಲಿಡ್ಸ್ ಇವರುಗಳ ಸಹಾಯದಿಂದ ಮಹಿಳಾ ಕಲ್ಯಾಣ ಸಂಸ್ಥೆಯ ನಮ್ಮೂರ ಬಾನುಲಿ ಸಮುದಾಯ...

Read More

01-12-2020 06:21 AM

ಅನ್ನದಾನ ಸ್ವಾಮಿಗಳು ನಿಧನ

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ
ಚಳ್ಳೂರ ಗ್ರಾಮದ ಬೃಹನ ಮಠದ ಅನ್ನದಾನಸ್ವಾಮಿಗಳು ಸೊಮವಾರ ಸಾಯಂಕಾಲ 6.00ಗಂಟೆಗೆ ಶಿವಾಧಿನರಾಗಿದ್ದಾರೆ.ಅವರ...

Read More

01-12-2020 06:18 AM

Read More
×E-Paperಸಾಹಿತ್ಯGeneralVideos