whatsapp facebooktwitter

ಕೋಲಾರ ಕೃಷಿ ಪದ್ಧತಿ ರಾಜ್ಯಕ್ಕೆ ವಿಸ್ತರಣೆ:ಕೃಷಿ ಸಚಿವ ಬಿ.ಸಿ.ಪಾಟೀಲ್

ಕೋಲಾರ ಕೃಷಿ ಪದ್ಧತಿ ರಾಜ್ಯಕ್ಕೆ ವಿಸ್ತರಣೆ:ಕೃಷಿ ಸಚಿವ ಬಿ.ಸಿ.ಪಾಟೀಲ್

19-11-2020 06:04 PM

ಹೊಸಪೇಟೆ, ನ.19: ಬಹುಬೆಳೆ ಬೆಳೆಯುವುದರ ಮೂಲಕ ಬದುಕು ಕಟ್ಟಿಕೊಂಡ ಕೋಲಾರದ ರೈತರು ಇಡೀ ರಾಜ್ಯಕ್ಕೆ ಮಾದರಿಯಾಗಿದ್ದು, ಕೋಲಾರದ ಕೃಷಿ ಪದ್ಧತಿಯನ್ನು ಪರಿಚಯಿಸಿ
ಇಡೀ ರಾಜ್ಯಕ್ಕೆ ವಿಸ್ತರಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಹೊಸಪೇಟೆಯ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ 67ನೇ ರಾಜ್ಯಮಟ್ಟದ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೀರಿನ ಸಮಸ್ಯೆ ಎದುರಿಸುತ್ತಿರುವ ಕೋಲಾರ ಜಿಲ್ಲೆಯ ರೈತರು ಬಹುಬೆಳೆ ಬೆಳೆಯುವುದರ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಂಡು ನೆಮ್ಮದಿಯಿಂದ ಇದ್ದರೇ ಇಡೀ ಜಿಲ್ಲೆಯಾದ್ಯಂತ ನೀರಾವರಿಯೇ ಇರುವ‌ ಮಂಡ್ಯ ಜನರು ಆತ್ಮಹತ್ಯೆ ಮೋರೆಹೊಗುತ್ತಿದ್ದಾರೆ ಮತ್ತು ನೆಮ್ಮದಿಯಿಲ್ಲ. ಇದಕ್ಕೆಲ್ಲ ಕಾರಣ ಕೃಷಿ ಪದ್ಧತಿ ಸರಿಯಿಲ್ಲದಿರುವುದು ಎಂದು ಹೇಳಿದ ಸಚಿವ ಪಾಟೀಲ್ ಅವರು ಸಮಗ್ರ ಕೃಷಿ ಪದ್ಧತಿಯತ್ತ ರೈತರು ಮುಖಮಾಡಬೇಕು ಎಂದರು.
ರೈತರು ಬಿತ್ತನೆ ಮಾಡುವುದಕ್ಕಿಂತ ಮುಂಚೆ ಮಣ್ಣಿನ ಪರೀಕ್ಷೆ ಮಾಡಿಸಬೇಕು. ಕೃಷಿ ವಿಜ್ಞಾನಿಗಳು ಹಾಗೂ ಕೃಷಿ ಅಧಿಕಾರಿಗಳನ್ನು ಭೇಟಿ ಮಾಡಿ,ತಮ್ಮ ಭೂಮಿಗೆ ಯಾವ ಲವಣಾಂಶ ಅಗತ್ಯವಿದೆ ಎಂಬುದನ್ನು ತಿಳಿದುಕೊಂಡು ಅದರಂತೆ ಕೃಷಿ ಚಟುವಟಿಕೆ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
*ರೈತರೊಂದಿಗೆ ಒಂದು ದಿನದ ಮೂಲಕ ಸರಕಾರವೇ ರೈತರ ಮನೆಬಾಗಿಲಿಗೆ:
ಸರಕಾರವೇ ರೈತರ ಮನೆಬಾಗಿಲಿಗೆ ತೆರಳಿ ಅವರ ನೋವು-ನಲಿವುಗಳಿಗೆ ಸ್ಪಂದಿಸಿ ಅವರಲ್ಲಿ ಅತ್ಮಸ್ಥೈರ್ಯ ತುಂಬುವುದರ ಮೂಲಕ ರೈತ ಎದೆಯುಬ್ಬಿಸಿ ನಡೆಯಬೇಕು ಎಂಬುದು ನಮ್ಮ ಸರಕಾರದ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿ ಸಚಿವರಾದ ನಾನು ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ಆಯೋಜಿಸಿ ಅವರಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಸಚಿವ ಪಾಟೀಲ್ ತಿಳಿಸಿದರು.
ಮಂಡ್ಯದಿಂದ ಇದನ್ನು ಪ್ರಾರಂಭಿಸಲಾಗಿದ್ದು,ಇನ್ಮುಂದೆ ತಿಂಗಳಿನಲ್ಲಿ 3ಗ್ರಾಮಗಳಲ್ಲಿ ಈ ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ಆಯೋಜಿಸಿ ಅವರ ದುಃಖ ದುಮ್ಮಾನಗಳಿಗೆ ದನಿಯಾಗುವುದರ ಜತೆಗೆ ಅವರಿಗೆ ಸಮಗ್ರ ಕೃಷಿ ಪದ್ಧತಿಯ ಅಗತ್ಯತೆ ಬಗ್ಗೆ ತಿಳಿವಳಿಕೆ ಮೂಡಿಸಲಾಗುವುದು. ಹೊಸಪೇಟೆ ತಾಲೂಕಿನಲ್ಲಿಯೂ ಈ ಕಾರ್ಯಕ್ರಮ

Advertise

ಆಯೋಜಿಸಲಾಗುವುದು ಎಂದರು.
*ಕೃಷಿ ಸಂಜೀವಿನಿ ಮತ್ತು ಸ್ವಾಭಿಮಾನಿ ರೈತ ಕಾರ್ಡ್ ಬಳ್ಳಾರಿ ಮತ್ತು ಕೊಪ್ಪಳದಲ್ಲಿ ವಿತರಣೆ: ಲ್ಯಾಬ್ ಟು ಲ್ಯಾಂಡ್ ಉದ್ದೇಶದೊಂದಿಗೆ ಅಂದರೇ ಪ್ರಯೋಗಾಲಯದಿಂದ ನೇರವಾಗಿ ರೈತರ ಭೂಮಿಗೆ ತೆರಳಿ ಅಗತ್ಯ ಸಲಹೆ ನೀಡುವುದಕ್ಕಾಗಿ ಕೊಪ್ಪಳದಲ್ಲಿ ಈಗಾಗಲೇ ವಾಹನಗಳನ್ನು ಖರೀದಿಸಲಾಗಿದ್ದು,ಬಳ್ಳಾರಿಯಲ್ಲಿಯೂ ಪ್ರತಿ ರೈತ ಸಂಪರ್ಕ ಕೇಂದ್ರಕ್ಕೆ ಒಂದು ವಾಹನಗಳಂತೆ ಡಿಎಂಎಫ್ ಅಡಿ ಖರೀದಿಸುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಸಮ್ಮತಿ ವ್ಯಕ್ತಪಡಿಸಿದ್ದಾರೆ.ಇವುಗಳಿಗೆ ಕೃಷಿ ಸಂಜೀವಿನಿ ಎಂದು ಹೆಸರಿಡಲಾಗಿದೆ. ಇವುಗಳಲ್ಲಿ ಡಿಪ್ಲೋಮಾ ಕೃಷಿ ಪದವೀಧರರು ಹಾಗೂ ಅಗತ್ಯ ಮಾಹಿತಿ ಇರಲಿದೆ. ಒಂದು ಫೋನ್ ನಂಬರ್ ನೀಡಲಾಗುತ್ತಿದ್ದು,ರೈತರು ಫೋನ್ ಮಾಡಿದರೇ ನೇರವಾಗಿ ಅವರ ಹೊಲಕ್ಕೆ ಕೃಷಿ ಸಂಜೀವಿನಿ ವಾಹನ ತೆರಳಿ ಅಗತ್ಯ ಮಾರ್ಗದರ್ಶನ ನೀಡಲಿದೆ ಎಂದು ಸಚಿವ ಪಾಟೀಲ್ ವಿವರಿಸಿದರು.
ರೈತರಿಗೆ ಅವರ ಹೆಸರು ಮತ್ತು ವಿವರ ಒಳಗೊಂಡ ಸ್ವಾಭಿಮಾನಿ ರೈತ ಹೆಸರಿನಲ್ಲಿ ಕಾರ್ಡ್ ನೀಡಲು ತೀರ್ಮಾನಿಸಲಾಗಿದ್ದು, ಮುಂದಿನ ತಿಂಗಳು ಬಳ್ಳಾರಿ ಮತ್ತು ಕೊಪ್ಪಳದಲ್ಲಿ ಅನುಷ್ಠಾನಕ್ಕೆ ಬರಲಿವೆ ಎಂದು ವಿವರಿಸಿದ ಸಚಿವ ಪಾಟೀಲ್‌ ಅವರು ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ವಿಸ್ತರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಮಾತನಾಡಿದರು.
ಈ ಸಂದರ್ಭದಲ್ಲಿ
ಈ ಸಂದರ್ಭದಲ್ಲಿ ಹೊಸಪೇಟೆ ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಟಿ.ಎಂ.ಚಂದ್ರಶೇಖರಯ್ಯ, ಬಿಡಿಸಿಸಿ‌ ಬ್ಯಾಂಕ್ ‌ನಿರ್ದೇಶಕ ಜೆ.ಎಂ.ವೃಷಬೇಂದ್ರಯ್ಯ, ಸಿರಗುಪ್ಪ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಚೊಕ್ಕಬಸವನಗೌಡ,ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಗಮದ ನಿರ್ದೇಶಕರು ಹಾಗೂ ವಿಕಾಸ ಸೌಹಾರ್ದ ಸಹಕಾರಿ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಹಿರೇಮಠ, ಕರ್ನಾಟಕ ರಾಜ್ಯ ಸಹಕಾರಿ ವಸತಿ ಮಹಾಮಂಡಳದ ನಿರ್ದೇಶಕ ಕಡ್ಲಿ ವೀರಣ್ಣ,ಸಹಕಾರ ಸಂಘಗಳ ಜಂಟಿ‌ ನಿಬಂಧಕ ಗೋಪಾಲ ಚವ್ಹಾಣ, ಸಹಕಾರಿ ಸಂಘಗಳ ಉಪನಿಬಂಧಕಿ ಡಾ.ಸುನೀತಾ ಸಿದ್ರಾಮ್,ಬ.ಜಿ.ಸ.ಯೂ.ನಿಗಮದ ಅಧ್ಯಕ್ಷ ಜೆ.ಎಂ.ಶಿವಪ್ರಸಾದ್ ಮತ್ತಿತರರು ಇದ್ದರು.

Advertise

ನಿಮ್ಮ ಅನಿಸಿಕೆ ತಿಳಿಸಿ

Read More News

ಬೈಕ್ ಕಳ್ಳರ ಬಂಧನ

ಯರಗಟ್ಟಿ : ಬೈಕ್ ಕದಿಯುತ್ತಿದ್ದ ಇಬ್ಬರು ಕಳ್ಳರನ್ನು ಮುರಗೋಡ ಪೋಲಿಸರು ಬಂಧಿಸಿದ್ದು ಆರು (6) ಬೈಕ್ ವಶಪಡಿಸಿಕೊಂಡಿದ್ದಾರೆ.
ಯರಗಟ್ಟಿ ನಗರ ಮತ್ತು ಹಲವು...

Read More

28-11-2020 08:38 PM

ಪರಿತ್ಯಕ್ತ ಗಂಡು ಮಗು ರಕ್ಷಣೆ

ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆಯ ಸಂಚಾರಿ ಆರೋಗ್ಯ ಘಟಕದ ಸಿಬ್ಬಂದಿಗಳು ಪರಿತ್ಯಕ್ತ ಗಂಡು ಮಗುವನ್ನು ರಕ್ಷಣೆ ಮಾಡಿ ಜಿಲ್ಲಾಸ್ಪತ್ರೆಗೆ ದಾಖಲು...

Read More

28-11-2020 08:37 PM

ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಆಧ್ಯತೆ ನೀಡಿ : ಸುಂದರೇಶ ಬಾಬು

ಗದಗ ೨೮ : ಜಿಲ್ಲೆಯ ಪುರಸಭೆ, ಪಟ್ಟಣ ಪಂಚಾಯತ್, ನಗರಸಭೆಯಲ್ಲಿ ಸಾರ್ವಜನಿಕರಿಗೆ ಆಧ್ಯತೆ ಮೇರೆಗೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಜಿಲ್ಲಾಧಿಕಾರಿ ಎಂ....

Read More

28-11-2020 08:25 PM

ಸಚಿನ್ ಪೈಲಟ್ ಆರೋಗ್ಯ ಸ್ಥಿತಿ ಗಂಭೀರ

ಜೈಪುರ : ಕೊರೋನಾ ಸೋಂಕಿನಿಂದ ಬಳಲುತ್ತಿರುವ ರಾಜಸ್ಥಾನದ ಮಾಜಿ ಡಿಸಿಎಂ ಸಚಿನ್ ಪೈಲಟ್ ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಕೊರೊನಾದಿಂದ ಪೈಲಟ್...

Read More

28-11-2020 08:09 PM

ಕುರುಬ ಸಮುದಾಯ ಎಸ್‍ಟಿಗೆ ಸೇರಿಸಬೇಕು ಇಲ್ಲದೇ ಹೋದ್ರೆ ಉಗ್ರ ಹೋರಾಟ : ನಿರಂಜನಾನಂದಪುರಿ ಸ್ವಾಮೀಜಿ

ಬೆಳಗಾವಿ : ಕುರುಬ ಸಮುದಾಯಕ್ಕೆ ಎಸ್‍ಟಿ ಸೌಲಭ್ಯಕ್ಕಾಗಿ ಆಗ್ರಹಿಸಿ ಒಗ್ಗಟ್ಟಾಗಿರುವ ಸಮಾಜದ ಸ್ವಾಮೀಜಿಗಳು, ಜನಪ್ರತಿನಿಧಿಗಳು, ಮುಖಂಡರು. ಇಲ್ಲಿ ಸೇರಿರುವ...

Read More

28-11-2020 07:57 PM

Read More
×E-Paperಸಾಹಿತ್ಯGeneralVideos