whatsapp facebooktwitter

6.48ಕೋಟಿ ರೂ‌.ವೆಚ್ಚದಲ್ಲಿ ರಾಜಕುಮಾರ್ ಪಾರ್ಕ್‌ ಮತ್ತು ಕೆರೆ ಅಭಿವೃದ್ಧಿ

6.48ಕೋಟಿ ರೂ‌.ವೆಚ್ಚದಲ್ಲಿ ರಾಜಕುಮಾರ್ ಪಾರ್ಕ್‌ ಮತ್ತು ಕೆರೆ ಅಭಿವೃದ್ಧಿ

19-11-2020 06:59 PM

ಬಳ್ಳಾರಿ, ನ.19 :ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆಯು ನಗರದ ಬುಡಾ ಕಚೇರಿಯ ಸಭಾಂಗಣದಲ್ಲಿ ಪ್ರಾಧಿಕಾರದ ಅಧ್ಯಕ್ಷರಾದ ದಮ್ಮೂರು ಶೇಖರ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.
ನಗರದ ಡಾ.ರಾಜಕುಮಾರ್ ಉದ್ಯಾನವನವನ್ನು ಹಾಗೂ ಕೆರೆಯನ್ನು 6.48 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವುದಕ್ಕೆ ಹಾಗೂ ಸಂಪರ್ಕ ರಸ್ತೆ ಕಲ್ಪಿಸುವುದಕ್ಕೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ನಗರದ ಕೊಳಚೆ ಪ್ರದೇಶಗಳನ್ನು 77 ಲಕ್ಷ ರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸುವುದಕ್ಕೆ ತೀರ್ಮಾನಿಸಲಾಗಿದೆ.
ಬಿ‌.ಗೋನಾಳ್ ಗ್ರಾಮದಲ್ಲಿ ಪ್ರಾಧಿಕಾರ ಮತ್ತು ರೈತರ ಸಹಭಾಗಿತ್ವದಲ್ಲಿ 101.98 ಎಕರೆ ಜಮೀನಿನಲ್ಲಿ 50:50 ಅನುಪಾತದಂತೆ, ಪ್ರಾಧಿಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ವಸತಿ ಬಡಾವಣೆಯನ್ನು ನಿರ್ಮಿಸಲು ಇ-ಟೆಂಡರ್ ಪ್ರಾಕ್ಯೂಮೆಂಟ್ ಮುಖಾಂತರ ಟೆಂಡರ್ ಆಹ್ವಾನಿಸಲು ಸಭೆ ಒಪ್ಪಿಗೆ ನೀಡಿತು.
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಲಭ್ಯವಿರುವ ನಾಗರೀಕ ಸೌಲಭ್ಯ ನಿವೇಶನಗಳನ್ನು ಬಹಿರಂಗ ಹರಾಜಿನ ಮೂಲಕ ಹಂಚಿಕೆ ಮಾಡುವುದಕ್ಕೆ ಸಾಮಾನ್ಯ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.
ನಗರಾಭಿವೃದ್ಧಿ ಪ್ರಾಧಿಕಾರದ ಮಾಸ್ಟರ್ ಪ್ಲಾನ್ ನಲ್ಲಿ 12 ಗ್ರಾಮಗಳನ್ನು ಸೇರ್ಪಡೆ ಮಾಡುವ ಬಗ್ಗೆ ಹಾಗೂ ನಗರದ ವಿವಿಧ ಸ್ಥಳಗಳಲ್ಲಿ 1 ಕೋಟಿ ವೆಚ್ಚದಲ್ಲಿ ಸ್ವಾಗತ ಫಲಕ, 1 ಕೋಟಿ ವೆಚ್ಚದಲ್ಲಿ ROಪ್ಲಾಂಟ್, 1 ಕೋಟಿ ಹೈ-ಮಾಸ್ಟ್ ಕಾಮಗಾರಿಗಳ ಕೈಗೆತ್ತಿಕೊಳ್ಳುವುದರ ಕುರಿತು ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅವರು ಸಭೆಯಲ್ಲಿ ವಿವರಿಸಿದರು.
ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಸ್ವಾಗತ ಫಲಕಗಳನ್ನು ನಿರ್ಮಿಸುವುದು ಮತ್ತು ಖಾಸಗಿ ವಸತಿ ವಿನ್ಯಾಸದ ಅಂತಿಮ ಹಂತದ ನಿವೇಶನವನ್ನು ಬಿಡುಗಡೆ ಮಾಡುವ ಕುರಿತು ಚರ್ಚಿಸಲಾಯಿತು.
ಬಳ್ಳಾರಿ

Advertise

ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿನ ಅನುಮೋದಿತ/ ಟಿ‌.ಎಸ್. ನಂಬರ್ ಗಳ ನಿವೇಶನ ಉಪ ವಿಭಜನೆ ಕೋರಿ ಬಂದ ಅರ್ಜಿಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.
PPP ಮಾದರಿಯಲ್ಲಿ ನಗರದ 3 ಭಾಗಗಳಲ್ಲಿ ಪ್ರಾಧಿಕಾರದ ಆವರಣದ ಎರಡು ಸ್ಥಳಗಳಲ್ಲಿ ಮತ್ತು ಆಯುಕ್ತರ ವಸತಿಗೃಹದ ಬಳಿ ವಾಣಿಜ್ಯ ಮಳಿಗೆಯನ್ನು ನಿರ್ಮಿಸುವುದಕ್ಕೆ ಸಭೆ ಒಪ್ಪಿಗೆ ನೀಡಿತು.
ಖಾಲಿ ನಿವೇಶನಗಳಿಗೆ ಸ್ವಚ್ಛಗೊಳಿಸುವ ಸಂಬಂಧ ಪಾಲಿಕೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗುವುದು ಎಂದು ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ತಿಳಿಸಿದರು.
ಕೈಗಾರಿಕೆ ಬಹುನಿವೇಶನ ವಿನ್ಯಾಸ ನಕ್ಷೆ ಅನುಮೋದನೆ, ಖಾಸಗಿ ವಸತಿ ವಿನ್ಯಾಸ ನಕ್ಷೆ ಅನುಮೋದನೆ ನೀಡಲು, ಜಮೀನುಗಳಿಗೆ ಭೂ-ಉಪಯೋಗ ಬದಲಾವಣೆಗೆ ಅನುಮೋದನೆ ನೀಡುವ ಬಗ್ಗೆ, ವಸತಿ ವಿನ್ಯಾಸ ನಕ್ಷೆ ಮಂಜೂರಾತಿ ಕೋರಿರುವ ಅರ್ಜಿಗಳು, ಏಕ ನಿವೇಶನ ವಸತಿ ವಿನ್ಯಾಸ ಕೋರಿ ಮನವಿ, ಏಕ ನಿವೇಶನ ವಾಣಿಜ್ಯ ವಿನ್ಯಾಸ ನಕ್ಷೆ ಮಂಜೂರು ಕೋರಿರುವ ಅರ್ಜಿಗಳಿಗೆ ಅನುಮೋದನೆ ನೀಡುವ ಕುರಿತು ಚರ್ಚಿಸಲಾಯಿತು.
ಈ ಸಭೆಯಲ್ಲಿ ಬಳ್ಳಾರಿ ನಗರ ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ, ವಿಧಾನ ಪರಿಷತ್ ಸದಸ್ಯರುಗಳಾದ ಕೆ.ಸಿ ಕೊಂಡಯ್ಯ, ಅಲ್ಲಂ ವೀರಭದ್ರಪ್ಪ,ಅಪರ ಜಿಲ್ಲಾಧಿಕಾರಿ ಮಂಜುನಾಥ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಈರಪ್ಪ ಬಿರಾದಾರ, ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರರಾದ ರವಿಶಂಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು, ಗುಲ್ಬರ್ಗ ವಿದ್ಯುತ್ ಶಕ್ತಿ ಸರಬರಾಜು ಕಂಪನಿ ನಿಯಮಿತದ ಕಾರ್ಯನಿರ್ವಾಹಕ ಅಭಿಯಂತರರು, ಕೆ.ಯು.ಡಬ್ಲ್ಯೂ.ಎಸ್ ಮತ್ತು ಡಿ‌.ಬಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು, ನಗರ ಯೋಜನಾ ಸದಸ್ಯರು ಸೇರಿದಂತೆ ಪ್ರಾಧಿಕಾರದ ಸಿಬ್ಬಂದಿವರ್ಗದವರು ಹಾಜರಿದ್ದರು.

Advertise

ನಿಮ್ಮ ಅನಿಸಿಕೆ ತಿಳಿಸಿ

Read More News

"ಅಗ್ನಿ ಹೋತ್ರ" ದ ಲಾಭ ಮತ್ತು ಮಹತ್ವ

ಗೋವು ಉಸಿರಾಟ ಪ್ರಕ್ರಿಯೆಯಲ್ಲಿ ಆಮ್ಲಜನಕವನ್ನು ಒಳಗೆಳೆದುಕೊಂಡು ಆಮ್ಲಜನಕವನ್ನೇ ಹೊರಗೆ ಬಿಡುತ್ತದೆ !!ಮತ್ಯಾವ ಜೀವಸಂಕುಲದಲ್ಲೂ
ಹೀಗಿಲ್ಲಗೋವಿನ...

Read More

01-12-2020 07:55 AM

ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಅಡಿಗಲ್ಲು ಸಮಾರಂಭ

ಗಂಗಾವತಿ : ಸಮೀಪದ ಶ್ರೀಕ್ಷೇತ್ರ ಗಡ್ಡಿ ಗ್ರಾಮದಲ್ಲಿ ಸದ್ದರ್ಮ ಶ್ರೀ ಅಜಾತ ಅಪ್ಪಾಜಿಯವರ ಪುಣ್ಯಾಶ್ರಮದಲ್ಲಿ ಇಂದು ಶ್ರೀ ಶ್ರೀ ರಾಜರಾಜೇಶ್ವರಿ ದೇವಸ್ಥಾನದ...

Read More

01-12-2020 07:46 AM

ಆನ್ ಲೈನ್ ಪದ್ದತಿಯಿಂದ ಶೈಕ್ಷಣಿಕಾಭಿವೃದ್ಧಿ ಶೂನ್ಯ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಪಂಚಾಯ್ತಿ ಸಾಮಾನ್ಯ ಸಭೆ ನ30ರಂದು ಜರುಗಿತು, ಶಾಸಕರಿಗೆ ಅಭಿನಂದನೆ:-ಸಭೆಯ ಪ್ರಾರಂಭದಲ್ಲಿಯೇ, ಕೂಡ್ಲಿಗಿ ತಾಲೂಕನ್ನು...

Read More

01-12-2020 06:30 AM

ಮಾಧ್ಯಮ ಸಾಕ್ಷರತೆ ತರಬೇತಿಗಳು

ಬೆಳಗಾವಿ : ಫ್ಯಾಕ್ಟ್ ಶಾಲಾ ಇಂಡಿಯಾ ಮಿಡಿಯಾಲಿಟ್ರಸಿ ನೆಟವರ್ಕ್, ಡಾಟಾಲಿಡ್ಸ್ ಇವರುಗಳ ಸಹಾಯದಿಂದ ಮಹಿಳಾ ಕಲ್ಯಾಣ ಸಂಸ್ಥೆಯ ನಮ್ಮೂರ ಬಾನುಲಿ ಸಮುದಾಯ...

Read More

01-12-2020 06:21 AM

ಅನ್ನದಾನ ಸ್ವಾಮಿಗಳು ನಿಧನ

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ
ಚಳ್ಳೂರ ಗ್ರಾಮದ ಬೃಹನ ಮಠದ ಅನ್ನದಾನಸ್ವಾಮಿಗಳು ಸೊಮವಾರ ಸಾಯಂಕಾಲ 6.00ಗಂಟೆಗೆ ಶಿವಾಧಿನರಾಗಿದ್ದಾರೆ.ಅವರ...

Read More

01-12-2020 06:18 AM

Read More
×E-Paperಸಾಹಿತ್ಯGeneralVideos