whatsapp facebooktwitter

ಸಹಕಾರ ಕ್ಷೇತ್ರ ಅಭಿವೃದ್ಧಿಯ ಪ್ರೇರಕ ಶಕ್ತಿ.

ಸಹಕಾರ ಕ್ಷೇತ್ರ ಅಭಿವೃದ್ಧಿಯ ಪ್ರೇರಕ ಶಕ್ತಿ.

20-11-2020 06:20 AM

ಬೆಳಗಾವಿಯಲ್ಲಿ,“ಕೋರೊನಾ ಸೋಂಕು-ಆತ್ಮ ನಿರ್ಭರ ಭಾರತ ಸಹಕಾರ ಸಂಸ್ಥೆಗಳು” ಎಂಬ ಧ್ಯೇಯದೊಂದಿಗೆ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳದ ನೇತೃತ್ವದಲ್ಲಿ, 67ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭವನ್ನು, ಸಹಕಾರ ಸಚಿವರಾದ ಶ್ರೀ ಎಸ್.ಟಿ ಸೋಮಶೇಖರ್ ಹಾಗೂ ಪಶುಸಂಗೋಪನಾ ಇಲಾಖಾ ಸಚಿವರಾದ ಶ್ರೀ ಪ್ರಭು ಚವ್ಹಾಣ ಅವರ ಜತೆಗೂಡಿ ಧ್ವಜಾರೋಹಣ ನೆರವೇರಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ, ಸತ್ಕಾರ ಸ್ವೀಕರಿಸಿ, ಸಾಧಕರನ್ನು ಸನ್ಮಾನಿಸಿ, ಮಾತನಾಡಲಾಯಿತು. ಇದೇ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಂಘಗಳಿಗೆ ಚೆಕ್ ವಿತರಿಸಲಾಯಿತು.
ಸಹಕಾರ ಕ್ಷೇತ್ರದಿಂದ ಗ್ರಾಮಿಣ ಅಭಿವೃದ್ಧಿ ಸಾಧ್ಯ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಹಕಾರ ಕ್ಷೇತ್ರವು ಗುರುತಿಸಿಕೊಂಡಿದ್ದು, ಇಫ್ಕೋ ಹಾಗೂ

Advertise

ಕ್ರಿಬ್ಕೋ ಸಹಕಾರ ಸಂಸ್ಥೆಗಳು ಉತ್ತಮ ರೀತಿಯಲ್ಲಿ ಸಾಧನೆ ಮಾಡಿವೆ. ಬೆಳಗಾವಿ ಕೂಡ ಸಹಕಾರಿ ರಂಗದಲ್ಲಿ ಮುಂಚೂಣಿಯಲ್ಲಿದೆ. ಸ್ತ್ರೀ ಶಕ್ತಿ ಸಂಘಗಳು, ಸ್ವ-ಸಹಾಯ ಸಂಘಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ವಿಶೇಷ ಸಾಲ, ತರಬೇತಿ, ಮಾರುಕಟ್ಟೆ ಸೌಲಭ್ಯ ಒದಗಿಸಲಾಗುತ್ತಿದ್ದು, ಮಹಿಳೆಯರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಲಾಯಿತು.
ಸಮಾರಂಭದಲ್ಲಿ ಚಿಕ್ಕೋಡಿ ಸಂಸದರಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ, ರಾಜ್ಯಸಭಾ ಸದಸ್ಯರಾದ ಶ್ರೀ ಈರಣ್ಣ ಕಡಾಡಿ, ಕೆಎಂಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ, ಶಾಸಕರಾದ ಶ್ರೀ ಅನಿಲ್ ಬೆನಕೆ, ಜಿ.ಪಂ.ಅಧ್ಯಕ್ಷರಾದ ಆಶಾ ಐಹೊಳೆ ಹಾಗೂ ಸಹಕಾರ ಸಂಘಗಳ ನಿಬಂಧಕರು, ಗಣ್ಯರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹುಲ್ಲೂರ)

Advertise

ನಿಮ್ಮ ಅನಿಸಿಕೆ ತಿಳಿಸಿ

Read More News

ಅನಧಿಕೃತ ಮದ್ಯ ಮಾರಾಟಕ್ಕೆ ಕಠಿಣ ಕ್ರಮ ಕೈಗೊಳ್ಳಿ : ವಿಕಾಸ್ ಕಿಶೋರ್ ಸುರಳ್ಕರ್

ಕೊಪ್ಪಳ, ನ.೨೫ : ಅನಧಿಕೃತ ಮದ್ಯ ಮಾರಾಟ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಅಬಕಾರಿ ಇಲಾಖೆಯ...

Read More

25-11-2020 04:19 PM

ಶ್ರವಣ ತಪಾಸಣೆ ಶಿಬಿರ

ಕನಕಗಿರಿ : ಇತ್ತೀಚಿಗೆ ಹಿರಿಯ ನಾಗರಿಕರಿಗೆ ಶ್ರವಣ ನ್ಯೂನ್ಯತೆ ಪ್ರಮಾಣ ಅಧಿಕವಾಗುತ್ತಿದ್ದು ಇದರಿಂದ ಅವರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಈ...

Read More

25-11-2020 04:11 PM

ಸಣ್ಣ ವಯಸ್ಸಿನಲ್ಲೇ ಸಾವಿರಾರು ಭಜನಾಪದಗಳನ್ನು ಹಾಡಿ ಗಮನ ಸೇಳೆದ ಭಜನಾಪದ ಕಲಾವಿದೆ ರುಕ್ಮಿಣಿ ಅಟಮಟ್ಟಿ ಭಜನಾಪದ ಹಾಡುಗಳ ಮೋಡಿಗಾರ್ತಿ

ಮೂಡಲಗಿ : ತಂದೆ-ತಾಯಿಗಳು ಶಾಲೆಯ ಮುಖವನ್ನೇ ನೋಡದೆ ಅನಕ್ಷರಸ್ಥ ಕುಟುಂಬದಲ್ಲಿ ಬೆಳೆದ ರುಕ್ಮಿಣಿಗೆ ಸಂಗೀತ ಶಾರದೆ ಒಲಿತಿದ್ದಾಳೆ. ಒಂದಲ್ಲಾ ಎರಡಲ್ಲ...

Read More

25-11-2020 04:09 PM

ಪುರುಷ ಸಂತಾನಹರಣ ಶಸ್ತ್ರ ಚಿಕಿತ್ಸೆ ಅರಿವು ಕಾರ್ಯಕ್ರಮ

ಸವದತ್ತಿ : ದಿನಾಂಕ.24.11.2020 ರಂದು ತಾಲೂಕಾ ಆರೋಗ್ಯಾಧಿಕಾರಿಗಳ ಸಭಾಂಗಣದಲ್ಲಿ (NSV) ಪುರುಷ ಸಂತಾನಹರಣ ಶಸ್ತ್ರ ಚಿಕಿತ್ಸೆ ಯ ಕುರಿತು ಅರಿವು ಕಾರ್ಯಕ್ರಮ ವನ್ನು...

Read More

25-11-2020 03:44 PM

ಮಾಸ್ಕ್ ಧರಿಸಿ ; ಇಲ್ಲಾ ಫೈನ್ ಕಟ್ಟಿ: ಜಿಲ್ಲೆಯಲ್ಲಿ ಮಾಸ್ಕ್ ಅಭಿಯಾನ ಚುರುಕುಗೊಳಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿತೇಶ ಕೆ. ಪಾಟೀಲ ಆದೇಶ

ಧಾರವಾಡ ನ.25: ಕೋವಿಡ್-19 ಇಳಿಮುಖವಾಗಿದೆ ಎಂದು ಭಾವಿಸಿ ಸಾರ್ವಜನಿಕರು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಪಾಲನೆ ಮಾಡದೇ ಸಂಚರಿಸುತ್ತಿದ್ದು, ಅಧಿಕಾರಿಗಳು...

Read More

25-11-2020 02:27 PM

Read More
×E-Paperಸಾಹಿತ್ಯGeneralVideos