whatsapp facebooktwitter

ಸಚಿವರಿಂದ ಪಶು ಸಂಗೋಪನಾ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಜಾನುವಾರುಗಳು ರೈತರ ಸಂಪತ್ತು, ಅವುಗಳ ಚಿಕಿತ್ಸೆ, ಸಂರಕ್ಷಣೆಗೆ ವೈದ್ಯರು ನಿರಂತರ ಶ್ರಮಿಸಿ

ಸಚಿವರಿಂದ ಪಶು ಸಂಗೋಪನಾ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಜಾನುವಾರುಗಳು ರೈತರ ಸಂಪತ್ತು, ಅವುಗಳ ಚಿಕಿತ್ಸೆ, ಸಂರಕ್ಷಣೆಗೆ ವೈದ್ಯರು ನಿರಂತರ ಶ್ರಮಿಸಿ

20-11-2020 05:48 PM

ಗದಗ ನ.೨೦ : ಜಾನುವಾರುಗಳ ಆರೋಗ್ಯ ಚಿಕಿತ್ಸೆಯಲ್ಲಿ ನಿಷ್ಕಾಳಜಿ ಬೇಡ. ಜಾನುವಾರುಗಳ ರೈತರ ಸಂಪತ್ತು, ಅವುಗಳ ಚಿಕಿತ್ಸೆ, ಸಂರಕ್ಷಣೆಗೆ ಪಶು ವೈದ್ಯರು ಸದಾ ಸಿದ್ಧವಿರುವ ಮೂಲಕ ಜಾನುವಾರುಗಳ ಆರೋಗ್ಯ ಕಾಪಾಡಬೇಕು ಎಂದು ಪಶುಸಂಗೋಪನೆ, ವಕ್ಫ್ ಹಾಗೂ ಹಜ್ ಸಚಿವರಾದ ಪ್ರಭು ಚವ್ಹಾಣ ಹೇಳಿದರು.

ಅವರು ಶುಕ್ರವಾರ ಗದಗ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಜರುಗಿದ ಪಶು ಸಂಗೋಪನಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಶುವೈದ್ಯರು ಹಳ್ಳಿಗಳಿಗೆ ತೆರಳಿ ಪಶು ಸಾಕಾಣಿಕೆದಾರರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಈ ನಿಟ್ಟಿನಲ್ಲಿ ಪ್ರತಿನಿತ್ಯ ಖುದ್ದಾಗಿ ವಾಟ್ಸಪ್ ಮೂಲಕ ತಮಗೆ ಮಾಹಿತಿ ಸಲ್ಲಿಸಬೇಕು. ಪಶುವೈದ್ಯರು ಮತ್ತು ಸಿಬ್ಬಂದಿ ಸಮಸ್ಯೆಯನ್ನು ಆಲಿಸಲು ನಾನು ಸದಾ ಸಿದ್ಧ ನಿಮ್ಮ ಸಮಸ್ಯೆಗಳಿದ್ದರೆ ಹೇಳಿ ಆದರೆ ರೈತರ ಕರೆಗಳಿಗೆ ತಕ್ಷಣಕ್ಕೆ ಸ್ಪಂದಿಸುವ ಮನೋಭಾವ ವೈದ್ಯರು ಬೆಳೆಸಿಕೊಳ್ಳಬೇಕು ಎಂದು ಸಚಿವರು ಕಟ್ಟು ನಿಟ್ಟಿನ ಸೂಚನೆ ನೀಡಿದರು.

ಕೋವಿಡ್ ಸಮಯದಲ್ಲಿ ನೀವೆಲ್ಲ ಉತ್ತಮ ಕೆಲಸ ಮಾಡಿದ್ದೀರಿ ಎಂದು ಅಧಿಕಾರಿಗಳ ಕರ್ತವ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ರೈತರು ಚಿಕಿತ್ಸೆಗೆ ಬಂದರೆ ಔಷಧಿಗಳನ್ನು ತರಲು ಪಶುವೈದ್ಯರು ಚೀಟಿ ಬರೆದು ಹೊರಗಿನಿಂದ ಔಷಧಗಳನ್ನು ತರಿಸುತ್ತಿರುವುದರ ಬಗ್ಗೆ ನನಗೆ ಖುದ್ದಾಗಿ ರೈತರು ದೂರವಾಣಿ ಕರೆಮಾಡಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಈ ತರಹದ ಸಮಸ್ಯೆಗಳು ಪುನರಾವರ್ತಿಸದಂತೆ ನೋಡಿಕೊಳ್ಳಿ ಇಲ್ಲವೇ ಅಮಾನತು ಚೀಟಿ ಕೊಡಬೇಕಾಗುತ್ತದೆ ಎಂದು ಸಚಿವ ಪ್ರಭು ಚವ್ಹಾಣ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಗುರುರಾಜ ಮನಗುಳಿ ಮಾತನಾಡಿ, ಗದಗ ಜಿಲ್ಲೆಯಲ್ಲಿ ೨೦೧೯-೨೦ ರ

Advertise

ಜಾನುವಾರು ಗಣತಿ ಪ್ರಕಾರ ೧೩೬೩೧೧ ದನಗಳು, ೫೫೭೯೮ ಎಮ್ಮೆ, ೩೯೫೮೯೯ ಕುರಿ, ೧೯೧೬೫೬ ಮೇಕೆ, ೧೪೨೫೮ ಹಂದಿ, ೩೭೬೨ ಇತರೆ ಪ್ರಾಣಿಗಳಿವೆ. ಜಿಲ್ಲೆಯಲ್ಲಿ ಒಂದು ಪಾಲಿಕ್ಲೀನಿಕ್ ಜಿಲ್ಲಾ ಪಶು ಆಸ್ಪತ್ರೆ ಸೇರಿದಂತೆ, ೧೧ ಪಶು ಆಸ್ಪತ್ರೆ, ೬೨ ಪಶು ಚಿಕಿತ್ಸಾಲಯ, ೮ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ, ೫ ಸಂಚಾರಿ ಪಶುಚಿಕಿತ್ಸಾಲಯ ಇದೆ. ಜಿಲ್ಲೆಯಲ್ಲಿ ಒಟ್ಟು ೮೭ ಪಶು ಚಿಕಿತ್ಸಾಲಯಗಳಿವೆ. ಜಿಲ್ಲೆಯಲ್ಲಿ ಒಟ್ಟು ವಿವಿಧ ಮಂಜುರಾದ ವೃಂದಗಳ ಹುದ್ದೆಗಳ ಸಂಖ್ಯೆ ೩೮೪, ಇದರಲ್ಲಿ ೧೩೪ ಭರ್ತಿಯಾಗಿದ್ದು, ೨೫೦ ಹುದ್ದೆಗಳು ಖಾಲಿಯಿವೆ ಎಂದರು.

ರಾಷ್ಟ್ರೀಯ ಕಾಲು ಬಾಯಿ ರೋಗ ಲಸಿಕೆಗೆ ಸಂಬಂಧಿಸಿದಂತೆ, ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಒಂದನೇ ಸುತ್ತಿನ ಲಸಿಕಾ ಕಾರ್ಯಕ್ರಮ ಅಕ್ಟೋಬರ್ ೨ ರಿಂದ ಆರಂಭವಾಗಿದ್ದು, ೧,೯೫,೧೦೯ ಗುರಿ ಹೊಂದಲಾಗಿದೆ. ಇದುವರೆಗೆ ೧,೧೭,೪೮೮ ಜಾನುವರುಗಳಿಗೆ ಲಸಿಕೆ ಹಾಕಲಾಗಿದ್ದು, ನಿಗಧಿಪಡಿಸಿದ ಗುರಿಯನ್ನು ಈ ತಿಂಗಳಾಂತ್ಯದವರೆಗೆ ಸಾಧಿಸಲಾಗುವುದು. ಜಿಲ್ಲೆಯಲ್ಲಿ ಈವರೆಗೆ ಶೇ. ೬೧ ರಷ್ಟು ಪ್ರಗತಿಯಾಗಿದೆ ಎಂದು ಸಭೆಗೆ ಮಾಹಿತಿ ಒದಗಿಸಿದರು.

ಜಿಲ್ಲಾ ವಕ್ಫ ಅಧಿಕಾರಿ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು ೧೩೪೧ ವಕ್ಪ್ ಗೆ ಸಂಬಂಧಿಸಿದ ಆಸ್ತಿಗಳಿವೆ. ಜಿಲ್ಲೆಯಲ್ಲಿ ೩೨೨ ಮಸೀದಿ, ೮೩ ದರ್ಗಾ, ೩೧ ಈದ್ಗಾ, ೧೪೮ ಖಬರಸ್ತಾನ, ೧೯೫ ಅಶೂರ್‌ಖಾನ್, ೬ ಮದರಸಾ, ೨೯ ಇತರೆ ಒಟ್ಟು ೮೧೪ ಇರುತ್ತವೆ. ಅಲ್ಲದೇ ಜಿಲ್ಲೆಯಲ್ಲಿ ಇಗಾಗಲೇ ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದಂತೆ ೨ನೇ ಸುತ್ತಿನ ಸರ್ವ ಕಾರ್ಯ ಪೂರ್ಣಗೊಂಡಿದೆ ಎಂದು ಮಾಹಿತಿ ಒದಗಿಸಿದರು.

ಸಭೆಯಲ್ಲಿ ಗದಗ ಪಶು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಆರ್. ನಾಗರಾಜ್ ಸೇರಿದಂತೆ ಜಿಲ್ಲೆಯ ಎಲ್ಲ ತಾಲ್ಲುಕುಗಳ ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Advertise

ನಿಮ್ಮ ಅನಿಸಿಕೆ ತಿಳಿಸಿ

Read More News

"ಅಗ್ನಿ ಹೋತ್ರ" ದ ಲಾಭ ಮತ್ತು ಮಹತ್ವ

ಗೋವು ಉಸಿರಾಟ ಪ್ರಕ್ರಿಯೆಯಲ್ಲಿ ಆಮ್ಲಜನಕವನ್ನು ಒಳಗೆಳೆದುಕೊಂಡು ಆಮ್ಲಜನಕವನ್ನೇ ಹೊರಗೆ ಬಿಡುತ್ತದೆ !!ಮತ್ಯಾವ ಜೀವಸಂಕುಲದಲ್ಲೂ
ಹೀಗಿಲ್ಲಗೋವಿನ...

Read More

01-12-2020 07:55 AM

ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಅಡಿಗಲ್ಲು ಸಮಾರಂಭ

ಗಂಗಾವತಿ : ಸಮೀಪದ ಶ್ರೀಕ್ಷೇತ್ರ ಗಡ್ಡಿ ಗ್ರಾಮದಲ್ಲಿ ಸದ್ದರ್ಮ ಶ್ರೀ ಅಜಾತ ಅಪ್ಪಾಜಿಯವರ ಪುಣ್ಯಾಶ್ರಮದಲ್ಲಿ ಇಂದು ಶ್ರೀ ಶ್ರೀ ರಾಜರಾಜೇಶ್ವರಿ ದೇವಸ್ಥಾನದ...

Read More

01-12-2020 07:46 AM

ಆನ್ ಲೈನ್ ಪದ್ದತಿಯಿಂದ ಶೈಕ್ಷಣಿಕಾಭಿವೃದ್ಧಿ ಶೂನ್ಯ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಪಂಚಾಯ್ತಿ ಸಾಮಾನ್ಯ ಸಭೆ ನ30ರಂದು ಜರುಗಿತು, ಶಾಸಕರಿಗೆ ಅಭಿನಂದನೆ:-ಸಭೆಯ ಪ್ರಾರಂಭದಲ್ಲಿಯೇ, ಕೂಡ್ಲಿಗಿ ತಾಲೂಕನ್ನು...

Read More

01-12-2020 06:30 AM

ಮಾಧ್ಯಮ ಸಾಕ್ಷರತೆ ತರಬೇತಿಗಳು

ಬೆಳಗಾವಿ : ಫ್ಯಾಕ್ಟ್ ಶಾಲಾ ಇಂಡಿಯಾ ಮಿಡಿಯಾಲಿಟ್ರಸಿ ನೆಟವರ್ಕ್, ಡಾಟಾಲಿಡ್ಸ್ ಇವರುಗಳ ಸಹಾಯದಿಂದ ಮಹಿಳಾ ಕಲ್ಯಾಣ ಸಂಸ್ಥೆಯ ನಮ್ಮೂರ ಬಾನುಲಿ ಸಮುದಾಯ...

Read More

01-12-2020 06:21 AM

ಅನ್ನದಾನ ಸ್ವಾಮಿಗಳು ನಿಧನ

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ
ಚಳ್ಳೂರ ಗ್ರಾಮದ ಬೃಹನ ಮಠದ ಅನ್ನದಾನಸ್ವಾಮಿಗಳು ಸೊಮವಾರ ಸಾಯಂಕಾಲ 6.00ಗಂಟೆಗೆ ಶಿವಾಧಿನರಾಗಿದ್ದಾರೆ.ಅವರ...

Read More

01-12-2020 06:18 AM

Read More
×E-Paperಸಾಹಿತ್ಯGeneralVideos