whatsapp facebooktwitter

ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ ಮಾವು ಹೂ ಬಿಡುವ ಹಾಗೂ ಕಾಯಿ ಕಚ್ಚುವ ಹಂತದಲ್ಲಿ ರೈತರು ಕೈಗೊಳ್ಳಬೇಕಾದ ಸಸ್ಯಸಂರಕ್ಷಣಾ ಕ್ರಮಗಳು

ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ ಮಾವು ಹೂ ಬಿಡುವ ಹಾಗೂ ಕಾಯಿ ಕಚ್ಚುವ ಹಂತದಲ್ಲಿ ರೈತರು ಕೈಗೊಳ್ಳಬೇಕಾದ ಸಸ್ಯಸಂರಕ್ಷಣಾ ಕ್ರಮಗಳು

20-11-2020 06:23 PM

ಧಾರವಾಡ ನ. 19: ಧಾರವಾಡ ಜಿಲ್ಲೆಯಲ್ಲಿ ಅತೀ ಹೆಚ್ಚು ಮಾವು ಬೆಳೆಯನ್ನು ಬೆಳೆಯುತ್ತಿದ್ದು, ಮಾವು ಹೂ ಬಿಡುವ ಹಂತದಲ್ಲಿ ಹೂ ಮೊಗ್ಗು, ಅರಳಿದ ಹೂತೆನೆ ಮತ್ತು ಕಚ್ಚಿದ ಎಳೆಯ ಕಾಯಿಗಳನ್ನು (ಹರಳು) ಮಾರಕ ಕೀಟ ಮತ್ತು ರೋಗಗಳಿಂದ ರಕ್ಷಿಸುವುದು ಅತ್ಯಗತ್ಯ. ಈ ಹಂತದಲ್ಲಿ ಮಾವಿಗೆ ಬೀಳುವ ಮುಖ್ಯವಾದ ಕೀಟವೆಂದರೆ, ಜಿಗಿಹುಳು ಮತ್ತು ರೋಗಗಳಾದ ಹೂತೆನೆ ಒಣಗುವ/ಕಪ್ಪಾಗುವ ರೋಗ ಮತ್ತು ಚಿಬ್ಬುರೋಗ ಅಲ್ಲದೇ ಕಡಿಮೆ ಪ್ರಮಾಣದಲ್ಲಿ ಥ್ರಿಪ್ಸ್ ಇತ್ಯಾದಿ ಕೀಟಗಳು ಸಹ ಹಾನಿ ಮಾಡುವುದುಂಟು. ಈ ಎಲ್ಲಾ ರೋಗ ಮತ್ತು ಕೀಟಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸೂಕ್ತ ಸಸ್ಯ ಸಂರಕ್ಷಣಾ ಕ್ರಮಗಳನ್ನು ಸರಿಯಾದ ಸಮಯದಲ್ಲಿ ಅನುಸರಿಸುವುದು ಅತ್ಯಗತ್ಯ ಈ ಬಗೆಗಿನ ವಿವರಗಳನ್ನು ಈ ಕೆಳಕಂಡಂತಿವೆ.

ಮೊದಲನೇ ಸಿಂಪರಣೆ: ನವಂಬರ್-ಡಿಸೆಂಬರ್ (ಹೂ ಬಿಡುವ ಪೂರ್ವದಲ್ಲಿ ಹಾಗೂ ಹೂತೆನೆ ಹೊರಹೊಮ್ಮುವ ಹಂತದಲ್ಲಿ): ಈ ಹಂತದಲ್ಲಿ ಜಿಗಿಹುಳು, ಥ್ರಿಪ್ಸ್ ಹುಳು, ಹೂತೆನೆ ಒಣಗುವ ರೋಗ ಮತ್ತು ಹೂ ತೆನೆಕೊರಕಗಳು ಹೆಚ್ಚಿನ ಪ್ರಮಾಣದಲ್ಲಿ ಹಾನಿಯನ್ನುಂಟು ಮಾಡುತ್ತವೆ. ಈ ಹಂತದಲ್ಲಿ ಇವುಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸದಿದ್ದರೆ, ಮುಂದಿನ ಹಂತದಲ್ಲಿ ಅವುಗಳು ಹೆಚ್ಚು ಮಾರಕವಾಗಿ ಕಾಣಿಸಿಕೊಳ್ಳುತ್ತವೆ. ಆದುದರಿಂದ ಇವುಗಳನ್ನು ನಿಯಂತ್ರಿಸುವುದು ಅತ್ಯವಶ್ಯ, ಇದಕ್ಕಾಗಿ ಈ ಕೆಳಗಿನ ಕೀಟನಾಶಕ ಮತ್ತು ಶಿಲೀಂದ್ರ ನಾಶಕಗಳನ್ನು ಸೇರಿಸಿದ ದ್ರಾವಣವನ್ನು ಸಿಂಪಡಿಸಬೇಕು.
ಇಮಿಡಾಕ್ಲೋಪ್ರಿಡ್ 17.8% ಎಸ್.ಎಲ್ 0.3 – 0.4 ಮಿ.ಲೀ./ಲೀ.(ಗರಿಷ್ಟ ಶೇಷಾಂಶ 0.20 ಮಿ.ಗ್ರಾ./ಕೆ.ಜಿ. ಕನಿಷ್ಠ ನಿರೀಕ್ಷಣಾ ಅವಧಿ 60 ದಿನಗಳು) + ವೆಟಬಲ್ ಸಲ್ಫರ್ -3 ಗ್ರಾಂ/ಲೀ.

ಎರಡನೇ ಸಿಂಪರಣೆ:

Advertise

ಡಿಸೆಂಬರ್-ಜನವರಿ (ಹೂ ಬಿಟ್ಟಿರುವ ಪ್ರಾರಂಭದ ಹಂತ/ಸಂಪೂರ್ಣ ಹೂ ಬಿಟ್ಟಿರುವ ಹಂತ/ಕಾಯಿ ಕಚ್ಚುವ ಹಂತ : ಈ ಹಂತದಲ್ಲಿ ಹೂ ತೆನೆ ಸಂಪೂರ್ಣವಾಗಿ ಅರಳಿರುತ್ತದೆ. ಹಾಗೂ ಕಾಯಿ ಕಚ್ಚುವ ಪ್ರಕ್ರಿಯೆ ನಡೆಯುತ್ತಿರುತ್ತದೆ. ಈ ಹಂತದಲ್ಲಿ ಅಳಿದುಳಿದ ಜಿಗಿಹುಳು, ಥ್ರಿಪ್ಸ್ ಹುಳು, ಹೂತೆನೆ/ಎಳೆಕಾಯಿ ಕೊರಕ, ಚಿಬ್ಬು ರೋಗ, ಇತ್ಯಾದಿಗಳನ್ನು ಯಶಸ್ವಿಯಾಗಿ ನಿಯಂತ್ರಿಸಲು ಈ ಕೆಳಗಿನ ಕೀಟನಾಶಕ ಮತ್ತು ಶಿಲೀಂದ್ರ ನಾಶಕಗಳನ್ನು ಸೇರಿಸಿದ ದ್ರಾವಣವನ್ನು ಸಿಂಪಡಿಸಬೇಕು.

ಲ್ಯಾಮ್ಡಾ ಸೈಹ್ಯಾಲೋತ್ರಿನ್ 2.5% ಇ.ಸಿ -1 ಮಿ.ಲೀ/ಲೀ. (ಗರಿಷ್ಠ ಶೇಷಾಂಶ 0.20 ಮಿ.ಗ್ರಾಂ/ಕೆ.ಜಿ., ಕನಿಷ್ಟ ನಿರೀಕ್ಷಣಾ ಅವಧಿ 15 ದಿನಗಳು)+ಡೈನೋಕ್ಯಾಪ್ 48% ಇ.ಸಿ -1.0 ಮಿ.ಲೀ/ಲೀ. (ಗರಿಷ್ಠ ಶೇಷಾಂಶ 0.20 ಮಿ.ಗ್ರಾಂ/ಕೆ.ಜಿ., ಕನಿಷ್ಟ ನಿರೀಕ್ಷಣಾ ಅವಧಿ 30 ದಿನಗಳು) ಅಥವಾ ಹೆಕ್ಸಾಕೊನಜೋಲ್ 5 ಇ.ಸಿ -1.0 ಮಿ.ಲೀ/ಲೀ. (ಗರಿಷ್ಠ ಶೇಷಾಂಶ 0.20 ಮಿ.ಗ್ರಾಂ/ಕೆ.ಜಿ., ಕನಿಷ್ಟ ನಿರೀಕ್ಷಣಾ ಅವಧಿ 20 ದಿನಗಳು)

ಮೂರನೇ ಸಿಂಪರಣೆ: ಜನವರಿ-ಫೆಬ್ರುವರಿ (ಸಂಪೂರ್ಣ ಹೂ ಬಿಟ್ಟ ಹಂತ/ ಕಾಯಿ ಕಚ್ಚುವ ಹಂತ: ಈ ಹಂತದಲ್ಲಿ ಕಾಯಿ ಕಚ್ಚುವ ಕ್ರಿಯೆ ಮುಂದುವರೆದಿರುತ್ತದೆ. ಒಂದು ವೇಳೆ ಜಿಗಿಹುಳುವಿನ ಆಕ್ರಮಣ ಮತ್ತೆ ಗೋಚರಿಸಿದ್ದಲ್ಲಿ, ಅದನ್ನು ನಿಯಂತ್ರಿಸಲು ಈ ಕೆಳಗಿನ ಕೀಟನಾಶಕವನ್ನು ಸಿಂಪಡಿಸುವುದು ಅವಶ್ಯ. ಬೂಪ್ರೊಫೆಜಿನ್ 25% ಎಸ್.ಸಿ. -10 ಮಿ.ಲೀ/ಲೀ. (ಗರಿಷ್ಠ ಶೇಷಾಂಶ 0.10 ಮಿ.ಗ್ರಾಂ/ಕೆ.ಜಿ., ಕನಿಷ್ಟ ನಿರೀಕ್ಷಣಾ ಅವಧಿ 15 ದಿನಗಳು) ಒಂದು ವೇಳೆ ಬೂದಿ ರೋಗ, ಚಿಬ್ಬು ರೋಗದ ಆಕ್ರಮಣ ಮತ್ತೆ ಗೋಚರಿಸಿದ್ದಲ್ಲಿ ಅದನ್ನು ನಿಯಂತ್ರಿಸಲು ಈ ಕೆಳಗಿನ ಶಿಲೀಂದ್ರ ನಾಶಕವನ್ನು ಸಿಂಪಡಿಸುವುದು ಅವಶ್ಯ ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertise

ನಿಮ್ಮ ಅನಿಸಿಕೆ ತಿಳಿಸಿ

Read More News

ಬೈಕ್ ಕಳ್ಳರ ಬಂಧನ

ಯರಗಟ್ಟಿ : ಬೈಕ್ ಕದಿಯುತ್ತಿದ್ದ ಇಬ್ಬರು ಕಳ್ಳರನ್ನು ಮುರಗೋಡ ಪೋಲಿಸರು ಬಂಧಿಸಿದ್ದು ಆರು (6) ಬೈಕ್ ವಶಪಡಿಸಿಕೊಂಡಿದ್ದಾರೆ.
ಯರಗಟ್ಟಿ ನಗರ ಮತ್ತು ಹಲವು...

Read More

28-11-2020 08:38 PM

ಪರಿತ್ಯಕ್ತ ಗಂಡು ಮಗು ರಕ್ಷಣೆ

ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆಯ ಸಂಚಾರಿ ಆರೋಗ್ಯ ಘಟಕದ ಸಿಬ್ಬಂದಿಗಳು ಪರಿತ್ಯಕ್ತ ಗಂಡು ಮಗುವನ್ನು ರಕ್ಷಣೆ ಮಾಡಿ ಜಿಲ್ಲಾಸ್ಪತ್ರೆಗೆ ದಾಖಲು...

Read More

28-11-2020 08:37 PM

ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಆಧ್ಯತೆ ನೀಡಿ : ಸುಂದರೇಶ ಬಾಬು

ಗದಗ ೨೮ : ಜಿಲ್ಲೆಯ ಪುರಸಭೆ, ಪಟ್ಟಣ ಪಂಚಾಯತ್, ನಗರಸಭೆಯಲ್ಲಿ ಸಾರ್ವಜನಿಕರಿಗೆ ಆಧ್ಯತೆ ಮೇರೆಗೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಜಿಲ್ಲಾಧಿಕಾರಿ ಎಂ....

Read More

28-11-2020 08:25 PM

ಸಚಿನ್ ಪೈಲಟ್ ಆರೋಗ್ಯ ಸ್ಥಿತಿ ಗಂಭೀರ

ಜೈಪುರ : ಕೊರೋನಾ ಸೋಂಕಿನಿಂದ ಬಳಲುತ್ತಿರುವ ರಾಜಸ್ಥಾನದ ಮಾಜಿ ಡಿಸಿಎಂ ಸಚಿನ್ ಪೈಲಟ್ ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಕೊರೊನಾದಿಂದ ಪೈಲಟ್...

Read More

28-11-2020 08:09 PM

ಕುರುಬ ಸಮುದಾಯ ಎಸ್‍ಟಿಗೆ ಸೇರಿಸಬೇಕು ಇಲ್ಲದೇ ಹೋದ್ರೆ ಉಗ್ರ ಹೋರಾಟ : ನಿರಂಜನಾನಂದಪುರಿ ಸ್ವಾಮೀಜಿ

ಬೆಳಗಾವಿ : ಕುರುಬ ಸಮುದಾಯಕ್ಕೆ ಎಸ್‍ಟಿ ಸೌಲಭ್ಯಕ್ಕಾಗಿ ಆಗ್ರಹಿಸಿ ಒಗ್ಗಟ್ಟಾಗಿರುವ ಸಮಾಜದ ಸ್ವಾಮೀಜಿಗಳು, ಜನಪ್ರತಿನಿಧಿಗಳು, ಮುಖಂಡರು. ಇಲ್ಲಿ ಸೇರಿರುವ...

Read More

28-11-2020 07:57 PM

Read More
×E-Paperಸಾಹಿತ್ಯGeneralVideos