whatsapp facebooktwitter

ಪ್ರವಾಹ,ಮಳೆಯಿಂದ ಲೋಕೋಪಯೋಗಿ ಇಲಾಖೆಗೆ ಈ ವರ್ಷ 3500 ಕೋಟಿ ರೂ.ಹಾನಿ:ಡಿಸಿಎಂ ಗೋವಿಂದ ಕಾರಜೋಳ

ಪ್ರವಾಹ,ಮಳೆಯಿಂದ ಲೋಕೋಪಯೋಗಿ ಇಲಾಖೆಗೆ ಈ ವರ್ಷ 3500 ಕೋಟಿ ರೂ.ಹಾನಿ:ಡಿಸಿಎಂ ಗೋವಿಂದ ಕಾರಜೋಳ

20-11-2020 07:32 PM

ಬಳ್ಳಾರಿ/ಹೊಸಪೇಟೆ ನ.20 : ಈ ವರ್ಷ ರಾಜ್ಯದಲ್ಲಿ ಉಂಟಾದ ಪ್ರವಾಹ ಮತ್ತು ಸುರಿದ ಮಳೆಯಿಂದಾಗಿ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಗಳು,ಸೇತುವೆಗಳು ಹಾಗೂ ಲೋಕೋಪಯೋಗಿ ಇಲಾಖೆಗೆ ಸೇರಿದ ಕಟ್ಟಡಗಳು ಹಾನಿಗೊಳಗಾಗಿದ್ದು, ಈ ವರ್ಷ ಇಲಾಖೆಗೆ ಇದರಿಂದ 3500 ಕೋಟಿ ರೂ.ಹಾನಿಯಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವರು ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಹೊಸಪೇಟೆಯ ಅಮರಾವತಿ ಅತಿಥಿಗೃಹದಲ್ಲಿ ಶುಕ್ರವಾರ ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ವರ್ಷ ಅನೇಕ ಕಡೆ ಸೇತುವೆ ಮತ್ತು ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ಕಳೆದ ವರ್ಷವೂ ಇದೇ ರೀತಿ ಉಂಟಾದ ಹಾನಿಯಿಂದ 7 ಸಾವಿರ ಕೋಟಿ ರೂ.ಹಾನಿಯಾಗಿತ್ತು;ತಕ್ಷಣ 500 ಕೋಟಿ ರೂ.ಬಿಡುಗಡೆ ಮಾಡುವುದರ ಮೂಲಕ ರಸ್ತೆ ದುರಸ್ತಿ,ಪುನರ್ ನಿರ್ಮಾಣ ಕೈಗೊಂಡು ಅನುಕೂಲ ಮಾಡಿಕೊಡಲಾಗಿತ್ತು. ಈ ವರ್ಷ ಮಳೆ ಮತ್ತು ಪ್ರವಾಹದಿಂದ ಉಂಟಾದ ರಸ್ತೆ,ಸೇತುವೆಗಳ ದುರಸ್ತಿ ಮತ್ತು ಸುಧಾರಣಾ ಕಾರ್ಯಗಳಿಗಾಗಿ 600 ಕೋಟಿ ರೂ.ಬಿಡುಗಡೆ ಮಾಡಲಾಗಿದೆ ಎಂದರು.
ರಾಜ್ಯದಲ್ಲಿರುವ ರಸ್ತೆಗಳ ದುರಸ್ತಿ ಮತ್ತು ಸೇತುವೆಗಳ ಪುನರ್ ನಿರ್ಮಾಣಕ್ಕೆ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗುವ ನಿಟ್ಟಿನಲ್ಲಿ ಆದೇಶ ನೀಡಲಾಗಿದೆ. 15 ದಿನದೊಳಗೆ ರಸ್ತೆಗಳಲ್ಲಿ ಬಿದ್ದಿರುವ ತೆಗ್ಗು-ಗುಂಡಿಗಳನ್ನು ಮುಚ್ಚುವಂತೆ ಸೂಚನೆ ನೀಡಲಾಗಿದೆ ಎಂದು ಡಿಸಿಎಂ ಕಾರಜೋಳ ಹೇಳಿದರು.
ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ರಸ್ತೆಗಳ ಮತ್ತು ಸೇತುವೆಗಳ ದುರಸ್ತಿ ಹಾಗೂ ಪುನರ್ ನಿರ್ಮಾಣಕ್ಕೆ ಪ್ರಥಮ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದ ಡಿಸಿಎಂ ಕಾರಜೋಳ ಅವರು ರಸ್ತೆ ಪುನರ್ ನಿರ್ಮಾಣ ಕಾಮಗಾರಿಗಳನ್ನು ಕೂಡಲೇ ಟೆಂಡರ್ ಕರೆದು ಕ್ರಮವಹಿಸಬೇಕು. ಬಳ್ಳಾರಿ ಜಿಲ್ಲೆಯಲ್ಲಿ ಸದ್ಯ 24 ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಬಾಕಿ ಇದೆ. ಪ್ರಕ್ರಿಯೆ ಮುಗಿಸಿ ಬರುವ ಮಾರ್ಚ್ 31ರ ಒಳಗಾಗಿ ಬಾಕಿಯಿರುವ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಮತ್ತು ಯಾವುದೇ ರೀತಿಯ ಅನುದಾನ ಲ್ಯಾಪ್ಸ್ ಆಗದಂತೆ ನೋಡಿಕೊಳ್ಳಲು ತಿಳಿಸಲಾಗಿದೆ ಎಂದರು.
ಬಳ್ಳಾರಿಯ 2650 ಕಿ.ಮೀ ರಾಜ್ಯಹೆದ್ದಾರಿ ನಿರ್ವಹಣೆಗೆ 32 ಕೊಟಿ ರೂ. ಹಾಗೂ 5069 ಕಿಮೀ ಜಿಲ್ಲೆಯ ಮುಖ್ಯರಸ್ತೆಗಳ ನಿರ್ವಹಣೆಗೆ ಈಗಾಗಲೇ  22ಕೋಟಿ

Advertise

ಮಂಜೂರಾಗಿದೆ ಎಂದು ತಿಳಿಸಿದ ಡಿಸಿಎಂ ಕಾರಜೋಳ ಅವರು ಅದೇ ರೀತಿ ಪ್ರವಾಹ ಪರಿಹಾರ 67 ಕಾಮಗಾರಿಗಳಿಗಾಗಿ 21 ಕೋಟಿ ರೂ. ಮಂಜೂರಾಗಿದ್ದು, ಇದರಲ್ಲಿ ಶೇ.30ರಷ್ಟು ಕಾಮಗಾರಿಗಳು ಪೂರ್ಣವಾಗಿವೆ ಎಂದರು.
ಪ್ರವಾಹ ಮತ್ತು ಅತಿಹೆಚ್ಚು ಮಳೆಯಿಂದಾಗಿ ಹಾಗೂ ಕೋವಿಡ್-19 ನಿಂದಾಗಿ ಈ ವರ್ಷ ಮತ್ತು ಕಳೆದ ವರ್ಷ ನಮಗೆ ತೊಂದರೆಯಾಗಿದ್ದು,ನಮ್ಮ ಬಜೆಟ್‌ಗೂ ಮೀರಿದ ಹಾನಿಯಾಗಿದೆ. ಸರಕಾರಕ್ಕೆ ನಿಗದಿತ ಆದಾಯ ಸಹ ಸರಕಾರಕ್ಕೆ ಬರುತ್ತಿಲ್ಲ.ಆದರೂ  ಸಹ ಸರ್ಕಾರ ಸಂಕಷ್ಟಗಳ ನಡುವೆ ಪರಿಹಾರಗಳನ್ನು, ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುತ್ತಿದೆ ಎಂದರು.
ಹುಬ್ಬಳ್ಳಿ-ಗುತ್ತಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬ ಕುರಿತಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಕಾರಜೋಳ ಅವರು ರಾಷ್ಟ್ರೀಯ ಹೆದ್ದಾರಿ ನಿರ್ವಹಣೆ ಕೇಂದ್ರ ಸರ್ಕಾರದ ವ್ಯಾಪ್ತಿಯದ್ದಾಗಿದ್ದು, ಇತ್ತೀಚೆಗೆ ದೆಹಲಿಗೆ ತೆರಳಿದಾಗ ವಿಳಂಬವಿರುವ ರಾಷ್ಟಿçÃಯ ಹೆದ್ದಾರಿ ಕಾಮಗಾರಿಗಳ ಕುರಿತು ನಿತಿನ್ ಗಡ್ಕರಿ ಅವರೊಂದಿಗೆ ಚರ್ಚಿಸಲಾಗಿದೆ. ಈ ಕುರಿತು ಕ್ರಮವಾಗಿ ಪತ್ರಗಳನ್ನು ಬರೆಯಲಾಗುತ್ತದೆ ಎಂದರು.
ಬಹುದಿನಗಳ ಬೇಡಿಕೆಯಾಗಿರುವ ವಿಜಯನಗರ ಜಿಲ್ಲೆ ಕೂಗಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿAಗ್ ಅವರು ಸತತ ಪ್ರಯತ್ನಕ್ಕೆ ಸ್ಪಂದನೆ ಸಿಕ್ಕಿದೆ ಎಂದರು.
ಇದಕ್ಕೂ ಮುಂಚೆ ಅಮರಾವತಿ ಅತಿಥಿಗೃಹದಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಲೋಕೋಪಯೋಗಿ ಇಲಾಖೆ ಸಚಿವರು ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲಿಸಿದರು. ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಸೇತುವೆ, ಎಸ್.ಡಿ.ಪಿ, ಎಸ್.ಸಿ.ಪಿ  ಕಾಮಗಾರಿಗಳು, ಎಸ್.ಡಿ.ಪಿ. ಟಿ.ಎಸ್.ಪಿ, ಹಾಗೂ ಎಸ್.ಸಿ.ಪಿ. ಟಿ.ಎಸ್.ಪಿ ಕಾಮಗಾರಿಗಳ ವಿವರ ಮತ್ತು ಪ್ರಗತಿಯ ವಿವರಗಳನ್ನು ಅಧಿಕಾರಿಗಳಿಂದ ಪಡೆದುಕೊಂಡರು ಮತ್ತು ತ್ವರಿತವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಭಿಯಂತರರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಅರಣ್ಯ, ಪರಿಸರ, ಜೀವಿಶಾಸ್ತç ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದ್ ಸಿಂಗ್, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಎಸ್ಪಿ ಸೈದುಲು ಅಡಾವತ್, ಸಹಾಯಕ ಆಯುಕ್ತ ಶೇಖ್ ತನ್ವೀರ್ ಆಸೀಫ್ ಸೇರಿದಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಇದ್ದರು.

Advertise

ನಿಮ್ಮ ಅನಿಸಿಕೆ ತಿಳಿಸಿ

Read More News

ಅನಧಿಕೃತ ಮದ್ಯ ಮಾರಾಟಕ್ಕೆ ಕಠಿಣ ಕ್ರಮ ಕೈಗೊಳ್ಳಿ : ವಿಕಾಸ್ ಕಿಶೋರ್ ಸುರಳ್ಕರ್

ಕೊಪ್ಪಳ, ನ.೨೫ : ಅನಧಿಕೃತ ಮದ್ಯ ಮಾರಾಟ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಅಬಕಾರಿ ಇಲಾಖೆಯ...

Read More

25-11-2020 04:19 PM

ಶ್ರವಣ ತಪಾಸಣೆ ಶಿಬಿರ

ಕನಕಗಿರಿ : ಇತ್ತೀಚಿಗೆ ಹಿರಿಯ ನಾಗರಿಕರಿಗೆ ಶ್ರವಣ ನ್ಯೂನ್ಯತೆ ಪ್ರಮಾಣ ಅಧಿಕವಾಗುತ್ತಿದ್ದು ಇದರಿಂದ ಅವರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಈ...

Read More

25-11-2020 04:11 PM

ಸಣ್ಣ ವಯಸ್ಸಿನಲ್ಲೇ ಸಾವಿರಾರು ಭಜನಾಪದಗಳನ್ನು ಹಾಡಿ ಗಮನ ಸೇಳೆದ ಭಜನಾಪದ ಕಲಾವಿದೆ ರುಕ್ಮಿಣಿ ಅಟಮಟ್ಟಿ ಭಜನಾಪದ ಹಾಡುಗಳ ಮೋಡಿಗಾರ್ತಿ

ಮೂಡಲಗಿ : ತಂದೆ-ತಾಯಿಗಳು ಶಾಲೆಯ ಮುಖವನ್ನೇ ನೋಡದೆ ಅನಕ್ಷರಸ್ಥ ಕುಟುಂಬದಲ್ಲಿ ಬೆಳೆದ ರುಕ್ಮಿಣಿಗೆ ಸಂಗೀತ ಶಾರದೆ ಒಲಿತಿದ್ದಾಳೆ. ಒಂದಲ್ಲಾ ಎರಡಲ್ಲ...

Read More

25-11-2020 04:09 PM

ಪುರುಷ ಸಂತಾನಹರಣ ಶಸ್ತ್ರ ಚಿಕಿತ್ಸೆ ಅರಿವು ಕಾರ್ಯಕ್ರಮ

ಸವದತ್ತಿ : ದಿನಾಂಕ.24.11.2020 ರಂದು ತಾಲೂಕಾ ಆರೋಗ್ಯಾಧಿಕಾರಿಗಳ ಸಭಾಂಗಣದಲ್ಲಿ (NSV) ಪುರುಷ ಸಂತಾನಹರಣ ಶಸ್ತ್ರ ಚಿಕಿತ್ಸೆ ಯ ಕುರಿತು ಅರಿವು ಕಾರ್ಯಕ್ರಮ ವನ್ನು...

Read More

25-11-2020 03:44 PM

ಮಾಸ್ಕ್ ಧರಿಸಿ ; ಇಲ್ಲಾ ಫೈನ್ ಕಟ್ಟಿ: ಜಿಲ್ಲೆಯಲ್ಲಿ ಮಾಸ್ಕ್ ಅಭಿಯಾನ ಚುರುಕುಗೊಳಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿತೇಶ ಕೆ. ಪಾಟೀಲ ಆದೇಶ

ಧಾರವಾಡ ನ.25: ಕೋವಿಡ್-19 ಇಳಿಮುಖವಾಗಿದೆ ಎಂದು ಭಾವಿಸಿ ಸಾರ್ವಜನಿಕರು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಪಾಲನೆ ಮಾಡದೇ ಸಂಚರಿಸುತ್ತಿದ್ದು, ಅಧಿಕಾರಿಗಳು...

Read More

25-11-2020 02:27 PM

Read More
×E-Paperಸಾಹಿತ್ಯGeneralVideos