whatsapp facebooktwitter

ಡಿಜಿಟಲ್ ಗ್ರಂಥಾಲಯದಲ್ಲಿ 6ಲಕ್ಷ ಜನ ಸದಸ್ಯತ್ವ ನೋಂದಣಿ

ಡಿಜಿಟಲ್ ಗ್ರಂಥಾಲಯದಲ್ಲಿ 6ಲಕ್ಷ ಜನ ಸದಸ್ಯತ್ವ ನೋಂದಣಿ

20-11-2020 07:34 PM

ಬಳ್ಳಾರಿ ನ.20 : ಪುಸ್ತಕಗಳು ಮನುಷ್ಯನನ್ನು ಸನ್ಮಾರ್ಗದತ್ತ ಒಯ್ಯುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತವೆ ಹಾಗೂ ಎಲ್ಲಾ ವಿದ್ಯಾರ್ಥಿಗಳು ಗ್ರಂಥಾಲಯವನ್ನು ಹಾಗೂ ಡಿಜಿಟಲ್ ಸೇವೆಯನ್ನು ಬಳಿಸಿಕೊಳ್ಳಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ದಲಿಂಗೇಶ ರಂಗಣ್ಣವರ್ ಅವರು ಹೇಳಿದರು.
ನಗರದ ನಗರ ಕೇಂದ್ರ ಗ್ರಂಥಾಲಯದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ವತಿಯಿಂದ ಗುರುವಾರದಿಂದ ಹಮ್ಮಿಕೊಂಡಿದ್ದ ರಾಷ್ಟಿçÃಯ ಗ್ರಂಥಾಲಯ ಸಪ್ತಾಹ-2020ರ ಅಂಗವಾಗಿ ಡಿಜಿಟಲ್ ಗ್ರಂಥಾಲಯದ ಉಚಿತ ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ಪುಸ್ತಕ ಪ್ರದರ್ಶನದ ಸಮಾರೋಪ ಸಮಾರಂಭ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಗರ ಕೇಂದ್ರ ಗ್ರಂಥಾಲಯದ ಗ್ರಂಥಾಲಯಾಧಿಕಾರಿ ಬಿ.ಕೆ.ಲಕ್ಷೀಕಿರಣ್ ರವರು ಮಾತನಾಡಿ, ಈಗಾಗಲೇ ರಾಜ್ಯದಲ್ಲಿ 6 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಡಿಜಿಟಲ್ ಗ್ರಂಥಾಲಯದ ಸದಸ್ಯತ್ವ ನೋಂದಣಿಯಾಗುವ ಮುಖಾಂತರ ಇದರ ಉಪಯೋಗವನ್ನು ಪಡೆಯುತ್ತಿದ್ದಾರೆ ಮತ್ತು ನಮ್ಮ ಗ್ರಂಥಾಲಯದಲ್ಲಿ ಐ.ಎ.ಎಸ್ ಮತ್ತು ಕೆ.ಎ.ಎಸ್, ಸ್ಪರ್ಧಾತ್ಮಕ ವಿಭಾಗವನ್ನು ಮುಂದಿನ ದಿನಗಳಲ್ಲಿ ಪ್ರಾರಂಭಿಸಲಿದ್ದು, ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ಕರೆ ನೀಡಿದರು
ನಗರ ಗ್ರಂಥಾಲಯ ಪ್ರಾಧಿಕಾರ ಸಮಿತಿ ಸದಸ್ಯರಾದ ನಿಷ್ಠಿರುದ್ರಪ್ಪ ಅವರು ಮಾತನಾಡಿ, ನನ್ನ

Advertise

ಬಾಲ್ಯದ ದಿನಗಳಲ್ಲಿ ಗ್ರಂಥಾಲಯದ ಸದ್ಬಳಕೆಯಿಂದ ಓದುವ ಹವ್ಯಾಸ ರೂಡಿಸಿಕೊಂಡಿದ್ದರಿAದ ಸುಮಾರು 25 ರಿಂದ 30 ಕೃತಿಗಳನ್ನು ರಚಿಸುವಲ್ಲಿ ಪ್ರೇರಣೆಯಾಯಿತು ಎಂದರು.
ವೀರಶೈವ ಮಹಾವಿದ್ಯಾಲಯ ವಿಶ್ರಾಂತ ಹಿರಿಯ ಗ್ರಂಥಪಾಲಕರಾದ ಡಾ.ಬಿ.ಆರ್.ಗದಗಿನ್ ಅವರು ಮಾತನಾಡಿ, ವಿದ್ಯಾರ್ಥಿಗಳು ಎಲ್ಲಾ ವಯೋಮಾನದ ಓದುಗರು ಡಿಜಿಟಲ್ ಗ್ರಂಥಾಲಯದ ಸದಸ್ಯತ್ವ ನೋಂದಣಿಯಾಗುವ ಮುಖಾಂತರ ರಾಜ್ಯದಲ್ಲಿ ಕೋವಿಡ್-19ರ ಸಮಯದಲ್ಲಿ ಸಾಕಷ್ಟು ಜನ ಇದರ ಉಪಯೋಗವನ್ನು ಪಡೆದುಕೊಂಡಿದ್ದಾರೆ. ಇಂದಿನ ಆಧುನಿಕ ಯುಗದಲ್ಲಿ ಡಿಜಟಲ್ ಗ್ರಂಥಾಲಯದ ಅವಶ್ಯಕತೆಯಿದ್ದು, ಎಲ್ಲಾ ಓದುಗರು ಇದರ ಸದ್ಬಳಕೆಮಾಡಿಕೊಳ್ಳಬೇಕು ಎಂದರು.
ನಗರ ಗ್ರಂಥಾಲಯ ಪ್ರಾಧಿಕಾರ ಸಮಿತಿ ಸದಸ್ಯರಾದ ರೇಣುಕ ದೂರ್ವಾಸ, ನಗರ ಗ್ರಂಥಾಲಯ ಪ್ರಾಧಿಕಾರ ಸಮಿತಿ ಸದಸ್ಯರು ಹಾಗೂ ಪೂರ್ವವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಲಿಂಗಮೂರ್ತಿ ಅವರು ಮಾತನಾಡಿದರು.
ರಾಷ್ರೀಯ ಗ್ರಂಥಾಲಯ ಸಪ್ತಾಹ-2020ರ ಅಂಗವಾಗಿ ಉತ್ತಮ ಸಿಬ್ಬಂದಿ ಸೇವಾ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಸಹ ಗ್ರಂಥಪಾಲಕರಾದ ಆರ್.ಶಾರದ ಅವರನ್ನು ಸನ್ಮಾನಿಸಲಾಯಿತು.
ಗ್ರಂಥಾಲಯ ಸಹಾಯಕ ಕೆ.ಸಿದ್ದಪ್ಪ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಹ ಗ್ರಂಥಪಾಲಕರು ಕೊಳ್ಳಿ ಬಸವರಾಜ ಅವರು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಗ್ರಂಥಾಲಯ ಸಹಾಯಕ ಎಸ್. ಸಂತೋಷ್ ಕುಮಾರ್, ಎಸ್.ಟಿ.ಪ್ರಭಾಕರ್ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.

Advertise

ನಿಮ್ಮ ಅನಿಸಿಕೆ ತಿಳಿಸಿ

Read More News

"ಅಗ್ನಿ ಹೋತ್ರ" ದ ಲಾಭ ಮತ್ತು ಮಹತ್ವ

ಗೋವು ಉಸಿರಾಟ ಪ್ರಕ್ರಿಯೆಯಲ್ಲಿ ಆಮ್ಲಜನಕವನ್ನು ಒಳಗೆಳೆದುಕೊಂಡು ಆಮ್ಲಜನಕವನ್ನೇ ಹೊರಗೆ ಬಿಡುತ್ತದೆ !!ಮತ್ಯಾವ ಜೀವಸಂಕುಲದಲ್ಲೂ
ಹೀಗಿಲ್ಲಗೋವಿನ...

Read More

01-12-2020 07:55 AM

ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಅಡಿಗಲ್ಲು ಸಮಾರಂಭ

ಗಂಗಾವತಿ : ಸಮೀಪದ ಶ್ರೀಕ್ಷೇತ್ರ ಗಡ್ಡಿ ಗ್ರಾಮದಲ್ಲಿ ಸದ್ದರ್ಮ ಶ್ರೀ ಅಜಾತ ಅಪ್ಪಾಜಿಯವರ ಪುಣ್ಯಾಶ್ರಮದಲ್ಲಿ ಇಂದು ಶ್ರೀ ಶ್ರೀ ರಾಜರಾಜೇಶ್ವರಿ ದೇವಸ್ಥಾನದ...

Read More

01-12-2020 07:46 AM

ಆನ್ ಲೈನ್ ಪದ್ದತಿಯಿಂದ ಶೈಕ್ಷಣಿಕಾಭಿವೃದ್ಧಿ ಶೂನ್ಯ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಪಂಚಾಯ್ತಿ ಸಾಮಾನ್ಯ ಸಭೆ ನ30ರಂದು ಜರುಗಿತು, ಶಾಸಕರಿಗೆ ಅಭಿನಂದನೆ:-ಸಭೆಯ ಪ್ರಾರಂಭದಲ್ಲಿಯೇ, ಕೂಡ್ಲಿಗಿ ತಾಲೂಕನ್ನು...

Read More

01-12-2020 06:30 AM

ಮಾಧ್ಯಮ ಸಾಕ್ಷರತೆ ತರಬೇತಿಗಳು

ಬೆಳಗಾವಿ : ಫ್ಯಾಕ್ಟ್ ಶಾಲಾ ಇಂಡಿಯಾ ಮಿಡಿಯಾಲಿಟ್ರಸಿ ನೆಟವರ್ಕ್, ಡಾಟಾಲಿಡ್ಸ್ ಇವರುಗಳ ಸಹಾಯದಿಂದ ಮಹಿಳಾ ಕಲ್ಯಾಣ ಸಂಸ್ಥೆಯ ನಮ್ಮೂರ ಬಾನುಲಿ ಸಮುದಾಯ...

Read More

01-12-2020 06:21 AM

ಅನ್ನದಾನ ಸ್ವಾಮಿಗಳು ನಿಧನ

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ
ಚಳ್ಳೂರ ಗ್ರಾಮದ ಬೃಹನ ಮಠದ ಅನ್ನದಾನಸ್ವಾಮಿಗಳು ಸೊಮವಾರ ಸಾಯಂಕಾಲ 6.00ಗಂಟೆಗೆ ಶಿವಾಧಿನರಾಗಿದ್ದಾರೆ.ಅವರ...

Read More

01-12-2020 06:18 AM

Read More
×E-Paperಸಾಹಿತ್ಯGeneralVideos