whatsapp facebooktwitter

ಲಂಚ ಕಡಿವಾಣ ಬೀಳದಿದ್ದರೆ ಪರಿಣಾಮ ನೆಟ್ಟಗಿರಲ್ಲ-ಶಿವಪ್ಪನಾಯಕ ಎಚ್ಚರಿಕೆ

ಲಂಚ ಕಡಿವಾಣ ಬೀಳದಿದ್ದರೆ ಪರಿಣಾಮ ನೆಟ್ಟಗಿರಲ್ಲ-ಶಿವಪ್ಪನಾಯಕ ಎಚ್ಚರಿಕೆ

20-11-2020 09:26 PM

ಕೂಡ್ಲಿಗಿ : ಪಪಂ ಕಾರ್ಯಾಲಯದಲ್ಲಿ ಕೆಲ ಸಿಬ್ಬಂದಿಗಳು ಸಾರ್ವಜನಿಕರಿಂದ ಬೇಕಾಬಿಟ್ಟಿ ಲಂಚ ವಸೂಲಿ ಮಾಡುತ್ತಿದ್ದಾರೆಂಬ ಸಾಕಷ್ಟು ದೂರುಗಳಿದ್ದು,ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಶಿಸ್ಥು ಕ್ರಮಗಳನ್ನು ಕೂಡಲೇ ಕೈಗೊಳ್ಳಬೇಕು. ನಿರ್ಲಕ್ಷಿಸಿದ್ದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತೆ ಎಂದು ಸದಸ್ಯ ಕಾವಲ್ಲಿ ಶಿವಪ್ಪನಾಯಕ ಸಭೆಯಲ್ಲಿ ಎಚ್ಚರಿಸಿದರು,ಸಿಬ್ಬಂದಿಗಳು ಸಾರ್ವಜನಿಕರಿಗೆ ಅಗತ್ಯ ದಾಖಲು ನೀಡುವಲ್ಲಿ ಹಾಗೂ ಅವರ ಕಡತ ವಿಲೇವಾರಿ ಮಾಡುವಲ್ಲಿ ಅನಗತ್ಯ ವಿಳಂಬ ನೀತಿಯನ್ನ ಅನುಸರಿಸುತ್ತಿದ್ದಾರೆ.ಪ್ರೆಶ್ನಿಸಿದರೆ ಲಂಚದ ಬೇಡಿಕೆಯನ್ನಿಡುತ್ತಾರೆ ಎಂದು ಸಾರ್ವಜನಿಕರಿಂದ ಗಂಭೀರ ಆರೋಪ ಕೇಳಿಬಂದಿವೆ ಎಂದು ಅವರು ಆಕ್ರೋಶವ್ಯಕ್ತಪಡಿಸಿದರು.ಸಾರ್ವಜನಿಕರಿಂದ ಬೇಕಾಬಿಟ್ಟಿಯಾಗಿ ತೆರಿಗೆ

Advertise

ವಸೂಲಿ ಮಾಡಲಾಗುತ್ತಿದೆ, ಪರಾಮರ್ಶಿಸಿ ಸರಿಯಾದ ಮಾನದಂಡ ನಿಗದಿಪಡಿಸಿ ಕನಿಷ್ಠ ದರದ ತೆರೆಗೆ ಪಡೆಯುವಂತೆ ಕ್ರಮಕ್ಕಾಗಿ ಅವರು ಒತ್ತಾಯಿಸಿದರು.ತಾವು ಜನಪ್ರತಿನಿಧಿಗಳಾಗಿದ್ದು ಜನರ ಧ್ವನಿಯಾಗುವುದು ನಮ್ಮ ಕರ್ಥವ್ಯವಾಗಿದೆ, ಜನರ ತೆರೆಗೆಯಿಂದಲೇ ಸಂಬಳ ಪಡೆಯುವ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಜನರಿಗೆ ಸ್ಪಂಧಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.ಸದಸ್ಯರಾದ ತಾಳಸ ವೆಂಕಟೇಶ,ಕಾಲ್ಚಟ್ಟಿ ಈಶಪ್ಪ,ಸಿರಿಬಿ ಮಂಜುನಾಥ,ಸಚಿನ್,ಚಂದ್ರು,ಶುಕೂರ್ ಅಹಮ್ಮದ್,ಶ್ರೀಮತಿ ಸರಸ್ವತಿ ರಮೇಶ,ಬಾಸುನಾಯ್ಕ ಅವರೊಂದಿಗೆ ದ್ವನಿಗೂಡಿಸಿದರು.ಪಪಂ ಅಧ್ಯಕ್ಷರಾದ ಶ್ರೀಮತಿ ಎಂ.ಶಾರದಾಬಾಯಿ,ಉಪಾಧ್ಯಕ್ಷರಾದ ಶ್ರೀಮತಿ ಊರಮ್ಮ,ಮುಖ್ಯಾಧಿಕಾರಿ ವೇದಿಕೆಯಲ್ಲಿದ್ದರು.ಸರ್ವಸದಸ್ಯರು ಹಾಗೂ ಸಿಬ್ಬಂದಿವರ್ಗ ಹಾಜರಿದ್ದರು.

Advertise

ನಿಮ್ಮ ಅನಿಸಿಕೆ ತಿಳಿಸಿ

Read More News

ಬೈಕ್ ಕಳ್ಳರ ಬಂಧನ

ಯರಗಟ್ಟಿ : ಬೈಕ್ ಕದಿಯುತ್ತಿದ್ದ ಇಬ್ಬರು ಕಳ್ಳರನ್ನು ಮುರಗೋಡ ಪೋಲಿಸರು ಬಂಧಿಸಿದ್ದು ಆರು (6) ಬೈಕ್ ವಶಪಡಿಸಿಕೊಂಡಿದ್ದಾರೆ.
ಯರಗಟ್ಟಿ ನಗರ ಮತ್ತು ಹಲವು...

Read More

28-11-2020 08:38 PM

ಪರಿತ್ಯಕ್ತ ಗಂಡು ಮಗು ರಕ್ಷಣೆ

ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆಯ ಸಂಚಾರಿ ಆರೋಗ್ಯ ಘಟಕದ ಸಿಬ್ಬಂದಿಗಳು ಪರಿತ್ಯಕ್ತ ಗಂಡು ಮಗುವನ್ನು ರಕ್ಷಣೆ ಮಾಡಿ ಜಿಲ್ಲಾಸ್ಪತ್ರೆಗೆ ದಾಖಲು...

Read More

28-11-2020 08:37 PM

ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಆಧ್ಯತೆ ನೀಡಿ : ಸುಂದರೇಶ ಬಾಬು

ಗದಗ ೨೮ : ಜಿಲ್ಲೆಯ ಪುರಸಭೆ, ಪಟ್ಟಣ ಪಂಚಾಯತ್, ನಗರಸಭೆಯಲ್ಲಿ ಸಾರ್ವಜನಿಕರಿಗೆ ಆಧ್ಯತೆ ಮೇರೆಗೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಜಿಲ್ಲಾಧಿಕಾರಿ ಎಂ....

Read More

28-11-2020 08:25 PM

ಸಚಿನ್ ಪೈಲಟ್ ಆರೋಗ್ಯ ಸ್ಥಿತಿ ಗಂಭೀರ

ಜೈಪುರ : ಕೊರೋನಾ ಸೋಂಕಿನಿಂದ ಬಳಲುತ್ತಿರುವ ರಾಜಸ್ಥಾನದ ಮಾಜಿ ಡಿಸಿಎಂ ಸಚಿನ್ ಪೈಲಟ್ ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಕೊರೊನಾದಿಂದ ಪೈಲಟ್...

Read More

28-11-2020 08:09 PM

ಕುರುಬ ಸಮುದಾಯ ಎಸ್‍ಟಿಗೆ ಸೇರಿಸಬೇಕು ಇಲ್ಲದೇ ಹೋದ್ರೆ ಉಗ್ರ ಹೋರಾಟ : ನಿರಂಜನಾನಂದಪುರಿ ಸ್ವಾಮೀಜಿ

ಬೆಳಗಾವಿ : ಕುರುಬ ಸಮುದಾಯಕ್ಕೆ ಎಸ್‍ಟಿ ಸೌಲಭ್ಯಕ್ಕಾಗಿ ಆಗ್ರಹಿಸಿ ಒಗ್ಗಟ್ಟಾಗಿರುವ ಸಮಾಜದ ಸ್ವಾಮೀಜಿಗಳು, ಜನಪ್ರತಿನಿಧಿಗಳು, ಮುಖಂಡರು. ಇಲ್ಲಿ ಸೇರಿರುವ...

Read More

28-11-2020 07:57 PM

Read More
×E-Paperಸಾಹಿತ್ಯGeneralVideos