whatsapp facebooktwitter

ಬಳ್ಳಾರಿ ಬಂದ್ ನೇರವಾಗಿ ಭಾಗಿಯಾಗಲ್ಲ , ಜಿಲ್ಲೆಯ ಇಬ್ಬಾಗದ ನೋವು ಸದಾ ಕಾಡುತ್ತದೆ : ಶಾಸಕ‌ ಜಿ.ಸೋಮಶೇಖರ್ ರೆಡ್ಡಿ

ಬಳ್ಳಾರಿ ಬಂದ್ ನೇರವಾಗಿ ಭಾಗಿಯಾಗಲ್ಲ , ಜಿಲ್ಲೆಯ ಇಬ್ಬಾಗದ ನೋವು ಸದಾ ಕಾಡುತ್ತದೆ : ಶಾಸಕ‌ ಜಿ.ಸೋಮಶೇಖರ್ ರೆಡ್ಡಿ

21-11-2020 01:40 PM

ಬಳ್ಳಾರಿ,ನ.21 : ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆ ಪ್ರತ್ಯೇಕವಾಗಿ ರಚಿಸುತ್ತಿರುವ ಸರಕಾರದ ನಿರ್ಧಾರ ನೋವು ತಂದಿದೆ. ಎಂದಿಗೂ ಜಿಲ್ಲೆಯ ಇಬ್ಭಾಗದ ನೋವು ನನ್ನನ್ನು ಸದಾ ಕಾಡುತ್ತದೆ ಎಂದು ಬಳ್ಳಾರಿ ‌ನಗರ ಶಾಸಕ‌ ಜಿ.ಸೋಮಶೇಖರ್ ರೆಡ್ಡಿ ಅವರು ಹೇಳಿದರು.
ರಾಷ್ಟ್ರೀಯ ಅಂಧತ್ವ ನಿವಾರಣಾ ಕಾರ್ಯಕ್ರಮದ ಆಡಿಯಲ್ಲಿ ನಗರದ ಮಿಲ್ಲರ್ ಪೇಟೆಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂಧತ್ವ ನಿಯಂತ್ರಣ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಜಯನಗರ ಜಿಲ್ಲೆ ವಿಭಜನೆ ಹೋರಾಟಕ್ಕೆ ಸಂಬಂಧಿಸಿದಂತೆ ತೀವ್ರ ಅಸಹಾಯಕ ಕಥೆ ವ್ಯಕ್ತಪಡಿಸಿದ ಶಾಸಕ ಸೋಮಶೇಖರ್ ರೆಡ್ಡಿ ಅವರು ಇತ್ತೀಚೆಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವಿಭಜನೆ ಮಾಡದಿರುವಂತೆ ಮನವಿ ಮಾಡಲಾಗಿದೆ. ಜಿಲ್ಲೆಯು ಇಂದಲ್ಲ ನಾಳೆ ಯಾವುದೇ ಸರ್ಕಾರ ಬಂದ್ರೂ ವಿಭಜನೆ ಯಾಗೋದು ನಿಲ್ಲಲ್ಲವೆಂದು ಮುಖ್ಯಮಂತ್ರಿಗಳಾದಿಯಾಗಿ ಅನೇಕ ಹಿರಿಯ ಸಚಿವರು ಹೇಳಿದ್ದಾರೆ.

Advertise

ಪ್ರತಿರೋಧ ಕೈಬಿಡಲು ತಿಳಿಸಿದ್ದಾರೆ ಎಂದರು.
ಬಳ್ಳಾರಿ ವಿಭಜನೆಯಾಗದೇ ಅಖಂಡವಾಗಿರಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.ಜಿಲ್ಲೆಯ ಎಲ್ಲ ಶಾಸಕರು ಬಯಸಿದ್ರೇ ಮತ್ತೊಮ್ಮೆ ಮುಖ್ಯಮಂತ್ರಿ ಬಳಿ ನಿಯೋಗ ತೆಗೆದುಕೊಂಡು ಹೋಗುತ್ತೇನೆ ಎಂದರು.
ವಿಜಯನಗರ ಜಿಲ್ಲೆ ರಚನೆ ವಿರೋಧಿಸಿ ವಿವಿಧ ಸಂಘಟನೆಗಳು ನವೆಂಬರ್ 26ರಂದು ಬಳ್ಳಾರಿ ಬಂದ್ ಕರೆ ನೀಡಿರುವುದಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಅವರು ಸರ್ಕಾರದ ಭಾಗವಾಗಿ ನೇರವಾಗಿ ಬೆಂಬಲಿಸಲ್ಲ. ಅವರ ಬಂದ್ ಯಶಸ್ವಿಯಾಗಲಿ ಎಂದು ಆಶಿಸಿದರು.
ಜಿಲ್ಲೆಯಲ್ಲಿ ವಿಧಾನಪರಿಷತ್ ಸದಸ್ಯ ಕೊಂಡಯ್ಯ ಬಿಟ್ಟರೇ ಬೇರೆ ಯಾರು ಇಬ್ಭಾಗಕ್ಕೆ ಬೆಂಬಲಿಸಿಲ್ಲ.‌ಸಚಿವ
ಶ್ರೀರಾಮುಲು ಸಹಮತ ವ್ಯಕ್ತಪಡಿಸಿರುವುದು ಅವರು ವೈಯಕ್ತಿಕ ವಿಚಾರ ಎಂದರು.
ಜಾತಿಗೊಂದು ನಿಗಮ ಮಾಡುವುದು ಸರಿಯಲ್ಲ.ನಿಗಮದ ಬದಲಿಗೆ ಸರಕಾರವು ಎಲ್ಲ ಜಾತಿಗಳಲ್ಲಿನ ಬಡಜನರಿಗೆ ಸಹಾಯ ಮಾಡುವ ಕೆಲಸ ಮಾಡಲಿ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಶ್ರೀನಿವಾಸ್ ಮೋತ್ಕರ್ ಮತ್ತಿತರರು ಇದ್ದರು.

Advertise

ನಿಮ್ಮ ಅನಿಸಿಕೆ ತಿಳಿಸಿ

Read More News

ಬೈಕ್ ಕಳ್ಳರ ಬಂಧನ

ಯರಗಟ್ಟಿ : ಬೈಕ್ ಕದಿಯುತ್ತಿದ್ದ ಇಬ್ಬರು ಕಳ್ಳರನ್ನು ಮುರಗೋಡ ಪೋಲಿಸರು ಬಂಧಿಸಿದ್ದು ಆರು (6) ಬೈಕ್ ವಶಪಡಿಸಿಕೊಂಡಿದ್ದಾರೆ.
ಯರಗಟ್ಟಿ ನಗರ ಮತ್ತು ಹಲವು...

Read More

28-11-2020 08:38 PM

ಪರಿತ್ಯಕ್ತ ಗಂಡು ಮಗು ರಕ್ಷಣೆ

ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆಯ ಸಂಚಾರಿ ಆರೋಗ್ಯ ಘಟಕದ ಸಿಬ್ಬಂದಿಗಳು ಪರಿತ್ಯಕ್ತ ಗಂಡು ಮಗುವನ್ನು ರಕ್ಷಣೆ ಮಾಡಿ ಜಿಲ್ಲಾಸ್ಪತ್ರೆಗೆ ದಾಖಲು...

Read More

28-11-2020 08:37 PM

ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಆಧ್ಯತೆ ನೀಡಿ : ಸುಂದರೇಶ ಬಾಬು

ಗದಗ ೨೮ : ಜಿಲ್ಲೆಯ ಪುರಸಭೆ, ಪಟ್ಟಣ ಪಂಚಾಯತ್, ನಗರಸಭೆಯಲ್ಲಿ ಸಾರ್ವಜನಿಕರಿಗೆ ಆಧ್ಯತೆ ಮೇರೆಗೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಜಿಲ್ಲಾಧಿಕಾರಿ ಎಂ....

Read More

28-11-2020 08:25 PM

ಸಚಿನ್ ಪೈಲಟ್ ಆರೋಗ್ಯ ಸ್ಥಿತಿ ಗಂಭೀರ

ಜೈಪುರ : ಕೊರೋನಾ ಸೋಂಕಿನಿಂದ ಬಳಲುತ್ತಿರುವ ರಾಜಸ್ಥಾನದ ಮಾಜಿ ಡಿಸಿಎಂ ಸಚಿನ್ ಪೈಲಟ್ ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಕೊರೊನಾದಿಂದ ಪೈಲಟ್...

Read More

28-11-2020 08:09 PM

ಕುರುಬ ಸಮುದಾಯ ಎಸ್‍ಟಿಗೆ ಸೇರಿಸಬೇಕು ಇಲ್ಲದೇ ಹೋದ್ರೆ ಉಗ್ರ ಹೋರಾಟ : ನಿರಂಜನಾನಂದಪುರಿ ಸ್ವಾಮೀಜಿ

ಬೆಳಗಾವಿ : ಕುರುಬ ಸಮುದಾಯಕ್ಕೆ ಎಸ್‍ಟಿ ಸೌಲಭ್ಯಕ್ಕಾಗಿ ಆಗ್ರಹಿಸಿ ಒಗ್ಗಟ್ಟಾಗಿರುವ ಸಮಾಜದ ಸ್ವಾಮೀಜಿಗಳು, ಜನಪ್ರತಿನಿಧಿಗಳು, ಮುಖಂಡರು. ಇಲ್ಲಿ ಸೇರಿರುವ...

Read More

28-11-2020 07:57 PM

Read More
×E-Paperಸಾಹಿತ್ಯGeneralVideos