whatsapp facebooktwitter

ವರ್ಗಾವಣೆಯಲ್ಲಿನ ಅವೈಜ್ಞಾನಿಕ ನಿಯಮವನ್ನು ಕೈ ಬೀಡಬೇಕು: ತುಕಾರಾಮ ಲಮಾಣಿ

ವರ್ಗಾವಣೆಯಲ್ಲಿನ ಅವೈಜ್ಞಾನಿಕ ನಿಯಮವನ್ನು ಕೈ ಬೀಡಬೇಕು: ತುಕಾರಾಮ ಲಮಾಣಿ

21-11-2020 04:58 PM

ಬೆಳಗಾವಿ:ಶಿಕ್ಷಕರ ವರ್ಗಾವಣೆಯ ಮಾರ್ಗಸೂಚಿಯಲ್ಲಿ ವಿಕಲಚೇತನ ಶಿಕ್ಷಕರಿಗೆ ಸಂಬAಧಿಸಿದ ಅವೈಜ್ಞಾನಿಕ ನಿಯಮಗಳನ್ನು ಕೈ ಬೀಡಬೇಕು ಎಂದು ವಿಕಲಚೇತನ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಬಿ.ವೈ.ತಳವಾರ ಹೇಳಿದರು.
ಅವರು ವಿಕಲಚೇತನ ನೌಕರರ ಸಂಘದ ವತಿಯಿಂದ ಶಿಕ್ಷಕರ ವರ್ಗಾವಣೆಯಲ್ಲಿ ವಿಕಲಚೇತನ ಶಿಕ್ಷಕರಿಗೆ ಮಾರಕವಾದ ಅಂಶಗಳನ್ನು ಕೈ ಬಿಡುವಂತೆ ಒತ್ತಾಯಿಸಿ ಮನವಿ ಕೊಡುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ,ಪ್ರಸಕ್ತ ಸಾಲೀನ ಶಿಕ್ಷಕರ ವರ್ಗಾವಣೆಯ ಮಾರ್ಗಸೂಚಿಯಲ್ಲಿ ವಿಕಲಚೇತನ ಶಿಕ್ಷಕರು ತಮ್ಮ ಸೇವಾ ಅವಧಿಯಲ್ಲಿ ಕೇವಲ ಒಂದು ಬಾರಿ ಮಾತ್ರ ವಿಕಲಚೇತನರ ಮೀಸಲಾತಿಯನ್ನು ಬಳಿಸಿಕೊಂಡು ವರ್ಗಾವಣೆಯಾಗಬೇಕು ಮತ್ತೊಂದು ಅವದಿಗೆ ವರ್ಗಾವಣೆಗೆ ಅರ್ಜಿ ಸಲ್ಲಿಸಿದ ಸಮಯದಲ್ಲಿ ವಿಕಲಚೇತನ ಮೀಸಲಾತಿಯು ಅನ್ವಯವಾಗುವುದಿಲ್ಲ ಎಂಬ ಅವೈಜ್ಞಾನಿಕ ನಿಯಮವನ್ನು ಅಳವಡಿಸಲಾಗಿದೆ ಅಲ್ಲದೇ ವಿಕಲಚೇತನ ಶಿಕ್ಷಕರು ನೇಮಕಾತಿಯ ಪೂರ್ವದಲ್ಲಿ ಅಂಗವಿಕಲತೆಗೆ ಸಂಬAಧಪಟ್ಟ ವೈದ್ಯಕೀಯ ಪ್ರಮಾಣ ಪತ್ರವು ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಯ ಜಿಲ್ಲಾ ಆಸ್ಪತ್ರೆಯಲ್ಲಿ ನೈಜತೆಯ ಕುರಿತು ವರದಿ ಬಂದ ನಂತರವೇ ನೇಮಕಾತಿ ಆದೇಶವನ್ನು ನೀಡುತ್ತಾರೆ.ನೇಮಕಾತಿ ಹೊಂದಿದ ನಂತರ ವಿಕಲಚೇತನ ನೌಕರರಿಗೆ ಇರುವ ಎಲ್ಲಾ ಸೌಲಭ್ಯವನ್ನು ವೇತನದಲ್ಲಿ ನೀಡುವುದರ ಜೊತೆಗೆ ಸಾಮಾನ್ಯ ನಾಗರಿಕರಿಗೆ ಯಾವ ರೀತಿಯಲ್ಲಿ ಇಡೀ

Advertise

ದೇಶಕ್ಕೆ ಒಂದು ರೀತಿಯ ಗುರುತಿನ ಕಾರ್ಡ ಇರಲಿ ಎಂಬ ಉದ್ದೇಶದಿಂದ ಆಧಾರ ಕಾರ್ಡ ಯೋಜನೆಯನ್ನು ಜಾರಿಗೆ ತರಲಾಗಿದಿಯೋ ಅದೇ ರೀತಿಯಲ್ಲಿ ದೇಶದ ಎಲ್ಲಾ ವಿಕಲಚೇತನರಿಗೆ ಒಂದೇ ರೀತಿಯ ಗುರುತಿನ ಕಾರ್ಡ ಸಲುವಾಗಿ ವಿಕಲಚೇತನರ ವಿಶಿಷ್ಟ ಗುರುತಿನ (ಯು.ಡಿ.ಐ.ಡಿ)ಕಾರ್ಡ ಜಾರಿಗೆ ತಂದಿದೆ.ಯು.ಡಿ.ಐ.ಡಿ.ಕಾರ್ಡ ಎಲ್ಲಾ ಸೌಲಭ್ಯಗಳಿಗೆ ಅನ್ವಯವಾಗುತ್ತದೆ ಎಂಬ ನಿಯಮವಿದ್ದರು ಕೂಡಾ ಶಿಕ್ಷಣ ಇಲಾಖೆಯು ಶಿಕ್ಷಕರ ವರ್ಗಾವಣೆಯಲ್ಲಿ ೧ ನೇ ಆಗಸ್ಟ್ ೨೦೨೦ರ ನಂತರ ಪಡೆದ ತ್ರಿಸದಸ್ಯರ ಅಂಗವೈಕಲ್ಯತೆಯ ಪ್ರಮಾಣ ಪತ್ರವನ್ನು ತರಬೇಕು ಎಂಬುದನ್ನು ಅವೈಜ್ಞಾನಿಕ ನಿಯಮವನ್ನು ಸರಕಾರವು ಕೈ ಬೀಡಬೇಕು.ಒಂದು ವೇಳೆ ನಿಯಮವನ್ನು ಸರಳಿಕರಣ ಮಾಡದಿದ್ದ ಪಕ್ಷದಲ್ಲಿ ನಮಗೆ ಆಗೀರುವ ಅನ್ಯಾಯದ ವಿರುದ್ದ ಕೋರ್ಟನಲ್ಲಿ ತಡೆಯಾಜ್ಞೆ ತರಲಾಗುತ್ತದೆ ಎಂದು ಹೇಳಿದರು.
ಮನವಿ ಸ್ವೀಕರಿಸಿದ ಬಳಿಕÀ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾತನಾಡಿ,ವಿಕಲಚೇತನ ಶಿಕ್ಷಕರ ಬೇಡಿಕೆಗಳು ನ್ಯಾಯಯುತವಾಗಿದ್ದು,ಅವುಗಳ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಕಳುಹಿಸಿ ಕೊಡಲಾಗುತ್ತದೆ ಎಂದು ಹೇಳಿದರು.
ಈ ಸಮಯದಲ್ಲಿ ವಿಕಲಚೇತನ ನೌಕರರ ಸಂಘದ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಎಂ.ವಾಯ್.ಸಾAಬ್ರೆಕರ್,ಜಿಲ್ಲಾ ಗೌರವಾಧ್ಯಕ್ಷರಾದ ಎಸ್.ಎಂ.ದಿವಟಗಿ,ಕಾರ್ಯದರ್ಶಿ ಎಂ.ಎನ್.ವಾಲಿಕಾರ,ಸAಘಟನಾ ಕಾರ್ಯುದರ್ಶಿ ಎಂ.ಬಿ.ಮರಲಕ್ಕನ್ನವರ,ಸಹ ಕಾರ್ಯದರ್ಶಿ ಅಂಜನಾ ಪಾಟೀಲ ಮುಂತಾದವರು ಹಾಜರಿದ್ದರು.

Advertise

ನಿಮ್ಮ ಅನಿಸಿಕೆ ತಿಳಿಸಿ

Read More News

ಬೈಕ್ ಕಳ್ಳರ ಬಂಧನ

ಯರಗಟ್ಟಿ : ಬೈಕ್ ಕದಿಯುತ್ತಿದ್ದ ಇಬ್ಬರು ಕಳ್ಳರನ್ನು ಮುರಗೋಡ ಪೋಲಿಸರು ಬಂಧಿಸಿದ್ದು ಆರು (6) ಬೈಕ್ ವಶಪಡಿಸಿಕೊಂಡಿದ್ದಾರೆ.
ಯರಗಟ್ಟಿ ನಗರ ಮತ್ತು ಹಲವು...

Read More

28-11-2020 08:38 PM

ಪರಿತ್ಯಕ್ತ ಗಂಡು ಮಗು ರಕ್ಷಣೆ

ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆಯ ಸಂಚಾರಿ ಆರೋಗ್ಯ ಘಟಕದ ಸಿಬ್ಬಂದಿಗಳು ಪರಿತ್ಯಕ್ತ ಗಂಡು ಮಗುವನ್ನು ರಕ್ಷಣೆ ಮಾಡಿ ಜಿಲ್ಲಾಸ್ಪತ್ರೆಗೆ ದಾಖಲು...

Read More

28-11-2020 08:37 PM

ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಆಧ್ಯತೆ ನೀಡಿ : ಸುಂದರೇಶ ಬಾಬು

ಗದಗ ೨೮ : ಜಿಲ್ಲೆಯ ಪುರಸಭೆ, ಪಟ್ಟಣ ಪಂಚಾಯತ್, ನಗರಸಭೆಯಲ್ಲಿ ಸಾರ್ವಜನಿಕರಿಗೆ ಆಧ್ಯತೆ ಮೇರೆಗೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಜಿಲ್ಲಾಧಿಕಾರಿ ಎಂ....

Read More

28-11-2020 08:25 PM

ಸಚಿನ್ ಪೈಲಟ್ ಆರೋಗ್ಯ ಸ್ಥಿತಿ ಗಂಭೀರ

ಜೈಪುರ : ಕೊರೋನಾ ಸೋಂಕಿನಿಂದ ಬಳಲುತ್ತಿರುವ ರಾಜಸ್ಥಾನದ ಮಾಜಿ ಡಿಸಿಎಂ ಸಚಿನ್ ಪೈಲಟ್ ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಕೊರೊನಾದಿಂದ ಪೈಲಟ್...

Read More

28-11-2020 08:09 PM

ಕುರುಬ ಸಮುದಾಯ ಎಸ್‍ಟಿಗೆ ಸೇರಿಸಬೇಕು ಇಲ್ಲದೇ ಹೋದ್ರೆ ಉಗ್ರ ಹೋರಾಟ : ನಿರಂಜನಾನಂದಪುರಿ ಸ್ವಾಮೀಜಿ

ಬೆಳಗಾವಿ : ಕುರುಬ ಸಮುದಾಯಕ್ಕೆ ಎಸ್‍ಟಿ ಸೌಲಭ್ಯಕ್ಕಾಗಿ ಆಗ್ರಹಿಸಿ ಒಗ್ಗಟ್ಟಾಗಿರುವ ಸಮಾಜದ ಸ್ವಾಮೀಜಿಗಳು, ಜನಪ್ರತಿನಿಧಿಗಳು, ಮುಖಂಡರು. ಇಲ್ಲಿ ಸೇರಿರುವ...

Read More

28-11-2020 07:57 PM

Read More
×E-Paperಸಾಹಿತ್ಯGeneralVideos