whatsapp facebooktwitter

ಸರ್ಕಾರ ನಿರ್ಮಿಸಿ ಕೊಟ್ಟ ಮನೆ ಸದುಪಯೋಗಕ್ಕೆ ಕರೆ : ಸಚಿವ ಸಿ ಸಿ ಪಾಟೀಲ

ಸರ್ಕಾರ ನಿರ್ಮಿಸಿ ಕೊಟ್ಟ ಮನೆ ಸದುಪಯೋಗಕ್ಕೆ ಕರೆ : ಸಚಿವ ಸಿ ಸಿ ಪಾಟೀಲ

21-11-2020 07:47 PM

ನರಗುಂದ 21: ನೆರೆ ಸಂತ್ರಸ್ತರಿಗಾಗಿ ಸರ್ಕಾರ 14 ಸ್ಥಳಾಂತರ ಗ್ರಾಮಗಳ ಕುಟುಂಬಗಳಿಗೆ ಸುಮಾರು 8,000 ಮನೆಗಳನ್ನು ನಿರ್ಮಿಸಿಕೊಟ್ಟಿದೆ. ಸರ್ಕಾರ ನಿರ್ಮಿಸಿಕೊಟ್ಟ ಈ ಮನೆಗಳ ಸದುಪಯೋಗಪಡಿಸಿಕೊಳ್ಳುವಂತೆ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ತಿಳಿಸಿದರು.
ಅವರು ನರಗುಂದ ತಾಲೂಕಿನ ಕುರ್ಲಗೇರಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಶನಿವಾರ ಆಯೋಜಿಸಲಾದ ನರಗುಂದ -ಕುರ್ಲಗೇರಿ- ಗದಗ ರಸ್ತೆ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಅರಭಾವಿ ಚಳ್ಳಕೇರಿ ರಾಷ್ಟಿçÃಯ ಹೆದ್ದಾರಿ 45 ರ ಕಿ.ಮೀ 90 ರಿಂದ 94.60 ರವರೆಗೆ ರಸ್ತೆ ಸುಧಾರಣೆ (ನರಗುಂದದಿAದ ಕುರ್ಲಗೇರಿವರೆಗೆ) ಅಂದಾಜು 5 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು ಗ್ರಾಮಸ್ಥರು ಉತ್ತಮ ಕಾಮಗಾರಿ ನಡೆಯುವಂತೆ ನಿಗಾವಹಿಸಬೇಕು ಎಂದರು.
ಸ್ಥಳಾಂತರ ಗ್ರಾಮಗಳ ನಿವಾಸಿಗಳಿಗೆ ನಿರ್ಮಿಸಲಾದ ಮನೆಗಳನ್ನು ಸೌಹಾರ್ದತೆಯಿಂದ ಎಲ್ಲರೂ ಸೇರಿಕೊಂಡು ಮನೆ ಹಂಚಿಕೆ ಮಾಡಿಕೊಳ್ಳುವ ಮೂಲಕ ಸರ್ಕಾರ ನಿರ್ಮಿಸಿಕೊಟ್ಟ ಮನೆಗಳನ್ನು ಸದ್ಭಳಕೆ ಮಾಡಿಕೊಳ್ಳಲು ತಿಳಿಸಿದರು. ಕೆಲವು ಕುಟುಂಬಗಳಿಗೆ ಮನೆ

Advertise

ಹಂಚಿಕೆಯಲ್ಲಿ ಕೊರತೆ ಅಥವಾ ಕಡಿಮೆ ಆದಲ್ಲಿ ಮುಂದಿನ ದಿನಗಳಲ್ಲಿ ಅವರಿಗೂ ಸಹ ಮನೆ ನಿರ್ಮಿಸಿಕೊಡಲು ಸರ್ಕಾರ ಸಿದ್ಧವಿದೆ ಎಂದು ತಿಳಿಸುತ್ತಾ ಸರ್ಕಾರ ಸದಾ ನಿಮ್ಮೊಂದಿಗಿದೆ ಎಂಬುದಾಗಿ ಹೇಳಿದರು.
ಕುರ್ಲಗೇರಿ ನಿವಾಸಿಗಳ ಬೇಡಿಕೆಯಾದ ಸೇತುವೆ ನಿರ್ಮಾಣ , ರಸ್ತೆನಿರ್ಮಾಣ ಕಾಮಗಾರಿಗಳನ್ನು ಮುಂದಿನ ಹಂತದಲ್ಲಿ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ರೇಣುಕಾ ಅವರಾದಿ, ಶಾಲೆಯ ಎಸ್.ಡಿ.ಎಮ್.ಸಿ. ಅಧ್ಯಕ್ಷ ಶಂಕರಪ್ಪ ಬ್ಯಾಹಟ್ಟಿ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಎಮ್.ಎಸ್. ಪಾಟೀಲ, ಮುದುಕಯ್ಯ ಹಿರೇಮಠ, ಬಸವರಾಜ ಬ್ಯಾಹಟ್ಟಿ, ಈಶ್ವರಗೌಡ ಪಾಟೀಲ, ಗ್ರಾಮ ಪಂಚಾಯತ್ ಅಧ್ಯಕ್ಷರು , ತಹಶೀಲ್ದಾರ ಮಹೇಂದ್ರ ಶಿಕ್ಷಕ ಎಸ್.ಪಿ.ದೊಡ್ಡಮನಿ ಸೇರಿದಂತೆ ಇತರರು ಇದ್ದರು.
ಬಾಕ್ಸ್ : ಕಲಗೇರಿ - ಕಣಕಿಕೊಪ್ಪ ದಿಂದ ನರಗುಂದ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಹಿರೇಹಳ್ಳ ಸೇತುವೆ ನಿರ್ಮಾಣ ಕಾಮಗಾರಿಗೆ ಸಚಿವ ಸಿ.ಸಿ.ಪಾಟೀಲ ಅವರು ಭೂಮಿ ಪೂಜೆ ನೆರವೇರಿಸಿದರು. ಈ ಕಾಮಗಾರಿಯು ಅಂದಾಜು 185 ಲಕ್ಷ ರೂ ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

Advertise

ನಿಮ್ಮ ಅನಿಸಿಕೆ ತಿಳಿಸಿ

Read More News

ಬೈಕ್ ಕಳ್ಳರ ಬಂಧನ

ಯರಗಟ್ಟಿ : ಬೈಕ್ ಕದಿಯುತ್ತಿದ್ದ ಇಬ್ಬರು ಕಳ್ಳರನ್ನು ಮುರಗೋಡ ಪೋಲಿಸರು ಬಂಧಿಸಿದ್ದು ಆರು (6) ಬೈಕ್ ವಶಪಡಿಸಿಕೊಂಡಿದ್ದಾರೆ.
ಯರಗಟ್ಟಿ ನಗರ ಮತ್ತು ಹಲವು...

Read More

28-11-2020 08:38 PM

ಪರಿತ್ಯಕ್ತ ಗಂಡು ಮಗು ರಕ್ಷಣೆ

ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆಯ ಸಂಚಾರಿ ಆರೋಗ್ಯ ಘಟಕದ ಸಿಬ್ಬಂದಿಗಳು ಪರಿತ್ಯಕ್ತ ಗಂಡು ಮಗುವನ್ನು ರಕ್ಷಣೆ ಮಾಡಿ ಜಿಲ್ಲಾಸ್ಪತ್ರೆಗೆ ದಾಖಲು...

Read More

28-11-2020 08:37 PM

ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಆಧ್ಯತೆ ನೀಡಿ : ಸುಂದರೇಶ ಬಾಬು

ಗದಗ ೨೮ : ಜಿಲ್ಲೆಯ ಪುರಸಭೆ, ಪಟ್ಟಣ ಪಂಚಾಯತ್, ನಗರಸಭೆಯಲ್ಲಿ ಸಾರ್ವಜನಿಕರಿಗೆ ಆಧ್ಯತೆ ಮೇರೆಗೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಜಿಲ್ಲಾಧಿಕಾರಿ ಎಂ....

Read More

28-11-2020 08:25 PM

ಸಚಿನ್ ಪೈಲಟ್ ಆರೋಗ್ಯ ಸ್ಥಿತಿ ಗಂಭೀರ

ಜೈಪುರ : ಕೊರೋನಾ ಸೋಂಕಿನಿಂದ ಬಳಲುತ್ತಿರುವ ರಾಜಸ್ಥಾನದ ಮಾಜಿ ಡಿಸಿಎಂ ಸಚಿನ್ ಪೈಲಟ್ ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಕೊರೊನಾದಿಂದ ಪೈಲಟ್...

Read More

28-11-2020 08:09 PM

ಕುರುಬ ಸಮುದಾಯ ಎಸ್‍ಟಿಗೆ ಸೇರಿಸಬೇಕು ಇಲ್ಲದೇ ಹೋದ್ರೆ ಉಗ್ರ ಹೋರಾಟ : ನಿರಂಜನಾನಂದಪುರಿ ಸ್ವಾಮೀಜಿ

ಬೆಳಗಾವಿ : ಕುರುಬ ಸಮುದಾಯಕ್ಕೆ ಎಸ್‍ಟಿ ಸೌಲಭ್ಯಕ್ಕಾಗಿ ಆಗ್ರಹಿಸಿ ಒಗ್ಗಟ್ಟಾಗಿರುವ ಸಮಾಜದ ಸ್ವಾಮೀಜಿಗಳು, ಜನಪ್ರತಿನಿಧಿಗಳು, ಮುಖಂಡರು. ಇಲ್ಲಿ ಸೇರಿರುವ...

Read More

28-11-2020 07:57 PM

Read More
×E-Paperಸಾಹಿತ್ಯGeneralVideos