whatsapp facebooktwitter

ಕಾನೂನು ಬದ್ಧ ಮಕ್ಕಳ ದತ್ತು ಪಡೆಯುವುದು-ಮಕ್ಕಳನ್ನು ಅನಾಥ ಪ್ರಜ್ಞೆಯಿಂದ ಕಾಪಾಡುತ್ತದೆ : ಎಸ್.ಜಿ.ಸಲಗರೆ

ಕಾನೂನು ಬದ್ಧ ಮಕ್ಕಳ ದತ್ತು ಪಡೆಯುವುದು-ಮಕ್ಕಳನ್ನು ಅನಾಥ ಪ್ರಜ್ಞೆಯಿಂದ ಕಾಪಾಡುತ್ತದೆ : ಎಸ್.ಜಿ.ಸಲಗರೆ

21-11-2020 07:49 PM

ಗದಗ ೨೧ : ಕಾನೂನು ಬದ್ಧವಾಗಿ ಮಕ್ಕಳನ್ನು ದತ್ತು ಪಡೆಯುವದರಿಂದ ಮಕ್ಕಳಲ್ಲಿಯ ಅನಾಥ ಪ್ರಜ್ಞೆ ತೊಲಗುತ್ತದೆ. ದತ್ತು ಪಡೆಯುವ ಪಾಲಕರು ಮಗುವಿಗೆ ಪುರ್ನಜನ್ಮ ನೀಡಿದಂತೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ. ಸಲಗರೆ ತಿಳಿಸಿದರು.
ಅವರು ದಿ:೨೦ ರಂದು ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಗದಗ ಇವರ ಸಹಯೋಗದಲ್ಲಿ ದತ್ತು ಮಾಸಾಚರಣೆ ನವ್ಹೆಂಬರ್ ೨೦೨೦ರ ಪ್ರಯುಕ್ತ ದತ್ತು ಆಕಾಂಕ್ಷಿ ಪಾಲಕರಿಗೆ ದತ್ತು ಕಾರ್ಯಕ್ರಮ ಕುರಿತು ಸಮಾಲೋಚನ ಕಾರ್ಯಕ್ರಮವನ್ನು ಬಾಲಕರ ಸರಕಾರಿ ಬಾಲಮಂದಿರಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ಮಕ್ಕಳು ಇಂದಿನ ಪ್ರಜೆಗಳು. ಸಂವಿಧಾನದಲ್ಲಿ ಮಕ್ಕಳಿಗೆ ಹಕ್ಕುಗಳನ್ನು ಕೊಟ್ಟಿದ್ದು ಆ ಹಕ್ಕುಗಳು ಪ್ರತಿ ಮಗುವಿಗೆ ತಲುಪುವಂತಾಗಬೇಕು. ಜೊತೆಗೆ ಹಕ್ಕುಗಳ ಬಗ್ಗೆ ಗ್ರಾಮಸಭೆಗಳಲ್ಲಿ ಈಗಾಗಲೇ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಪಂಚಾಯತ, ಮಕ್ಕಳ ಸಹಾಯವಾಣಿ ಇವರು ಇದರ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ದತ್ತು ಆಕಾಂಕ್ಷಿ ಪಾಲಕರು ದತ್ತು ಪಡೆಯಲು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ನಿರ್ಗತಿಕ ಮಕ್ಕಳು, ರಕ್ಷಣೆ ಅವಶ್ಯವಿರುವ ಮಕ್ಕಳು ಸಾರ್ವಜನಿಕರಿಗೆ ಕಂಡು ಬಂದಲ್ಲಿ ಸರ್ಕಾರದ ಸೌಲಭ್ಯವನ್ನು ಆ ಮಕ್ಕಳಿಗೆ ಕೊಡಿಸಬೇಕು ಎಂದು ಎಸ್.ಜಿ. ಸಲಗರೆ ತಿಳಿಸಿದರು.
ಬಾಲನ್ಯಾಯ ಮಂಡಳಿ ಅಧ್ಯಕ್ಷರು ಹಾಗೂ ಪ್ರಧಾನ ದಿವಾಣಿ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಧೀಶರು ಮಾನ್ಯ ಎ.ಎಮ್. ಬಡಿಗೇರ ಮತನಾಡುತ್ತಾ ಹಿಂದಿನ ಪೂರ್ವಜರು ತಾವು ಇಚ್ಛೆಪಟ್ಟಾಗ ಪರಿಚಯ ಇದ್ದವರಿಂದ, ಸಂಬಂದಿಕರಲ್ಲಿ ಮಕ್ಕಳನ್ನು ದತ್ತು ಪಡೆಯುತ್ತಿದ್ದರು. ಬಾಲನ್ಯಾಯ

Advertise

ಕಾಯ್ದೆ ೨೦೧೫ರಲ್ಲಿ ಕಾಯ್ದೆಯನ್ನು ಸಡಿಲಗೊಳಿಸಿ ಮಕ್ಕಳ ಹಿಂಸೆ, ದೌರ್ಜನ್ಯ ತಡೆಗಟ್ಟುವ ಸಲುವಾಗಿ ಷರತ್ತುಗಳನ್ನು ಹಾಕಿರುತ್ತಾರೆ. ದತ್ತು ಆಕಾಂಕ್ಷಿ ಪಾಲಕರು ಷರತ್ತುಗಳಿಗೆ ಒಳಪಟ್ಟು ಮಕ್ಕಳ ರಕ್ಷಣೆಯನ್ನು ಮಾಡಬೇಕೆಂದು ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅವಿನಾಶಲಿಂಗ ಗೋಟಖಿಂಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ದತ್ತು ಪ್ರಕ್ರಿಯೆ ಸರಳೀಕರಣ ಮಾಡಬೇಕು. ಮತ್ತು ಪಾಲಕರಲ್ಲಿ ಇರುವ ಗೊಂದಲಗಳನ್ನು ನಿವಾರಣೆ ಮಾಡುವ ದೃಷ್ಠಿಯಿಂದ ದತ್ತು ಕಾರ್ಯಕ್ರಮ ಕುರಿತು ಸಮಾಲೋಚನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ದತ್ತು ಆಕಾಂಕ್ಷಿ ಪಾಲಕರಿಗೆ ದತ್ತು ಪಡೆದುಕೊಳ್ಳುವ ನಿಯಮಗಳ ಬಗ್ಗೆ, ತಂತ್ರಾಶದಲ್ಲಿ ಮಾಹಿತಿ ಅಳವಡಿಸುವ ಬಗ್ಗೆ, ಹಾಗೂ ಅದಕ್ಕೆ ಬೇಕಾಗುವ ಪೂರಕ ದಾಖಲೆಗಳ ಬಗ್ಗೆ ಮಾಹಿತಿ ಕೊಟ್ಟು ಪಾಲಕರಿಗೆ ಆತ್ಮವಿಶ್ವಾಸ ಮೂಡಿಸುವ ಕುರಿತು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್ ಎ , ಮಕ್ಕಳ ಕಲ್ಯಾಣ ಸಮಿತಿ, ಅಧ್ಯಕ್ಷ ಮಂಜುನಾಥ ಬಮ್ಮನಕಟ್ಟಿ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರುಗಳಾದ ಸಿ.ಎಸ್.ಬೊಮ್ಮನಹಳ್ಳಿ, ಶ್ರೀ ಆರ್.ಸಿ ಹುಣಸಿಮರದ, ಶ್ರೀಮತಿ. ಅನ್ನಪೂರ್ಣ ಗಾಣಿಗೇರ ಬಾಲನ್ಯಾಯ ಮಂಡಳಿ ಸದಸ್ಯರಾದ ಜಿ.ಸಿ. ರೇಷ್ಮಿ, ಶ್ರೀಮತಿ ಕೆ.ಎಂ. ಶಲವಡಿ ಶ್ರೀ. ಮಲ್ಲಿಕಾರ್ಜುನ ಬೆಲ್ಲದ ಸೇವಾ ಭಾರತಿ ಟ್ರಸ್ಟ್ ಅಮೂಲ್ಯ(ಪಿ) ವಿಶೇಷ ದತ್ತು ಕೇಂದ್ರ, ಶ್ರೀಮತಿ. ಎಲ್. ಡಿ. ಬಾಗೇವಾಡಿ ಅಧೀಕ್ಷಕರು, ಬಾಲಕಿಯರ ಸರಕಾರಿ ಬಾಲಮಂದಿರ ಗದಗ ಹಾಗೂ ಬಾಲಕರ ಬಾಲಮಂದಿರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ೪೦ಕ್ಕೂ ಹೆಚ್ಚು ದತ್ತು ಆಕಾಂಕ್ಷಿ ಪಾಲಕರು ಭಾಗವಹಿಸಿದ್ದರು. ಶ್ರೀ ಆಯ್.ಕೆ. ಮಣಕವಾಡ ಇವರು ಸ್ವಾಗತಿಸಿ ವಂದಿಸಿದರು.

Advertise

ನಿಮ್ಮ ಅನಿಸಿಕೆ ತಿಳಿಸಿ

Read More News

ಬೈಕ್ ಕಳ್ಳರ ಬಂಧನ

ಯರಗಟ್ಟಿ : ಬೈಕ್ ಕದಿಯುತ್ತಿದ್ದ ಇಬ್ಬರು ಕಳ್ಳರನ್ನು ಮುರಗೋಡ ಪೋಲಿಸರು ಬಂಧಿಸಿದ್ದು ಆರು (6) ಬೈಕ್ ವಶಪಡಿಸಿಕೊಂಡಿದ್ದಾರೆ.
ಯರಗಟ್ಟಿ ನಗರ ಮತ್ತು ಹಲವು...

Read More

28-11-2020 08:38 PM

ಪರಿತ್ಯಕ್ತ ಗಂಡು ಮಗು ರಕ್ಷಣೆ

ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆಯ ಸಂಚಾರಿ ಆರೋಗ್ಯ ಘಟಕದ ಸಿಬ್ಬಂದಿಗಳು ಪರಿತ್ಯಕ್ತ ಗಂಡು ಮಗುವನ್ನು ರಕ್ಷಣೆ ಮಾಡಿ ಜಿಲ್ಲಾಸ್ಪತ್ರೆಗೆ ದಾಖಲು...

Read More

28-11-2020 08:37 PM

ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಆಧ್ಯತೆ ನೀಡಿ : ಸುಂದರೇಶ ಬಾಬು

ಗದಗ ೨೮ : ಜಿಲ್ಲೆಯ ಪುರಸಭೆ, ಪಟ್ಟಣ ಪಂಚಾಯತ್, ನಗರಸಭೆಯಲ್ಲಿ ಸಾರ್ವಜನಿಕರಿಗೆ ಆಧ್ಯತೆ ಮೇರೆಗೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಜಿಲ್ಲಾಧಿಕಾರಿ ಎಂ....

Read More

28-11-2020 08:25 PM

ಸಚಿನ್ ಪೈಲಟ್ ಆರೋಗ್ಯ ಸ್ಥಿತಿ ಗಂಭೀರ

ಜೈಪುರ : ಕೊರೋನಾ ಸೋಂಕಿನಿಂದ ಬಳಲುತ್ತಿರುವ ರಾಜಸ್ಥಾನದ ಮಾಜಿ ಡಿಸಿಎಂ ಸಚಿನ್ ಪೈಲಟ್ ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಕೊರೊನಾದಿಂದ ಪೈಲಟ್...

Read More

28-11-2020 08:09 PM

ಕುರುಬ ಸಮುದಾಯ ಎಸ್‍ಟಿಗೆ ಸೇರಿಸಬೇಕು ಇಲ್ಲದೇ ಹೋದ್ರೆ ಉಗ್ರ ಹೋರಾಟ : ನಿರಂಜನಾನಂದಪುರಿ ಸ್ವಾಮೀಜಿ

ಬೆಳಗಾವಿ : ಕುರುಬ ಸಮುದಾಯಕ್ಕೆ ಎಸ್‍ಟಿ ಸೌಲಭ್ಯಕ್ಕಾಗಿ ಆಗ್ರಹಿಸಿ ಒಗ್ಗಟ್ಟಾಗಿರುವ ಸಮಾಜದ ಸ್ವಾಮೀಜಿಗಳು, ಜನಪ್ರತಿನಿಧಿಗಳು, ಮುಖಂಡರು. ಇಲ್ಲಿ ಸೇರಿರುವ...

Read More

28-11-2020 07:57 PM

Read More
×E-Paperಸಾಹಿತ್ಯGeneralVideos